ಪಂಜ್ಶೀರ್(ಅಫ್ಘಾನಿಸ್ತಾನ): ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಪಡೆಗಳಿಗೆ ಸೆಡ್ಡು ಹೊಡೆದು ನಿಂತಿದ್ದ ಪಂಜ್ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಪ್ರಾಂತ್ಯದಲ್ಲಿ ಫೆಬ್ರವರಿ 7ರಿಂದ ಈ ಪ್ರದೇಶದಲ್ಲಿ ಸ್ಥಳೀಯರು ಮತ್ತು ತಾಲಿಬಾನ್ ನಡುವೆ ಘರ್ಷಣೆ ನಡೆಯುತ್ತಿದೆ. ತಾಲಿಬಾನಿಗಳ ವಾಹನವನ್ನು ಬಾಂಬ್ ಸ್ಫೋಟಿಸಿ ಹಾನಿಗೊಳಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ.
ಪಂಜ್ಶೀರ್ ಈಗಲೂ ತಾಲಿಬಾನಿಗಳಿಗೆ ಸವಾಲೆಸೆಯುತ್ತಿದ್ದು, ಆ ಪ್ರಾಂತ್ಯವನ್ನು ತನ್ನದಾಗಿಸಿಕೊಳ್ಳಲು ತಾಲಿಬಾನಿ ಪಡೆಗಳು ಹರಸಾಹಸ ನಡೆಸುತ್ತಿವೆ. ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ.
ವಿದೇಶಿ ನೆರವು ಸಿಗದ ಕಾರಣ, ಬೇರೆ ರಾಷ್ಟ್ರಗಳಲ್ಲಿರುವ ಆಫ್ಘನ್ ಹಣವನ್ನು ಪಡೆಯಲು ನಿರ್ಬಂಧಿಸಿರುವುದು ಮತ್ತು ತಾಲಿಬಾನ್ ಮೇಲಿನ ಅಂತರರಾಷ್ಟ್ರೀಯ ನಿರ್ಬಂಧಗಳ ಕಾರಣದಿಂದಾಗಿ ಅಫ್ಘಾನಿಸ್ತಾನವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.
ಇದನ್ನೂ ಓದಿ: ಪಾಕ್ನಲ್ಲಿ ಇಬ್ಬರು ಮಹಿಳೆಯರ ಅಪಹರಿಸಿ, ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