ETV Bharat / international

ಭಾರತದ ಮೇಲೆ ಚೀನಾ ಸಿಟ್ಟಿಗೆ ಕಾರಣ ಏನು?: ಸ್ವೀಡಿಷ್​ ಪತ್ರಕರ್ತ ಹೇಳೋದು ಕೇಳಿ!!

ಚೀನಾವು ತನ್ನ ಬಹುರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಬಿಆರ್​ಐನ್ನು ತಿರಸ್ಕರಿಸಿದ್ದರಿಂದಲೇ ಭಾರತಕ್ಕೆ ತಿರುಗೇಟು ನೀಡಲು ಚೀನಾ ಬಯಸಿತ್ತು ಎಂದು ಸ್ವೀಡಿಷ್​​​​​ ಪತ್ರಕರ್ತ ಬರ್ಟಿಲ್ ಲಿಂಟ್ನರ್ ತಿಳಿಸಿದ್ದಾರೆ.

india china border standoff news
ಚೀನಾ ಭಾರತ ಗಡಿ ವಿವಾದ
author img

By

Published : Jul 3, 2020, 3:09 PM IST

ನಾಯ್ಪಿಟಾವ್ : ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬಳಿಕ ಬಹುರಾಷ್ಟ್ರೀಯ ಮೂಲಸೌಕರ್ಯ ಕಾರ್ಯಕ್ರಮವಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್​ಐ) ನ್ನು ತಿರಸ್ಕರಿಸಿದ ಭಾರತಕ್ಕೆ ಪಾಠ ಕಲಿಸುವುದೇ ಚೀನಾದ ಉದ್ದೇಶವಾಗಿತ್ತು. ಇದನ್ನು ಬಿಟ್ಟರೆ ಚೀನಾಕ್ಕೆ ವಾಸ್ತವ ಗಡಿ ರೇಖೆಯಲ್ಲಿ ವಿವಾದ ಎಬ್ಬಿಸುವ ಇಚ್ಚೆ ಇರಲಿಲ್ಲ ಎಂದು ಸ್ವೀಡಿಷ್​ನ ಹಿರಿಯ ಪತ್ರಕರ್ತ ಬರ್ಟಿಲ್ ಲಿಂಟ್ನರ್ ತಿಳಿಸಿದ್ದಾರೆ.

ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಚೀನಾ ಕೊರೊನಾ ಪರಿಸ್ಥಿತಿಯ ಲಾಭ ಪಡೆಯುತ್ತಿದೆ. ಹೊಸ ಭದ್ರತಾ ಕಾನೂನಿನೊಂದಿಗೆ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ತನ್ನ ಸಾಮರ್ಥ್ಯವನ್ನು ಬಲಪಡಿಸಲು ಯೋಚಿಸುತ್ತಿದೆ. ಇದರ ಭಾಗವಾಗಿ, ಚೀನಾದ ಫೈಟರ್ ಜೆಟ್‌ಗಳು ತೈವಾನ್‌ನ ವಾಯುಪ್ರದೇಶಕ್ಕೆ ಪ್ರವೇಶಿಸಿದೆ. ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ‌ನ ರಮ್ಮಿಂಗ್, ಫಿಲಿಪೈನ್ ಮೀನುಗಾರಿಕೆ ದೋಣಿಗಳು, ಮಲೇಷ್ಯಾದ ತೈಲ ಪರಿಶೋಧನಾ ಹಡಗುಗಳನ್ನು ಒಂದು ತಿಂಗಳ ಕಾಲ ತಡೆ ಹಿಡಿದಿದೆ. ಜೊತೆಗೆ ಎಲ್​ಎಸಿಯಲ್ಲಿ ಭಾರತೀಯ ಸೈನ್ಯದೊಂದಿಗೆ ವಿವಾದ ಮಾಡಿಕೊಂಡಿದೆ ಎಂದು ಬರ್ಟಿಲ್ ಲಿಂಟ್ನರ್ ವಿಶ್ಲೇಷಿಸಿದ್ದಾರೆ.

ಇದು ಏಷ್ಯಾದ ಎರಡು ದೈತ್ಯರ ನಡುವಿನ ಕಾರ್ಯತಂತ್ರದ ಪೈಪೋಟಿಯ ಪ್ರಶ್ನೆಯಾಗಿದೆ ಮತ್ತು ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾವು ತನ್ನ ಬಹುರಾಷ್ಟ್ರೀಯ ಮೂಲಸೌಕರ್ಯ ಕಾರ್ಯಕ್ರಮವಾದ ಬಿಆರ್​ಐನ್ನು ತಿರಸ್ಕರಿಸಿದ ಭಾರತಕ್ಕೆ ತಿರುಗೇಟು ನೀಡಲು ಬಯಸಿದೆ. ಅಲ್ಲದೆ, ಆ ಪ್ರದೇಶವನ್ನು ಯಾರು ಆಳುತ್ತಿದ್ದಾರೆ ಎಂಬುವುದನ್ನು ನೆರೆಯ ರಾಷ್ಟ್ರಗಳಿಗೆ ತೋರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಚೀನಾ ವಿಶ್ವದ ಪ್ರಮುಖ ಸೂಪರ್ ಪವರ್ ಆಗಲು ಬಯಸಿದೆ. ಅದಕ್ಕಾಗಿ ಆಕ್ರಮಣಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.