ಲಂಡನ್: ದೇಶಾದ್ಯಂತ ಸಡಗರ-ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗ್ತಿದೆ. ತಮಿಳುನಾಡಿನಲ್ಲೂ ಪೊಂಗಲ್ ಹೆಸರಿನಲ್ಲಿ ಈ ಹಬ್ಬ ಆಚರಿಸಲಾಗುತ್ತಿದ್ದು, ತಮಿಳು ಸಮುದಾಯಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.
ಓದಿ: 'ಭಾರತದ ತೇಜಸ್ ಪಾಕ್-ಚೀನಾದ ಜೆಎಫ್-17 ಯುದ್ಧ ವಿಮಾನಕ್ಕಿಂತಲೂ ಶಕ್ತಿಶಾಲಿ'
ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹರಿಬಿಟ್ಟು ಶುಭ ಹಾರೈಕೆ ಮಾಡಿರುವ ಪ್ರಧಾನಿ, ಬ್ರಿಟಿಷ್ ತಮಿಳು ಸಮುದಾಯ ಹಾಗೂ ಪ್ರಪಂಚದಾದ್ಯಂತ ವಾಸಿಸುತ್ತಿರುವ ತಮಿಳುಗರಿಗೆ ಪೊಂಗಲ್ ಹಬ್ಬದ ಶುಭಾಶಯಗಳು. ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ಒಟ್ಟುಗೂಡಿ ಈ ಸಂಭ್ರಮ ಆಚರಿಸಲು ನೀವೂ ಎದರು ನೋಡುತ್ತಿದ್ದೀರಿ ಎಂದು ಸಂದೇಶ ರವಾನಿಸಿದ್ದಾರೆ.
-
I want to wish Tamils in the UK and around the world a happy Thai Pongal. pic.twitter.com/GCROsgqI9d
— Boris Johnson (@BorisJohnson) January 13, 2021 " class="align-text-top noRightClick twitterSection" data="
">I want to wish Tamils in the UK and around the world a happy Thai Pongal. pic.twitter.com/GCROsgqI9d
— Boris Johnson (@BorisJohnson) January 13, 2021I want to wish Tamils in the UK and around the world a happy Thai Pongal. pic.twitter.com/GCROsgqI9d
— Boris Johnson (@BorisJohnson) January 13, 2021
ಬ್ರಿಟನ್ಗೆ ತಮಿಳು ಸಮುದಾಯ ನೀಡಿರುವ ಕೊಡುಗೆಗಳಿಗೆ ಅವರು ವಿಡಿಯೋದಲ್ಲಿ ಕೃತಜ್ಞತೆ ಸಲ್ಲಿಸಿದ್ದು, ದೇಶದ ಆರ್ಥಿಕತೆ ಹೆಚ್ಚಿಸಲು, ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಹಾಗೂ ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ ಎಂದು ತಿಳಿಸಿದ್ದಾರೆ.