ETV Bharat / international

ಗಡಿ ಜಟಾಪಟಿ ನಡುವೆಯೇ ಬ್ರಹ್ಮಪುತ್ರ ನದಿಗೆ ಅಣೆಕಟ್ಟೆ ಕಟ್ಟಲು ಚೀನಾ ಸಿದ್ಧತೆ!

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ) 14ನೇ ಪಂಚವಾರ್ಷಿಕ ಯೋಜನೆ ಅಂಗೀಕರಿಸಿದೆ. ಆರು ದಿನಗಳ ಅಧಿವೇಶನದ ಕೊನೆಯ ದಿನದಂದು ಚೀನಾದ ಅಭಿವೃದ್ಧಿ ವೇಗಗೊಳಿಸಲು 60 ಪ್ರಸ್ತಾಪಗಳನ್ನು ಒಳಗೊಂಡಿರುವ ಅಭಿವೃದ್ಧಿ ನೀಲನಕ್ಷೆಗೆ ಗ್ರೀನ್​ ಸಿಗ್ನಲ್​ ನೀಡಿದೆ.

author img

By

Published : Mar 11, 2021, 5:38 PM IST

Brahmaputra
Brahmaputra

ಬೀಜಿಂಗ್​: ಬ್ರಹ್ಮಪುತ್ರ ನದಿಯ ಮೇಲ್ದಂಡೆಯಲ್ಲಿ ಚೀನಾ ಅಣೆಕಟ್ಟುಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ ಎಂಬ ಹಲವು ವರದಿಗಳ ನಡುವೆ, ಚೀನಾ ಸಂಸತ್ತು ಬ್ರಹ್ಮಪುತ್ರ ನದಿ ವ್ಯಾಪ್ತಿಯಲ್ಲಿ ಬೃಹತ್​ ಜಲಾಶಯ ಹಾಗೂ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ.

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ) 14ನೇ ಪಂಚವಾರ್ಷಿಕ ಯೋಜನೆ ಅಂಗೀಕರಿಸಿದೆ. ಆರು ದಿನಗಳ ಅಧಿವೇಶನದ ಕೊನೆಯ ದಿನದಂದು ಚೀನಾದ ಅಭಿವೃದ್ಧಿ ವೇಗಗೊಳಿಸಲು 60 ಪ್ರಸ್ತಾಪಗಳನ್ನು ಒಳಗೊಂಡಿರುವ ಅಭಿವೃದ್ಧಿ ನೀಲನಕ್ಷೆಗೆ ಗ್ರೀನ್​ ಸಿಗ್ನಲ್​ ನೀಡಿದೆ.

ಚೀನಾದ ಸಂಸತ್ತು ಗುರುವಾರ 14ನೇ ಪಂಚವಾರ್ಷಿಕ ಯೋಜನೆಯನ್ನು ಅಂಗೀಕರಿಸಿತು. ಟಿಬೆಟ್‌ನ ಬ್ರಹ್ಮಪುತ್ರ ನದಿಯಲ್ಲಿ ವಿವಾದಾತ್ಮಕ ಜಲವಿದ್ಯುತ್ ಯೋಜನೆ ಸೇರಿದಂತೆ ಬಿಲಿಯನ್​ಗಟ್ಟಲೆ ಡಾಲರ್ ಮೌಲ್ಯದ ಯೋಜನೆಗಳನ್ನು ಮೆಗಾ ನೀಲನಕ್ಷೆ ಒಳಗೊಂಡಿದೆ. ಇದು ಅರುಣಾಚಲ ಪ್ರದೇಶದ ಗಡಿಯ ಹತ್ತಿರ ಇರುವುದರಿಂದ ಭಾರತ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಲೈಟ್ ಆ್ಯಪ್​ ಹೊರ ತರುತ್ತಿರುವ ಫೇಸ್​ಬುಕ್​​: 170 ದೇಶಗಳಲ್ಲಿ ಲಭ್ಯ

ಸಿಕ್ಕಿಂ ಗಡಿಯಲ್ಲಿ ಡೋಕ್ಲಾಮ್​ ಗಡಿ ವಿವಾದ ಆರಂಭವಾಗಿ ಕೆಲವೇ ದಿನಗಳ ಹಿಂದೆಯಷ್ಟೇ ತಾತ್ಕಾಲಿಕ ಅಂತ್ಯವಾದ ಬೆನ್ನಲ್ಲೇ ಚೀನಾ, ಟಿಬೆಟ್​ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಮುಂದಾಗಿದೆ. ಯುರ್ಲುಂಕಗ್ ಝಾಂಗ್ಬೊ ನದಿಯ (ಬ್ರಹ್ಮಪುತ್ರ ನದಿಗೆ ಟಿಬೆಟಿಯನ್​ ಹೆಸರು) ಕೆಳಹರಿವಿನ ಪ್ರದೇಶವನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಚೀನಾ ನಿರ್ಧರಿಸಿದೆ.

ಚೀನಾದ ಶಾಸಕಾಂಗವಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ), ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ 2 ಸಾವಿರ ಸದಸ್ಯರು 14ನೇ ಪಂಚವಾರ್ಷಿಕ ಯೋಜನೆ (2021-2025) ಯನ್ನು ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಾಗೂ 2035ರ ಹೊತ್ತಿಗೆ ದೀರ್ಘ ವ್ಯಾಪ್ತಿಯ ಉದ್ದೇಶಗಳಿಗಾಗಿ ಅಂಗೀಕರಿಸಿತು. ಗುರುವಾರ ತನ್ನ ಆರು ದಿನಗಳ ಅಧಿವೇಶನದ ಕೊನೆಯ ದಿನವಾಗಿದ್ದರಿಂದ ಅಧಿಕೃತ ಮಾಧ್ಯಮ ವರದಿ ಬಿಡುಗಡೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.