ETV Bharat / international

ಪ್ರಯೋಗ ಹಂತದಲ್ಲಿರುವ ಕೋವಿಡ್ ಲಸಿಕೆ ಉತ್ಪಾದನೆ ಆರಂಭ - ಔಷಧ ಕಂಪನಿ ಆಸ್ಟ್ರಾಜೆನೆಕಾ ಸುದ್ದಿ

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಈ ಲಸಿಕೆಯ ಉತ್ಪಾದನೆ ನಡೆಯಲಿದ್ದು, ಜನ ಸಾಮಾನ್ಯರಿಗೆ ಯಾವಾಗ ಲಭ್ಯವಾಗುತ್ತದೆ ಎಂದು ಕಾದುನೋಡಬೇಕಿದೆ..

covid vaccine
ಕೋವಿಡ್ ಲಸಿಕೆ
author img

By

Published : Nov 9, 2020, 3:19 PM IST

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿ ಕೋವಿಡ್ -19 ಲಸಿಕೆಯ ಉತ್ಪಾದನೆಯನ್ನು ಆಸ್ಟ್ರೇಲಿಯಾ ಸೋಮವಾರ ಪ್ರಾರಂಭಿಸಿದ್ದು, ಸರಿಸುಮಾರು 30 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಚಿಂತನೆ ನಡೆಸಲಾಗಿದೆ.

ಔಷಧ ಕಂಪನಿ ಆಸ್ಟ್ರಾಜೆನೆಕಾದೊಂದಿಗೆ ತಯಾರಿಸುತ್ತಿರುವ ಈ ಲಸಿಕೆ ಇನ್ನೂ ಪ್ರಯೋಗ ಹಂತದಲ್ಲಿದ್ದು, ಜಾಗತಿಕವಾಗಿ ಹೆಚ್ಚು ಭರವಸೆಯುಳ್ಳ ಲಸಿಕೆಗಳಲ್ಲಿ ಇದೂ ಒಂದು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಸ್ಟ್ರೇಲಿಯಾದ ಬಯೋಟೆಕ್ ಸಂಸ್ಥೆಯಾದ ಸಿಎಸ್ಎಲ್ ಲಸಿಕೆಯನ್ನು ಈಗಲೇ ಉತ್ಪಾದನೆ ಮಾಡಲು ಅಸ್ಟ್ರಾಜೆನೆಕಾ ಮತ್ತು ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. 2021ರ ಆರು ತಿಂಗಳ ಒಳಗೆ ಉಳಿದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ.

ಉತ್ಪಾದನೆಯಾಗಲಿರುವ ಲಸಿಕೆಯ ಎರಡು ಡೋಸ್​ಗಳು ಒಬ್ಬ ವ್ಯಕ್ತಿಗೆ ಅವಶ್ಯಕತೆ ಇರುತ್ತದೆ. ಅಂದ್ರೆ ಈಗ ಉತ್ಪಾದನೆಯಾಗಲಿರುವ ಲಸಿಕೆಯನ್ನು 15 ಮಿಲಿಯನ್ ಮಂದಿಗೆ ನೀಡಬಹುದಾಗಿದೆ. ಆದರೂ ಕೂಡ ಆಸ್ಟ್ರೇಲಿಯಾದ ಔಷಧ ನಿಯಂತ್ರಣ ಸಂಸ್ಥೆಯ ಅನುಮೋದನೆಯಿಲ್ಲದೇ ಲಸಿಕೆಯನ್ನು ಬಿಡುಗಡೆ ಮಾಡಲು ಹಾಗೂ ಬಳಸಲು ಸಾಧ್ಯವಿಲ್ಲ.

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಈ ಲಸಿಕೆಯ ಉತ್ಪಾದನೆ ನಡೆಯಲಿದ್ದು, ಜನ ಸಾಮಾನ್ಯರಿಗೆ ಯಾವಾಗ ಲಭ್ಯವಾಗುತ್ತದೆ ಎಂದು ಕಾದುನೋಡಬೇಕಿದೆ. ಮತ್ತೊಂದೆಡೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತೊಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಈಗಾಗಲೇ ಹಲವು ಪ್ರಯೋಗಗಳಿಗೆ ಒಳಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.