ETV Bharat / international

ಹಕ್ಕು ಗೌರವಿಸುವ ಹೇಳಿಕೆ ಬೆನ್ನಲ್ಲೇ ಸರ್ಕಾರದ ನ್ಯೂಸ್ ಚಾನೆಲ್​​ನ ಮಹಿಳಾ ಉದ್ಯೋಗಿ ಅಮಾನತುಗೊಳಿಸಿದ ತಾಲಿಬಾನ್

author img

By

Published : Aug 18, 2021, 2:26 PM IST

Updated : Aug 18, 2021, 2:37 PM IST

ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಮಹಿಳಾ ಸುದ್ದಿ ನಿರೂಪಕರನ್ನು ತಾಲಿಬಾನ್ ನಿಷೇಧಿಸಿದೆ. ಇದಾದ ಬಳಿಕ ಅವರ ಪ್ರತಿನಿಧಿಗಳನ್ನು ಆ ಹುದ್ದೆಗೆ ನೇಮಿಸಿದೆ. ಖಾದಿಜಾ ಅಮೀನ್ ಎಂಬವರು ಇಲ್ಲಿನ ದೂರದರ್ಶನದ ಪ್ರಮುಖ ನಿರೂಪಕಿಯಾಗಿದ್ದು, ತಾಲಿಬಾನ್ ತನ್ನ ಮತ್ತು ಇತರ ಮಹಿಳಾ ಉದ್ಯೋಗಿಗಳನ್ನು ಅನಿರ್ದಿಷ್ಟಾವಧಿವರೆಗೆ ಅಮಾನತುಗೊಳಿಸಿದೆ ಎಂದು ಹೇಳಿದೆ.

Afghan Women
ಖಾದಿಜಾ ಅಮೀನ್

ನವದೆಹಲಿ: ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಾಗುವುದು ಮತ್ತು ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ತಾಲಿಬಾನ್​ ಹೇಳಿತ್ತು. ಆದರೆ ಇದೀಗ ಹೇಳಿಕೆಗೆ ಬದಲಾವಣೆಯ ಗಾಳಿ ಬೀಸಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಮಹಿಳಾ ಸುದ್ದಿ ನಿರೂಪಕರನ್ನು ತಾಲಿಬಾನ್ ನಿಷೇಧಿಸಿದೆ. ಇದಾದ ಬಳಿಕ ಅವರ ಪ್ರತಿನಿಧಿಗಳನ್ನು ಆ ಹುದ್ದೆಗೆ ನೇಮಿಸಿದೆಯಂತೆ. ಖಾದಿಜಾ ಅಮೀನ್ ಎಂಬವರು ಇಲ್ಲಿನ ದೂರದರ್ಶನದ ಪ್ರಮುಖ ನಿರೂಪಕಿಯಾಗಿದ್ದು, ತಾಲಿಬಾನ್ ತನ್ನ ಮತ್ತು ಇತರ ಮಹಿಳಾ ಉದ್ಯೋಗಿಗಳನ್ನು ಅನಿರ್ದಿಷ್ಟಾವಧಿವರೆಗೆ ಅಮಾನತುಗೊಳಿಸಿದೆ ಎಂದು ಹೇಳಿದ್ದಾರೆ.

  • Khadija Amin the new anchor on state TV last week.
    Taliban taking over her seat as of Monday.
    Ms. Amin told us her boss informed her Taliban have banned women from returning to work at state television.#Afghanistan pic.twitter.com/S4BfISKkaG

    — Farnaz Fassihi (@farnazfassihi) August 17, 2021 " class="align-text-top noRightClick twitterSection" data="

Khadija Amin the new anchor on state TV last week.
Taliban taking over her seat as of Monday.
Ms. Amin told us her boss informed her Taliban have banned women from returning to work at state television.#Afghanistan pic.twitter.com/S4BfISKkaG

