ETV Bharat / international

ಕಾಬೂಲ್ ಆತ್ಮಾಹುತಿ ದಾಳಿಗೆ ಚೀನಾ ಖಂಡನೆ: ರಾಯಭಾರ ಕಚೇರಿ ಮುಚ್ಚಲ್ಲ ಎಂದ ಡ್ರ್ಯಾಗನ್​ - Kabul airport blast

ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಮತ್ತು ಅಫ್ಘಾನಿಸ್ತಾನವು ಮತ್ತೆ ಭಯೋತ್ಪಾದನೆಯ ಮೂಲವಾಗುವುದನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಎಂದು ಚೀನಾ ಹೇಳಿಕೆ ನೀಡಿದೆ.

ಕಾಬೂಲ್ ಆತ್ಮಾಹುತಿ ದಾಳಿಗೆ ಚೀನಾ ಖಂಡನೆ
ಕಾಬೂಲ್ ಆತ್ಮಾಹುತಿ ದಾಳಿಗೆ ಚೀನಾ ಖಂಡನೆ
author img

By

Published : Aug 27, 2021, 7:38 PM IST

ಬೀಜಿಂಗ್ (ಚೀನಾ): ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನಡೆದ ಆತ್ಮಾಹುತಿ ಬಾಂಬ್​ ದಾಳಿಯನ್ನು ಖಂಡಿಸಿರುವ ಚೀನಾ, ಯಾವುದೇ ಕಾರಣಕ್ಕೂ ಕಾಬೂಲ್​ನಲ್ಲಿರುವ ತಮ್ಮ ರಾಯಭಾರಿ ಕಚೇರಿ ಮುಚ್ಚುವುದಿಲ್ಲ ಎಂದು ಹೇಳಿದೆ.

ದಾಳಿ ನಡೆದ ಬಳಿಕ ಮೊದಲ ಬಾರಿ ಚೀನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಭಯೋತ್ಪಾದನೆ ಬೆದರಿಕೆ ಎದುರಿಸಲು ಮತ್ತು ಅಫ್ಘಾನಿಸ್ತಾನವು ಮತ್ತೆ ಭಯೋತ್ಪಾದನೆಯ ಮೂಲವಾಗುವುದನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಬೂಲ್​ ಬ್ಲಾಸ್ಟ್: ಅಮೆರಿಕ ಸೈನಿಕರು ಸೇರಿ 90 ಜನರು ಸಾವು; ದಾಳಿಯ ಹೊಣೆ ಹೊತ್ತ ISIS-K

ಗುರುವಾರ ನಡೆದ ದಾಳಿಯಲ್ಲಿ ಯಾವುದೇ ಚೀನಿಯರು ಸಾವನ್ನಪ್ಪಿಲ್ಲ ಹಾಗೂ ಗಾಯಗೊಂಡಿಲ್ಲ. ಆದರೂ ಭದ್ರತಾ ಮುನ್ನೆಚ್ಚರಿಕೆಗಳನ್ನು ಬಲಪಡಿಸಲು ಚೀನಾ ತನ್ನ ನಾಗರಿಕರಿಗೆ ಸಲಹೆ ನೀಡುತ್ತಿದೆ. ಕಾಬೂಲ್​ನಲ್ಲಿರುವ ನಮ್ಮ ರಾಯಭಾರ ಕಚೇರಿ ತೆರೆದೇ ಇರಲಿದೆ. ಚೀನಾಗೆ ಹಾನಿಯಾಗುವ ಯಾವುದೇ ಕೆಲಸಗಳನ್ನು ಮಾಡಲು ಎಂದಿಗೂ ಅನುಮತಿಸುವುದಿಲ್ಲ ಎಂದು ತಾಲಿಬಾನ್​ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ ಎಂದು ಝಾವೊ ಹೇಳಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಸೇನಾ ಸಿಬ್ಬಂದಿ ಸೇರಿ ಕನಿಷ್ಠ 90 ಜನ ಮೃತಪಟ್ಟಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೀಕರ ದಾಳಿ ಮಾಡಿದ್ದು ತಾವೇ ಎಂದು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿದೆ. ಈ ಘಟನೆಯನ್ನು ವಿಶ್ವಸಂಸ್ಥೆ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಖಂಡಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.