ಬೀಜಿಂಗ್: ಮಾರಕ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಜಾಗತಿಕ ಹೋರಾಟವನ್ನು ತೀವ್ರಗೊಳಿಸಲು ಚೀನಾ 'ಇತರ ಎಲ್ಲ ದೇಶಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ' ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಡರಾತ್ರಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಜಾಗತಿಕ ಹೋರಾಟವನ್ನು ತೀವ್ರಗೊಳಿಸಲು ಬೆಂಬಲ ನೀಡುವುದಾಗ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕವಾಗಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಷ್ಯಾ ಮತ್ತು ಇತರ ಎಲ್ಲ ದೇಶಗಳೊಂದಿಗೆ ಸೇರಿ ಒಗ್ಗಟ್ಟಿನಿಂದ ಪ್ರಯತ್ನಗಳನ್ನು ಮಾಡಲು ಸಿದ್ಧವಿರುವುದಾಗಿ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. 'ಸಾಂಕ್ರಾಮಿಕ ರೋಗದ ವಿರುದ್ಧ ಅಂತಿಮ ಗೆಲುವು ಸಾಧಿಸುವ ವಿಶ್ವಾಸ, ಸಾಮರ್ಥ್ಯ ಮತ್ತು ನಿಶ್ಚಿತತೆಯನ್ನು ಚೀನಾ ಹೊಂದಿದೆ' ಎಂದು ಪುಟಿನ್ ಅವರಿಗೆ ಜಿನ್‌ಪಿಂಗ್ ತಿಳಿಸಿದ್ದಾರೆ.