ನವದೆಹಲಿ: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಎರಡೂ ದೇಶಗಳ ಕಡೆ ಸಾಕಷ್ಟು ಸಾವು ನೋವು ಸಂಭವಿಸಿದ್ದು, ಇದರಿಂದ ಹೆಚ್ಚು ಹೊಡೆತ ಬಿದ್ದಿರೋದು ಮಾತ್ರ ಚೀನಾಗೆ.
ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ 2020ರ ಗಲ್ವಾನ್ ಘರ್ಷಣೆಯ ಬಳಿಕ ಕಳೆದೊಂದು ವರ್ಷದಲ್ಲಿ ಭಾರತದ ಶೇ.43 ರಷ್ಟು ಗ್ರಾಹಕರು ಚೀನಾದ ವಸ್ತುಗಳ ಖರೀದಿಸಿಲ್ಲ ಎಂದು ಇತ್ತೀಚೆಗೆ ಸಮೀಕ್ಷೆಯ ವರದಿಯೊಂದು ತಿಳಿಸಿತ್ತು. ಜೊತೆಗೆ ಚೀನಾ ಹೆಚ್ಚಿನ ಹಾನಿ ಅನುಭವಿಸಿತ್ತು ಎಂಬ ಮಾಹಿತಿಯಿತ್ತು. ಇದೀಗ ಚೀನಾ ಹೇಳಿಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಅನುಭವಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಗಲ್ವಾನ್ ಘರ್ಷಣೆ ವೇಳೆ ಬಲವಾದ ಪ್ರವಾಹದೊಂದಿಗೆ ನದಿಯನ್ನು ದಾಟುವ ಸಂದರ್ಭ ಅನೇಕ ಚೀನೀ ಸೈನಿಕರು ಸಮಸ್ಯೆಗೆ ಸಿಲುಕಿ ಸಾವನ್ನಪ್ಪಿದ್ದಾರೆಂಬ ಮಾಹಿತಿಯಿದೆ. ಆದರೆ ಭದ್ರತಾ ಕಾರಣಗಳಿಗಾಗಿ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ವರದಿ ಹೇಳಿದೆ.
ಹೌದು, ಆಸ್ಟ್ರೇಲಿಯಾದ ಪ್ರಮುಖ ಪ್ರತ್ರಿಕೆ ದಿ ಕ್ಲಾಕ್ಸನ್ (The Klaxon ) 2020ರ ಗಲ್ವಾನ್ ಘರ್ಷಣೆ ಘರ್ಷಣೆಯ ಕುರಿತಾಗಿ ತನಿಖಾ ವರದಿಯನ್ನು ಪ್ರಕಟಿಸಿದೆ. ಇದರ ಅನ್ವಯ ಈ ಘರ್ಷಣೆಯಲ್ಲಿ ಭಾರತಕ್ಕಿಂತ ಹೆಚ್ಚಾಗಿ ಚೀನಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ಪ್ರಮುಖವಾಗಿ ಹೊಡೆದಾಟಕ್ಕಿಂತ ಹೆಚ್ಚಾಗಿ ನದಿಯನ್ನು ದಾಟುವಾಗ ಕನಿಷ್ಠ 38 ಸೈನಿಕರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಗಲ್ವಾನ್ ಘರ್ಷಣೆಯ ಬಳಿಕ ಎಚ್ಚೆತ್ತ ಭಾರತ: ಚೀನಾದೊಂದಿಗೆ ಎಚ್ಚರಿಕೆಯ ಆರ್ಥಿಕ ಹೆಜ್ಜೆ ಇಟ್ಟ ಇಂಡಿಯಾ
ಜೂನ್ 15 -16ರಂದು ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಸೇರಿದಂತೆ 20 ಭಾರತೀಯ ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಿ ಪಿಎಲ್‌ಎ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾದರು. ಈ ಘರ್ಷಣೆಯಲ್ಲಿ ತನ್ನ ಐವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಚೀನಾ ಸಹ ಒಪ್ಪಿಕೊಂಡಿತ್ತು. ಇದೀಗ ಹೆಚ್ಚು ಸೈನಿಕರು ಹುತಾತ್ಮರಾಗಿರುವ ಬಗ್ಗೆ ವರದಿ ಪ್ರಕಟಗೊಂಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