ಕಾಬೂಲ್(ಅಫ್ಘಾನಿಸ್ತಾನ): ದಕ್ಷಿಣ ಅಫ್ಘಾನಿಸ್ತಾನದಲ್ಲಿ ಇಂದು ರಸ್ತೆ ಬದಿಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಕಂದಹಾರ್ನಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಪ್ರಯಾಣಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರ ವಕ್ತಾರರು ತಿಳಿಸಿದ್ದಾರೆ.
ರಸ್ತೆ ಬದಿಯ ಬಾಂಬ್ ಸ್ಫೋಟದಲ್ಲಿ ಒಂಬತ್ತು ಜನ ಮೃತಪಟ್ಟಿದ್ದಲ್ಲದೆ, ಇನ್ನೂ ಐದು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಕ್ತಾರ ಬಶೀರ್ ಅಹ್ಮದಿ ತಿಳಿಸಿದ್ದಾರೆ.
ಮುಸ್ಲಿಂ ರಜಾ ದಿನಕ್ಕಾಗಿ ತಾಲಿಬಾನ್ ಘೋಷಿಸಿದ ಕದನ ವಿರಾಮ ಕಳೆದ ತಿಂಗಳು ಕೊನೆಗೊಂಡ ನಂತರ ಅಫ್ಘಾನಿಸ್ತಾನದಲ್ಲಿ ಇದು ಮೂರನೇ ಬಾರಿಯ ರಸ್ತೆ ಬದಿಯ ಬಾಂಬ್ ಸ್ಫೋಟ ಎಂದು ತಿಳಿದು ಬಂದಿದೆ.
ಆದರೆ ಈ ಮೂರು ದಾಳಿಗೂ ತಾಲಿಬಾನ್ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದ್ದು, ಈದ್ ಅಲ್-ಫಿತರ್ ರಜಾ ದಿನದಿಂದ ತಾಲಿಬಾನ್ ಅಫ್ಘಾನ್ ಪಡೆಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.
ಈ ಘಟನೆಗೂ ಮುನ್ನ ಮಂಗಳವಾರ ರಾತ್ರಿ, ಕಾಬೂಲ್‌ನ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟಗೊಂಡು, ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಇಬ್ಬರು ಸಾವನ್ನಪ್ಪಿದರು ಹಾಗೂ ಎಂಟು ಮಂದಿ ಗಾಯಗೊಂಡಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.