ETV Bharat / international

ಮಾಲಿಯಲ್ಲಿ 3 ಫ್ರೆಂಚ್ ಸೈನಿಕರ ಹತ್ಯೆ : ದಾಳಿಯ ಹೊಣೆ ಹೊತ್ತುಕೊಂಡ ಅಲ್-ಖೈದಾ ಶಾಖೆ - ಫ್ರೆಂಚ್ ಸೈನಿಕರ ಮೇಲೆ ಮಾರಣಾಂತಿಕ ದಾಳಿ

ಅಲ್-ಖೈದಾ ಭಯೋತ್ಪಾದಕ ಗುಂಪಿನ ಶಾಖೆಯಾದ ಜಮಾ ನುಸ್ರತ್ ಉಲ್-ಇಸ್ಲಾಂ ವಾ ಅಲ್-ಮುಸ್ಲಿಂ ಸಂಘಟನೆ ಮಾಲಿಯಲ್ಲಿ ಫ್ರೆಂಚ್ ಸೈನಿಕರ ಮೇಲಿನ ಮಾರಣಾಂತಿಕ ದಾಳಿಯ ಹೊಣೆ ಹೊತ್ತಿದೆ..

killing 3 French troops in Mali
ಮಾಲಿಯಲ್ಲಿ 3 ಫ್ರೆಂಚ್ ಸೈನಿಕರ ಹತ್ಯೆ
author img

By

Published : Jan 3, 2021, 8:37 AM IST

ಮಾಸ್ಕೋ(ರಷ್ಯಾ): ಮಾಲಿಯ ಅಲ್-ಖೈದಾ ಭಯೋತ್ಪಾದಕ ಗುಂಪಿನ ಶಾಖೆಯಾದ ಜಮಾ ನುಸ್ರತ್ ಉಲ್-ಇಸ್ಲಾಂ ವಾ ಅಲ್-ಮುಸ್ಲಿಂ ಸಂಘಟನೆ ಆಫ್ರಿಕಾ ದೇಶದಲ್ಲಿ ಮೂರು ಫ್ರೆಂಚ್ ಸೈನಿಕರ ಮೇಲೆ ಮಾರಣಾಂತಿಕ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಜಿಹಾದಿ ಚಟುವಟಿಕೆಗಳನ್ನು ಪತ್ತೆಹಚ್ಚುವ ಯುಎಸ್ ಮೂಲದ ಸೈಟ್ ಇಂಟೆಲಿಜೆನ್ಸ್ ಗ್ರೂಪ್ ವರದಿ ಮಾಡಿದೆ.

ಉಗ್ರಗಾಮಿ ಗುಂಪು ಮಾಲಿಯಿಂದ ಫ್ರೆಂಚ್ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ. ಮಾಲಿಯ ಹೊಂಬೋರಿ ಪ್ರದೇಶದಲ್ಲಿ ಉಗ್ರರ ವಿರುದ್ಧ ಹೋರಾಡಲು ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂವರು ಫ್ರೆಂಚ್ ಸೈನಿಕರನ್ನು ಹೊತ್ತ ಶಸ್ತ್ರಸಜ್ಜಿತ ವಾಹನ ಸ್ಫೋಟಗೊಂಡು ಸೈನಿಕರು ಬಲಿಯಾಗಿದ್ದರು.

2014 ರಲ್ಲಿ ಫ್ರಾನ್ಸ್ ಸಹೇಲ್ ಜಿ5 ದೇಶಗಳಾದ ಮೌರಿಟಾನಿಯಾ, ಮಾಲಿ, ಬುರ್ಕಿನಾ ಫಾಸೊ, ನೈಜರ್ ಮತ್ತು ಚಾಡ್​ನಲ್ಲಿ ಇಸ್ಲಾಮಿಕ್ ಗುಂಪುಗಳ ವಿರುದ್ಧ ಹೋರಾಡಲು ಆಪರೇಷನ್ ಬಾರ್ಖೇನ್ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ಮುಂದುವರಿದ ಅಶಾಂತಿಯ ಮಧ್ಯೆ, ಫ್ರಾನ್ಸ್ ಮತ್ತು 12 ದೇಶಗಳು ಕಳೆದ ಮಾರ್ಚ್‌ನಲ್ಲಿ ಟಕುಬಾ ಟಾಸ್ಕ್ ಫೋರ್ಸ್‌ ರಚಿಸಿ ಮಾಲಿಯನ್ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ನೆರವು ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.