ಮ್ಯಾನ್ಮಾರ್: ಇಲ್ಲಿನ ಹಕಂತ್ ಪ್ರಾಂತ್ಯದಲ್ಲಿರುವ ಪಚ್ಚೆ ಕಲ್ಲುಗಳ ಗಣಿ (ಜೇಡ್ ಮೈನ್) ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, 100 ಜನರು ಬಲಿಯಾಗಿದ್ದಾರೆ.
ಮಾನ್ಸೂನ್ ಮಳೆ ತಂದ ಅವಾಂತರದಿಂದಾಗಿ ಬೆಳಗ್ಗೆ 8 ಗಂಟೆ ಸುಮಾರಿಗೆ ಗಣಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ 100 ಜನ ಮೃತಪಟ್ಟಿದ್ದರೆ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
-
#BREAKING: Death toll from jade mine landslide in Myanmar soars to 100 - AFP
— The Coronavirus Gazette (@COVIDGazette) July 2, 2020 " class="align-text-top noRightClick twitterSection" data="
🎥 via Gautam Gada
[Special Report] pic.twitter.com/YWu9e9SfWA
">#BREAKING: Death toll from jade mine landslide in Myanmar soars to 100 - AFP
— The Coronavirus Gazette (@COVIDGazette) July 2, 2020
🎥 via Gautam Gada
[Special Report] pic.twitter.com/YWu9e9SfWA#BREAKING: Death toll from jade mine landslide in Myanmar soars to 100 - AFP
— The Coronavirus Gazette (@COVIDGazette) July 2, 2020
🎥 via Gautam Gada
[Special Report] pic.twitter.com/YWu9e9SfWA
ರಕ್ಷಣಾ ಹಾಗೂ ಶೋಧ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಜೇಡ್ ಮೈನ್:
ಹಸಿರು ಬಣ್ಣದ ಕಲ್ಲಾಗಿರುವ ಪಚ್ಚೆ ನವರತ್ನಗಳಲ್ಲಿ ನಾಲ್ಕನೇಯದಾಗಿದೆ. ಆಭರಣಗಳ ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ. ಏಷ್ಯಾದ ಮ್ಯಾನ್ಮಾರ್‌ನ ಹಕಂತ್ ಪ್ರಾಂತ್ಯದಲ್ಲಿರುವ ಪಚ್ಚೆ ಕಲ್ಲುಗಳ ಗಣಿಯಲ್ಲಿ ಕೆಲಸ ಮಾಡಿಕೊಂಡು ಹಾಗೂ ಗಣಿ ಪ್ರದೇಶದ ಸುತ್ತಮುತ್ತ ಸಾವಿರಾರು ಜನರು ವಾಸವಿದ್ದಾರೆ. ಈ ಪ್ರದೇಶದಲ್ಲಿ ಭೂಕುಸಿತ ಸಾಮಾನ್ಯವಾಗಿದ್ದು, ಈ ಹಿಂದೆ ಕೂಡ ನಡೆದ ಘಟನೆಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು.