ಕತಾರ್: ಅಫ್ಘಾನಿಸ್ತಾನದ ಈಶಾನ್ಯ ಕಪಿಸಾ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನ್ನ ಮಾನವ ಹಕ್ಕುಗಳ ಕಾರ್ಯಕರ್ತೆ ಫ್ರೆಶ್ತಾ ಕೊಹಿಸ್ತಾನಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಕಪಿಸಾದ ಕೊಹಿಸ್ತಾನ್ ಜಿಲ್ಲೆಯ ಹೆಸ್-ಎ-ಅವಲ್ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಬಂದೂಕುಧಾರಿಯೊಬ್ಬ ಫ್ರೆಶ್ತಾ ಕೊಹಿಸ್ತಾನಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.
ಘಟನೆಯಲ್ಲಿ ಫ್ರೆಶ್ತಾ ಸಹೋದರ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಗುಪ್ತಚರ ದಳ ತನಿಖೆ ಆರಂಭಿಸಿದೆ. ಗುರುವಾರ ನಡೆದ ಈ ದಾಳಿಯ ಹೊಣೆಯನ್ನು ಯಾರೂ ಕೂಡಲೇ ವಹಿಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಕಾಬೂಲ್‌ನಲ್ಲಿ ನಡೆದ ಹಲವಾರು ದಾಳಿಯ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಈ ದಾಳಿಯಲ್ಲಿ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿಗಳೂ ಸೇರಿವೆ, ಇದರಲ್ಲಿ 50 ಜನರು ಸಾವನ್ನಪ್ಪಿದ್ದಾರೆ.
ಕಳೆದ ಮಂಗಳವಾರ, ಘಜ್ನಿ ಪ್ರಾಂತ್ಯದ ಪತ್ರಕರ್ತ ಸಂಘದ ಮುಖ್ಯಸ್ಥ ಪತ್ರಕರ್ತ ರಹಮತುಲ್ಲಾ ನಿಕ್ಜಾದ್ರನ್ನು ಹತ್ಯೆ ಮಾಡಲಾಗಿತ್ತು. ಇದು ಅಫ್ಘಾನಿಸ್ತಾನ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಬುಧವಾರ, ಅಫ್ಘಾನಿಸ್ತಾನ ವಾಚ್ಡಾಗ್ನ ಫ್ರೀ ಆ್ಯಂಡ್ ಫೇರ್ ಚುನಾವಣಾ ವೇದಿಕೆಯ ಮುಖ್ಯಸ್ಥ ಯೂಸುಫ್ ರಶೀದ್ ಹಾಗೂ ಅವರ ಚಾಲಕ ಕೂಡ ಕೊಲೆಯಾಗಿದ್ದರು.
ಓದಿ: 2 ಬಾರಿ ಸಾವಿನ ದವಡೆಗೆ ಸಿಲುಕಿದ್ದ ಉರಗ ರಕ್ಷಕ ‘ಬಿನೀಶ್’.. ಇವರೆದುರು ವಿಷ ಸರ್ಪಗಳೇ ತಲೆಬಾಗ್ತವೆ..