ETV Bharat / international

ಪರಮಾಣು ತಡೆ ಒಪ್ಪಂದ AUKUS ಒಕ್ಕೂಟದಿಂದ ವ್ಯರ್ಥ: ಚೀನಾ ಟೀಕೆ - ಚೀನಾದ ರಾಜತಾಂತ್ರಿಕ ಅಧಿಕಾರಿ ಲಿ ಸಾಂಗ್​​

ಆಸ್ಟ್ರೇಲಿಯಾ ದೇಶಕ್ಕೂ ಕೂಡಾ ಅಣ್ವಸ್ತ್ರ ಸಿಗುತ್ತದೆ. ಇದರ ಜೊತೆಗೆ ಅನೇಕ ಪರಮಾಣುಚಾಲಿತ ಜಲಾಂತರ್ಗಾಮಿ ನೌಕೆಗಳು, ಯುರೇನಿಯಂ ಸೇರಿದಂತೆ ಸೂಕ್ಷ್ಮ ಪರಮಾಣು ವಸ್ತುಗಳು ಔಕಸ್(AUKUS) ರಾಷ್ಟ್ರಗಳ ಮಧ್ಯೆ ಹಂಚಿಕೆಯಾಗುತ್ತದೆ ಎಂದು ಚೀನಾ ಹೇಳುತ್ತದೆ.

AUKUS is 'textbook case' of nuclear proliferation: Chinese envoy
AUKUS ಅನ್ನು TextBook Case ಎಂದ ಚೀನಾ: ಇಲ್ಲಿದೆ ವಿವರಣೆ
author img

By

Published : Oct 14, 2021, 8:22 AM IST

ಜಿನೆವಾ(ಸ್ವಿಟ್ಜರ್​​ಲ್ಯಾಂಡ್): ಜಗತ್ತಿನಲ್ಲಿ ಹೆಚ್ಚುತ್ತಿರುವ ಚೀನಾ ದೇಶದ ಪ್ರಾಬಲ್ಯವನ್ನು ತಡೆಯಲು ಅಮೆರಿಕ ಅನೇಕ ತಂತ್ರಗಳನ್ನು ಹೂಡಿದೆ. ಈ ಮೊದಲು ಭಾರತವೂ ಸದಸ್ಯತ್ವವಹಿಸಿದ್ದ ಕ್ವಾಡ್(QUAD)​ ಸಮೂಹಕ್ಕೆ ಹೊಸ ರೂಪುರೇಷೆ ನೀಡಿದ್ದ ಅಮೆರಿಕ ಈಗ ಭಾರತವನ್ನು ಹೊರತುಪಡಿಸಿ, ಔಕಸ್ (AUKUS) ಎಂಬ ಒಕ್ಕೂಟವನ್ನು ರಚಿಸಿಕೊಂಡಿದೆ. ಈ ಒಕ್ಕೂಟಕ್ಕೆ ಚೀನಾ ರಾಜತಾಂತ್ರಿಕ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ.

ಔಕಸ್ ಒಕ್ಕೂಟವನ್ನು ಶೀತಲ ಸಮರದ ಮನಸ್ಥಿತಿ ಇರುವ, ಸಂಕುಚಿತ ಮನಸ್ಸಿನ ಜಿಯೋಪೊಲಿಟಿಕಲ್ ಲೆಕ್ಕಾಚಾರಗಳನ್ನು ಹೊಂದಿರುವ ಪರಮಾಣು ಶಕ್ತಿ ಪ್ರಸರಣದ 'ಪಠ್ಯಪುಸ್ತಕ ಪ್ರಕರಣ' (textbook case) ಎಂದು ಜಿನೇವಾದಲ್ಲಿರುವ ಚೀನಾದ ರಾಜತಾಂತ್ರಿಕ ಅಧಿಕಾರಿ ಲಿ ಸಾಂಗ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

textbook case ಎಂದರೇನು? ಚೀನಾ ಅಧಿಕಾರಿ ಹೀಗೆ ಕರೆದಿದ್ದೇಕೆ?

textbook case ಎಂಬುದು ಇಂಗ್ಲಿಷ್ ಭಾಷೆಯ ಪದಪುಂಜ (Idiom). (ಸಾಮಾನ್ಯವಾಗಿ ಕನ್ನಡದಲ್ಲಿ ನಾಣ್ಣುಡಿ ಎಂದು ಕರೆಯಲಾಗುತ್ತದೆ). ಈ ಪದಪುಂಜದ ಅರ್ಥ ಸ್ಪಷ್ಟ ಉದಾಹರಣೆ/ ಇತ್ತೀಚಿನ ಘಟನೆಗಳ ಬಗ್ಗೆ ನಿಖರವಾಗಿ ಉಲ್ಲೇಖಿಸುವ ಉದಾಹರಣೆ ಎಂಬ ಅರ್ಥ ನೀಡುತ್ತದೆ.

