ಬೀಜಿಂಗ್: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಚೀನಾ 6 ಲಕ್ಷದ 50 ಸಾವಿರ ವೈದ್ಯಕೀಯ ಕಿಟ್‌ಗಳನ್ನು ಭಾರತಕ್ಕೆ ರವಾನಿಸಿದೆ ಎಂದು ಬೀಜಿಂಗ್‌ನ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಕಠಿಣ ಯುದ್ಧ ನಡೆಸಿದ ನಂತರ ಚೀನಾದಲ್ಲಿ ಕಾರ್ಖಾನೆಗಳು ಪುನಾರಂಭಗೊಂಡಿವೆ. ಪ್ರಮುಖ ವೈದ್ಯಕೀಯ ಸರಕುಗಳ ರಫ್ತು ಮಾಡುವ ವ್ಯಾಪಕ ಅವಕಾಶಗಳನ್ನು ಹೊಂದಿದ್ದು, ವಿಶೇಷವಾಗಿ ವೆಂಟಿಲೇಟರ್‌ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಭಾರತ ಸೇರಿದಂತೆ ವಿಶ್ವದಾದ್ಯಂತ ರಫ್ತು ಮಾಡಲಾಗುತ್ತಿದೆ. ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಈ ಉತ್ಪನ್ನಗಳ ಆಮದಿಗಾಗಿ ಆದೇಶ ನೀಡುತ್ತಿವೆ.
ದೇಶದಲ್ಲಿ ಪ್ರಸ್ತುತ ಲಾಕ್‌ಡೌನ್ ಸಮಯದಲ್ಲಿ ಹಾಟ್‌ಸ್ಪಾಟ್‌ಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವ ಅಗತ್ಯವಿದೆ. ಹೀಗಾಗಿ ವೈದ್ಯಕೀಯ ಕಿಟ್‌ಗಳ ಎರಡು ಪ್ರಮುಖ ಸರಕುಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಮೂರು ದಶಲಕ್ಷ ಪರೀಕ್ಷಾ ಕಿಟ್‌ಗಳ ಹೊರತಾಗಿ ಚೀನಾದಿಂದ 150 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಖರೀದಿಸಲು ಭಾರತ ಆದೇಶ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.