ETV Bharat / international

ಕರಾಚಿಯ ಕಟ್ಟಡದಲ್ಲಿ ಸ್ಫೋಟ: ಐವರು ಸಾವು, 20 ಮಂದಿಗೆ ಗಾಯ - ಕರಾಚಿಯಲ್ಲಿ ಸ್ಫೋಟದಿಂದ ಐವರು ಸಾವು

ಪಾಕಿಸ್ತಾನದ ಕರಾಚಿಯ ಕಟ್ಟಡವೊಂದರಲ್ಲಿ ಸ್ಫೋಟ ಸಂಭವಿಸದ ಪರಿಣಾಮ ಐವರು ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

explosion rocks Pakistan's Karachi
ಪಾಕಿಸ್ತಾನದ ಕರಾಚಿಯಲ್ಲಿ ಸ್ಫೋಟ
author img

By

Published : Oct 21, 2020, 11:33 AM IST

Updated : Oct 21, 2020, 2:44 PM IST

ಕರಾಚಿ (ಪಾಕಿಸ್ತಾನ): ಕರಾಚಿಯ ಗುಲ್ಶನ್-ಇ-ಇಕ್ಬಾಲ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ವರದಿಗಳ ಪ್ರಕಾರ, ಕರಾಚಿ ವಿಶ್ವವಿದ್ಯಾಲಯದ ಮಸ್ಕನ್ ಗೇಟ್ ಎದುರಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಘಟನೆ ಸಂಭವಿಸಿದೆ. ಸ್ಫೋಟದ ಕಾರಣ, ಸ್ವರೂಪವನ್ನು ಪೊಲೀಸರು ನಿರ್ಧರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಗಾಯಗೊಂಡ ಮತ್ತು ಮೃತಪಟ್ಟ ಎಲ್ಲರನ್ನೂ ಪಟೇಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದ್ದು, ಸ್ಫೋಟದ ಪರಿಣಾಮವಾಗಿ ಹತ್ತಿರದ ಕಟ್ಟಡದ ಕಿಟಕಿಯ ಗಾಜುಗಳು ಚೂರು ಚೂರಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೇಲ್ನೋಟಕ್ಕೆ ಇದು ಸಿಲಿಂಡರ್ ಸ್ಫೋಟ ಎಂದು ತೋರುತ್ತದೆ, ಬಾಂಬ್ ನಿಷ್ಕ್ರಿಯ ದಳ ಸ್ಫೋಟದ ಕಾರಣವನ್ನು ಪರಿಶೀಲಿಸುತ್ತಿದೆ ಎಂದು ಮುಬಿನಾ ಟೌನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Oct 21, 2020, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.