ಕಾಬೂಲ್(ಅಫ್ಘಾನಿಸ್ತಾನ) : ದೇಶ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆಯೇ, ಭ್ರಷ್ಟ ರಾಜಕಾರಣಿಗಳು ಸಾವಿರಾರು ಕೋಟಿ ರೂಪಾಯಿಯನ್ನು ದೋಚಿ ಇತರೆ ದೇಶಗಳಿಗೆ ಹಾರಿದ್ದಾರೆ. ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆಯುವ ವೇಳೆ ನಾಲ್ಕು ಕಾರು, ಒಂದು ಕಾಪ್ಟರ್ನಲ್ಲಿ ಹಣ ತುಂಬಿಕೊಂಡು ಹೋಗಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.
ಇದೀಗ ಉಪಾಧ್ಯಕ್ಷ ಕೂಡ 38 ಮಿಲಿಯನ್ ಪೌಂಡ್ (3,84,88,91,510 ರೂಪಾಯಿ) ಹಣದ ಸಮೇತ ದುಬೈಗೆ ಹಾರಿದ್ದಾನೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಮಾಹಿತಿಯನ್ನಾಧರಿಸಿ ಬ್ಯಾಂಕ್ನ ಒಬ್ಬ ಅಧಿಕಾರಿಯು, ಸೇನಾಧಿಕಾರಿಗಳ, ರಾಜಕಾರಣಿಗಳ ಭ್ರಷ್ಟದ ಜಾಲ ಬೇಧಿಸಿದ್ದಾರೆ. ಉಪಾಧ್ಯಕ್ಷ ತೆಗೆದುಕೊಂಡು ಹೋಗಿರುವ ಹಣ ದೇಶದ ಆರ್ಥಿಕತೆಯ 12ನೆಯ ಒಂದು ಭಾಗದಷ್ಟಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ಮಾದಕ ವಸ್ತು ಕಳ್ಳಸಾಗಾಣಿಕೆದಾರರು ಮತ್ತು ಭ್ರಷ್ಟ ಅಧಿಕಾರಿಗಳು 170 ಮಿಲಿಯನ್ ಪೌಂಡ್ ಹಣವನ್ನು ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಅಘ್ಘನ್ನಲ್ಲಿ ಇಂಥ ಭ್ರಷ್ಟಾಚಾರ ವ್ಯವಸ್ಥೆಗಳೇನು ಹೊಸದಲ್ಲ. 2010ರಲ್ಲಿ ಅಮೆರಿಕ ರಾಜತಾಂತ್ರಿಕ ಅಧಿಕಾರಿ, ಅಫ್ಘನ್ ಭದ್ರತಾ ಸಲಹೆಗಾರರನ್ನುದ್ದೇಶಿಸಿ, ಅಫ್ಘಾನಿಸ್ತಾನದ ಆಡಳಿತ ವ್ಯವಸ್ಥೆಗೆ ಭ್ರಷ್ಟಾಚಾರವು ಕೇವಲ ಒಂದು ಸಮಸ್ಯೆಯಲ್ಲ, ಇದೇ ಆಡಳಿತದ ವ್ಯವಸ್ಥೆ ಎಂದಿದ್ದರು.
ಇದನ್ನೂ ಓದಿ: ಶರಣಾದರೂ ಅಫ್ಘನ್ ಪೊಲೀಸ್ ಮುಖ್ಯಸ್ಥನ ಹತೈಗೈದ ತಾಲಿಬಾನ್.. ವಿಡಿಯೋ ವೈರಲ್
ಅಫ್ಘನ್ನಲ್ಲಿ ಪಾಶ್ಚಿಮಾತ್ಯರು ಕೇವಲ ಭ್ರಷ್ಟಾಚಾರ, ಚುನಾವಣಾ ವಂಚನೆ ಮತ್ತು ಮಾಫಿಯಾ ರಾಜ್ಯವನ್ನು ಸೃಷ್ಟಿಸುವುದಲ್ಲದೆ, ಹುಡುಗಿಯರನ್ನು ಲೈಂಗಿಕ ಗುಲಾಮರನ್ನಾಗಿ ಕಳ್ಳಸಾಗಣೆಗೆ ಒಳಪಡಿಸಿದ್ದಾರೆ. ಅಫ್ಘನ್ನ ಭ್ರಷ್ಟ ರಾಜಕಾರಣಿಗಳಿಗೆ, ದೊಡ್ಡ ದೊಡ್ಡ ನಾಯಕರಿಗೆ ಕದ್ದ ಸಂಪತ್ತನ್ನು ಬಚ್ಚಿಡಲು ದುಬೈ ಒಂದು ಸುರಕ್ಷಿತ ಸ್ಥಳವಾಗಿದೆ.