ಈಗ ಔಕಸ್​ ಒಕ್ಕೂಟದಲ್ಲಿರುವ ರಾಷ್ಟ್ರಗಳು ಪರಮಾಣು ಪ್ರಸರಣಕ್ಕೆ ಇರುವ, ಶೀತಲ ಸಮರದ ಮನಸ್ಥಿತಿ ಇರುವ ಒಕ್ಕೂಟಕ್ಕೆ ಉದಾಹರಣೆ (textbook case) ಆಗಿದೆ ಎಂದು ಚೀನಾದ ಅಧಿಕಾರಿ ಇದೇ ಅರ್ಥದಲ್ಲಿ ಅಮೆರಿಕ ಸೇರಿದಂತೆ ಮೂರು ರಾಷ್ಟ್ರಗಳಿರುವ ಒಕ್ಕೂಟದ ವಿರುದ್ಧ ಕಿಡಿ ಕಾರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ..

ಈಗ ಔಕಸ್ ರಾಷ್ಟ್ರಗಳಾದ ಅಮೆರಿಕ ಮತ್ತು ಇಂಗ್ಲೆಂಡ್​ನಲ್ಲಿ ಪರಮಾಣು ಅಸ್ತ್ರ ಇದೆ. ಆದರೆ ಅದೇ ಒಕ್ಕೂಟ ಸದಸ್ಯ ರಾಷ್ಟ್ರವಾಗಿರುವ ಆಸ್ಟ್ರೇಲಿಯಾ ಬಳಿ ಪರಮಾಣು ಅಸ್ತ್ರ ಇಲ್ಲ. ಈಗ ಮೂರೂ ರಾಷ್ಟ್ರಗಳು ರಕ್ಷಣಾ ಒಪ್ಪಂದ ಮಾಡಿಕೊಂಡಿರುವ ಕಾರಣದಿಂದ ಮೂರು ರಾಷ್ಟ್ರಗಳ ನಡುವೆ ಮಿಲಿಟರಿ ತಂತ್ರಜ್ಞಾನ ಹಂಚಿಕೆಯಾಗುತ್ತದೆ.

ಈ ಮೂಲಕ ಅಣ್ವಸ್ತ್ರ ಇಲ್ಲದೇ ಇರುವ ಆಸ್ಟ್ರೇಲಿಯಾಗೂ ಕೂಡಾ ಅಣ್ವಸ್ತ್ರ ಸಿಗುತ್ತದೆ. ಇದರ ಜೊತೆಗೆ ಅನೇಕ ಪರಮಾಣುಚಾಲಿತ ಜಲಾಂತರ್ಗಾಮಿ ನೌಕೆಗಳು, ಯುರೇನಿಯಂ ಸೇರಿದಂತೆ ಸೂಕ್ಷ್ಮ ಪರಮಾಣು ವಸ್ತುಗಳು ಈ ರಾಷ್ಟ್ರಗಳ ಮಧ್ಯೆ ಹಂಚಿಕೆಯಾಗುತ್ತದೆ.

ಚೀನಾ ಮತ್ತು ಆಸ್ಟ್ರೇಲಿಯಾ ನಡುವೆ ಸಂಬಂಧ ಹದಗಟ್ಟಿದ್ದು, ಆ ರಾಷ್ಟ್ರಕ್ಕೂ ಕೂಡಾ ಅಣ್ವಸ್ತ್ರ ಸಿಕ್ಕಿ ಬಿಡುತ್ತದೆ ಎಂಬ ಆತಂಕದಲ್ಲಿ ಚೀನಾ ಇದೆ. ಇದೇ ಕಾರಣಕ್ಕೆ ಪರಮಾಣು ಪ್ರಸರಣ ತಡೆ ಒಪ್ಪಂದ (NPT)ಯ ನಾಯಕತ್ವ ವಹಿಸಿದ ರಾಷ್ಟ್ರಗಳೇ ಅಣ್ವಸ್ತ್ರ ಪ್ರಸರಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಕಿ ಮತ್ತು ಕಾಗದ

ಪರಮಾಣು ಪ್ರಸರಣ ತಡೆ ಒಪ್ಪಂದವು ಕಾಗದದ ತುಂಡಿನಂತೆ, ಆದರೆ ಔಕಸ್ ಒಕ್ಕೂಟ ಬೆಂಕಿಯಂತಿದೆ. ನೀವು ಬೆಂಕಿಯನ್ನು ಕಾಗದದಿಂದ ಮುಚ್ಚಲು ಸಾಧ್ಯವಿಲ್ಲ. ಪರಮಾಣು ಪ್ರಸರಣ ತಡೆ ಒಪ್ಪಂದ ಈ ಔಕಸ್​ ಒಕ್ಕೂಟದಿಂದ ವ್ಯರ್ಥವಾಗುತ್ತದೆ ಎಂದು ಲೀ ಸಾಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಆರೋಗ್ಯ ಸ್ಥಿರ: ಏಮ್ಸ್​ ವೈದ್ಯರ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.