ನವದೆಹಲಿ: ಅತ್ಯಂತ ಕಠೋರ ನಿಯಮಗಳನ್ನು ತಾಳುತ್ತಿರುವ ಕಟ್ಟರ್ ಇಸ್ಲಾಮಿಸ್ಟ್ ತಾಲಿಬಾನ್ ಗುಂಪು ಹೆಣ್ಣುಮಕ್ಕಳು ಶಾಲಾ-ಕಾಲೇಜುಗಳಿಗೆ ತೆರಳುವಾಗ ಧರಿಸುವ ಬಟ್ಟೆಗಳ ಮೇಲೆ ಕಠಿಣ ನಿಯಮಗಳನ್ನು ಹೇರುತ್ತಿದ್ದಾರೆ. ಶಾಲೆಗಳಲ್ಲಿ ಹೆಣ್ಣುಮಕ್ಕಳು ಯಾವ ರೀತಿಯಲ್ಲಿ ಕುಳಿತುಕೊಳ್ಳಬೇಕು, ಅವರಿಗೆ ಯಾರು ಬೋಧಿಸಬೇಕು, ಶಾಲಾ ತರಗತಿಗಳ ವಿಸ್ತೀರ್ಣವನ್ನೂ ಅವರು ನಿಗದಿಪಡಿಸಿದ್ದಾರೆ.
ಆಮಾಜ್ ನ್ಯೂಸ್ ಏಜೆನ್ಸಿಯ ಫೋಟೋಗ್ರಾಫರ್ ಸೆರೆಹಿಡಿದ ಈ ಕಾಲೇಜು ತರಗತಿಯ ಚಿತ್ರವನ್ನೊಮ್ಮೆ ನೋಡಿ. ಇಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಬೇರ್ಪಡಿಸಲು ಪ್ರತ್ಯೇಕ ಕರ್ಟನ್(ಬಟ್ಟೆ) ಹಾಕಲಾಗಿದೆ. ಇದು ತಾಲಿಬಾನ್ ಕಪಿಮುಷ್ಠಿಯಲ್ಲಿ 'ಎಲ್ಲವೂ ಸರಿಯಾಗಿರುವ' ವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿ.
-
در تصویر: دروس دانشگاه با پرده جدایی آغاز شد #آماج_نیوز pic.twitter.com/2we0oqRnbS
— Aamaj News (@AamajN) September 6, 2021 " class="align-text-top noRightClick twitterSection" data="
">در تصویر: دروس دانشگاه با پرده جدایی آغاز شد #آماج_نیوز pic.twitter.com/2we0oqRnbS
— Aamaj News (@AamajN) September 6, 2021در تصویر: دروس دانشگاه با پرده جدایی آغاز شد #آماج_نیوز pic.twitter.com/2we0oqRnbS
— Aamaj News (@AamajN) September 6, 2021
ಕಳೆದ ಶನಿವಾರ ತಾಲಿಬಾನ್ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ತರಗತಿಗಳು ಆರಂಭವಾಗುವುದಕ್ಕೂ ಮುನ್ನ ಹೆಣ್ಣು ಮಕ್ಕಳು ಕಡ್ಡಾಯವಾಗಿ ನಿಕಾಬ್ (ಇದು ಮುಖವನ್ನು ಬಹುತೇಕ ಮುಚ್ಚುವ ವಸ್ತ್ರ) ಧರಿಸಬೇಕು. ಅದೇ ರೀತಿ, ಲಿಂಗಾಧಾರಿತವಾಗಿ ತರಗತಿಯನ್ನು ಕರ್ಟನ್ ಹಾಕುವ ಮೂಲಕ ಬೇರ್ಪಡಿಸಬೇಕು.
ಶಾಲಾ-ಕಾಲೇಜುಗಳಿಗೆ ತಾಲಿಬಾನ್ ವಿಧಿಸಿರುವ ಕಠಿಣ ನಿಯಮಗಳು ಹೀಗಿವೆ..
