ಕಠ್ಮಂಡು(ನೇಪಾಳ): ಬೆಂಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ನೆರೆಯ ರಾಷ್ಟ್ರ ನೇಪಾಳ ನಲುಗಿ ಹೋಗಿದೆ. ಇಲ್ಲಿನ ಪರ್ಬತ್ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂ ಕುಸಿತ ಉಂಟಾಗಿದೆ. ಹಲವಾರು ಮಂದಿ ಮೃತಪಟ್ಟಿದ್ದು, ಕೆಲವರು ನಾಪತ್ತೆಯಾಗಿದ್ದಾರೆ.
-
At least six people were killed, two missing in a landslide that swept through Parbat District of Nepal today morning, say local police. pic.twitter.com/RZ5chdOTa8
— ANI (@ANI) September 3, 2021 " class="align-text-top noRightClick twitterSection" data="
">At least six people were killed, two missing in a landslide that swept through Parbat District of Nepal today morning, say local police. pic.twitter.com/RZ5chdOTa8
— ANI (@ANI) September 3, 2021At least six people were killed, two missing in a landslide that swept through Parbat District of Nepal today morning, say local police. pic.twitter.com/RZ5chdOTa8
— ANI (@ANI) September 3, 2021
ಇಂದು ಬೆಳಗ್ಗೆ ಪರ್ಬತ್ನಲ್ಲಿ ಸಂಭವಿಸಿರುವ ಭೂ ಕುಸಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದು, ಇಬ್ಬರು ಕಾಣೆಯಾಗಿದ್ದಾರೆಂದು ಅಲ್ಲಿನ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ಸಿಬ್ಬಂದಿ, ನಾಪತ್ತೆಯಾದವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಭೂ ಕುಸಿತದಿಂದಾಗಿ ಹಲವಾರು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.