— Farnaz Fassihi (@farnazfassihi) August 17, 2021 ">

"ನಾನು ಪತ್ರಕರ್ತೆ. ನನಗೆ ಕೆಲಸ ಮಾಡಲು ಈಗ ಅನುಮತಿ ಇಲ್ಲ. 20 ವರ್ಷಗಳಿಂದ ಪಟ್ಟ ಶ್ರಮ ಎಲ್ಲಾ ಹಾಳಾಗುತ್ತಿದೆ. ತಾಲಿಬಾನ್ ಎಂದರೆ ತಾಲಿಬಾನ್. ಅವರು ಬದಲಾಗಿಲ್ಲ" ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಹಿಂದೆ ಮಹಿಳೆಯರಿಗೆ ಯಾವುದೇ ಹಿಂಸೆ ನೀಡುವುದಿಲ್ಲ. ಆದರೆ, ಇಸ್ಲಾಂ ಆಧಾರದ ಮೇಲೆ ಮಹಿಳೆಯರಿಗೆ ಅವರ ಹಕ್ಕುಗಳನ್ನು ಒದಗಿಸಲು ಬದ್ಧ ಇರುವುದಾಗಿ ತಾಲಿಬಾನ್​ ವಕ್ತಾರ ಜಬೀಉಲ್ಲಾ ಮುಜಾಹಿದ್ ಹೇಳಿದ್ದರು. ಆದರೆ ಈಗ ಇಂತಹ ಘಟನೆಗಳು ಸಂಭವಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ.

ನವದೆಹಲಿ: ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಾಗುವುದು ಮತ್ತು ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ತಾಲಿಬಾನ್​ ಹೇಳಿತ್ತು. ಆದರೆ ಇದೀಗ ಹೇಳಿಕೆಗೆ ಬದಲಾವಣೆಯ ಗಾಳಿ ಬೀಸಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಮಹಿಳಾ ಸುದ್ದಿ ನಿರೂಪಕರನ್ನು ತಾಲಿಬಾನ್ ನಿಷೇಧಿಸಿದೆ. ಇದಾದ ಬಳಿಕ ಅವರ ಪ್ರತಿನಿಧಿಗಳನ್ನು ಆ ಹುದ್ದೆಗೆ ನೇಮಿಸಿದೆಯಂತೆ. ಖಾದಿಜಾ ಅಮೀನ್ ಎಂಬವರು ಇಲ್ಲಿನ ದೂರದರ್ಶನದ ಪ್ರಮುಖ ನಿರೂಪಕಿಯಾಗಿದ್ದು, ತಾಲಿಬಾನ್ ತನ್ನ ಮತ್ತು ಇತರ ಮಹಿಳಾ ಉದ್ಯೋಗಿಗಳನ್ನು ಅನಿರ್ದಿಷ್ಟಾವಧಿವರೆಗೆ ಅಮಾನತುಗೊಳಿಸಿದೆ ಎಂದು ಹೇಳಿದ್ದಾರೆ.

  • Khadija Amin the new anchor on state TV last week.
    Taliban taking over her seat as of Monday.
    Ms. Amin told us her boss informed her Taliban have banned women from returning to work at state television.#Afghanistan pic.twitter.com/S4BfISKkaG

    — Farnaz Fassihi (@farnazfassihi) August 17, 2021 " class="align-text-top noRightClick twitterSection" data=" ">

"ನಾನು ಪತ್ರಕರ್ತೆ. ನನಗೆ ಕೆಲಸ ಮಾಡಲು ಈಗ ಅನುಮತಿ ಇಲ್ಲ. 20 ವರ್ಷಗಳಿಂದ ಪಟ್ಟ ಶ್ರಮ ಎಲ್ಲಾ ಹಾಳಾಗುತ್ತಿದೆ. ತಾಲಿಬಾನ್ ಎಂದರೆ ತಾಲಿಬಾನ್. ಅವರು ಬದಲಾಗಿಲ್ಲ" ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಹಿಂದೆ ಮಹಿಳೆಯರಿಗೆ ಯಾವುದೇ ಹಿಂಸೆ ನೀಡುವುದಿಲ್ಲ. ಆದರೆ, ಇಸ್ಲಾಂ ಆಧಾರದ ಮೇಲೆ ಮಹಿಳೆಯರಿಗೆ ಅವರ ಹಕ್ಕುಗಳನ್ನು ಒದಗಿಸಲು ಬದ್ಧ ಇರುವುದಾಗಿ ತಾಲಿಬಾನ್​ ವಕ್ತಾರ ಜಬೀಉಲ್ಲಾ ಮುಜಾಹಿದ್ ಹೇಳಿದ್ದರು. ಆದರೆ ಈಗ ಇಂತಹ ಘಟನೆಗಳು ಸಂಭವಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ.

Last Updated : Aug 18, 2021, 2:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.