ಇಸ್ಲಾಮಾಬಾದ್: ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ನಮ್ಮ ದೇಶದ ಮೇಲೆ ದಾಳಿ ನಡೆಸಲಿದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳುತ್ತಿದ್ದಾಗ ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ಪಾಕಿಸ್ತಾನದ ಸಂಸದರೊಬ್ಬರು ಫೆಬ್ರವರಿ 2019ರ ಸಭೆಯ ಘಟನೆಗಳನ್ನು ವಿವರಿಸಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ನಾಯಕ ಅಯಾಜ್ ಸಾದಿಕ್, "ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಮಹತ್ವದ ಸಭೆ ವೇಳೆ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ಇಂದು ರಾತ್ರಿ ಒಂಭತ್ತರ ವೇಳೆಗೆ ಭಾರತ ಪಾಕ್ ಮೇಲೆ ದಾಳಿ ನಡೆಸಲಿದೆ ಎಂದು ಹೇಳಿದ್ದರು ಅಂತ ತಿಳಿಸಿದ್ದಾರೆ.
"ಇಮ್ರಾನ್ ಖಾನ್ ಹಾಜರಾಗಲು ನಿರಾಕರಿಸಿದ್ದ ಸಭೆಯಲ್ಲಿ ಶಾ ಮಹಮ್ಮದ್ ಖುರೇಷಿ ಭಾಗವಹಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಕೋಣೆಗೆ ಬಂದರು. ಈ ವೇಳೆ ಅವರ ಕಾಲುಗಳು ನಡುಗುತ್ತಿದ್ದವು ಮತ್ತು ಅವರು ಬೆವರುತ್ತಿದ್ದರು. ವಿದೇಶಾಂಗ ಸಚಿವರು ದೇವರ ದಯೆಯಿಂದ ಅಭಿನಂದನ್ ಅವರನ್ನು ಹೋಗಲು ಬಿಡಿ. ಇಲ್ಲದಿದ್ದರೆ ಭಾರತ ರಾತ್ರಿ 9 ಗಂಟೆಗೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ" ಅಂತ ತಿಳಿಸಿದ್ದರು ಎಂದು ಸಾದಿಕ್ ಪ್ರಮುಖ ಸಭೆಯ ಘಟನೆಗಳನ್ನು ವಿವರಿಸಿದ್ದಾರೆ.
ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶಿಸಿ ದಾಳಿ ನಡೆಸಲು ಮುಂದಾಗಿದ್ದವು. ಈ ವೇಳೆ ಅಭಿನಂದನ್ ವರ್ಧಮಾನ್ ಮಿಗ್-21 ಯುದ್ಧ ವಿಮಾನದ ಮೂಲಕ ಅವನ್ನು ಹಿಮ್ಮೆಟ್ಟಿಸಿದ್ದರು. ಘಟನೆಯಲ್ಲಿ ಅಭಿನಂದನ್ ಪಾಕ್ ನೆಲದಲ್ಲಿ ಏರ್ ಬ್ಯಾಗ್ನಿಂದ ಬಿದ್ದು, 60 ಗಂಟೆಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು.