ಬೀಜಿಂಗ್ (ಚೀನಾ): 9,04,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಜಾಗತಿಕವಾಗಿ 27 ದಶಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿರುವ ಕೊರೊನಾ ಸೋಂಕು ತಡೆಗಟ್ಟಲು ಚೀನಾ ಮೂಗಿನ ಮೂಲಕ ಸಿಂಪಡಿಸುವ ತನ್ನ ಮೊದಲ ಲಸಿಕೆಯ ಪ್ರಯೋಗಗಳಿಗೆ ಅನುಮೋದಿಸಿದೆ ಎಂದು ಅಧಿಕೃತ ಮಾಧ್ಯಮವೊಂದು ವರದಿ ಮಾಡಿದೆ.
ಕೊರೊನಾ ವೈರಸ್ ವಿರುದ್ಧ ಚೀನಾದ ಏಕೈಕ ಲಸಿಕೆ ನವೆಂಬರ್ನಲ್ಲಿ ಮೊದಲನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದ್ದು, 100 ಜನರ ಮೇಲೆ ಪ್ರಯೋಗ ನಡೆಯಲಿದೆ.
ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು ಅನುಮೋದಿಸಿದ ಏಕೈಕ ಲಸಿಕೆ ಇದಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಹಾಂಗ್ ಕಾಂಗ್ ಮತ್ತು ಚೀನಾದ ಸಹಯೋಗದೊಂದಿಗೆ ಲಸಿಕೆಯ ಪ್ರಯೋಗ ನಡೆಯಲಿದ್ದು, ಇದು ಹಾಂಗ್ ಕಾಂಗ್ ವಿಶ್ವವಿದ್ಯಾಲಯ, ಕ್ಸಿಯಾಮೆನ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಾಂಟೈ ಜೈವಿಕ ಔಷಧಾಲಯದ ಸಂಶೋಧಕರನ್ನು ಒಳಗೊಂಡಿರುತ್ತದೆ.