ಢಾಕಾ (ಬಾಂಗ್ಲಾದೇಶ): ಕೋವಿಡ್ -19 ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಜೂನ್ 6 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಬಾಂಗ್ಲಾದೇಶ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಮೇ 23 ರಂದು ಸರ್ಕಾರ ದೇಶಾದ್ಯಂತ ಮೇ 30 ರವರೆಗೆ ಲಾಕ್‌ಡೌನ್ ವಿಸ್ತರಿಸಿತ್ತು.
ಜೂನ್ 6 ರ ಮಧ್ಯರಾತ್ರಿಯವರೆಗೆ ಈ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದು ಬಾಂಗ್ಲಾದೇಶದ ಕ್ಯಾಬಿನೆಟ್ ವಿಭಾಗ ತಿಳಿಸಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ದೈನಂದಿನ ಸೋಂಕಿನ ಪ್ರಮಾಣವು ಶೇಕಡಾ 5 ಕ್ಕೆ ಇಳಿಯುವವರೆಗೆ ನಿರ್ಬಂಧವನ್ನು ಮುಂದುವರಿಸಲಾಗುವುದು ಎಂದು ರಾಜ್ಯ ಸಾರ್ವಜನಿಕ ಆಡಳಿತ ಸಚಿವ ಫರ್ಹಾದ್ ಹುಸೇನ್ ಹೇಳಿದರು. ಕೊರೊನಾ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 798,830 ಕ್ಕೆ ಏರಿದೆ.