1. ಮಹಿಳೆಯರು/ಹೆಣ್ಣು ಮಕ್ಕಳು ಸಂಪೂರ್ಣವಾಗಿ ಬುರ್ಖಾ ಧರಿಸಬೇಕು ಎಂದು ತಿಳಿಸಿಲ್ಲ. ಆದರೆ ಕಣ್ಣುಗಳು ಮಾತ್ರ ಕಾಣಿಸುವಂತಿರುವ ನಿಕಾಬ್ ಕಡ್ಡಾಯವಾಗಿ ಧರಿಸಿರಬೇಕು.
2. ಲಿಂಗಾಧಾರಿತವಾಗಿ ಶಾಲಾ-ಕಾಲೇಜು ತರಗತಿಯನ್ನು ಕರ್ಟನ್ ಹಾಕುವ ಮೂಲಕ ಬೇರ್ಪಡಿಸಬೇಕು.
3. ಶಾಲೆಗಳಿಗೆ ಹಾಜರಾಗುವ ಹೆಣ್ಣುಮಕ್ಕಳಿಗೆ ಮಹಿಳಾ ಶಿಕ್ಷಕಿಯರು ಮಾತ್ರ ಬೋಧಿಸಬೇಕು. ಇದು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ 'ಸನ್ನಡತೆ ಹೊಂದಿರುವ ಪ್ರಾಯ ಆಗಿರುವ ವ್ಯಕ್ತಿ'ಯನ್ನು ಬಳಸಿಕೊಳ್ಳಬಹುದು. ವಿಶ್ವವಿದ್ಯಾಲಯಗಳು ಹೆಣ್ಣುಮಕ್ಕಳಿಗೆ ಪಾಠ ಹೇಳಲು ಮಹಿಳಾ ಬೋಧಕ ಸಿಬ್ಬಂದಿಯನ್ನೇ ನೇಮಿಸಿಕೊಳ್ಳಬೇಕು.
4. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಳಸಬೇಕು. ಮಹಿಳೆಯರು ಐದು ನಿಮಿಷ ಮುನ್ನವೇ ಪ್ರವೇಶ ಅಥವಾ ನಿರ್ಗಮನ ಮಾಡಿ ಪುರುಷರು ಮತ್ತು ಮಹಿಳೆಯರು ಒಟ್ಟು ಸೇರುವುದನ್ನು ತಡೆಯಬೇಕು.
ಈ ಬಗ್ಗೆ ವಿಶ್ವವಿದ್ಯಾನಿಲಯವೊಂದರ ಪ್ರೊಫೆಸರ್ ಪ್ರತಿಕ್ರಿಯೆ ಹೀಗಿದೆ...
ಹೆಸರು ಹೇಳಲಿಚ್ಚಿಸದ ಕಾಬೂಲ್‌ನ ಪ್ರೊಫೆಸರ್ ಒಬ್ಬರು ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಇದು ಆಗದೇ ಇರುವ ಕೆಲಸ. ಈ ನಿಯಮವನ್ನು ಪಾಲಿಸಲು ನಮ್ಮಲ್ಲಿ ಮಹಿಳಾ ಸಿಬ್ಬಂದಿ ಇಲ್ಲ. ಆದರೆ, ಅವರು ಹೆಣ್ಣುಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಹೋಗಲು ಬಿಡುತ್ತಿರುವುದೇ ದೊಡ್ಡ ಸಂಗತಿ' ಎಂದು ನಿಟ್ಟುಸಿರುಬಿಟ್ಟರು.
ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಕ್ಕಾನಿ ಹೇಳಿದ್ದು..
ಈ ಬಗ್ಗೆ ವಾರದ ಹಿಂದೆ ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಕ್ಕಾನಿ ಮಾತನಾಡಿ, 'ತಾಲಿಬಾನ್ ವಿವೇಚನೆವುಳ್ಳ ಇಸ್ಲಾಮಿಕ್ ಬೋಧನಾ ಕ್ರಮವನ್ನು ಪರಿಚಯಿಸುತ್ತಿದೆ. ಇದು ರಾಷ್ಟ್ರೀಯ ಹಿತಾಸಕ್ತಿ, ದೇಶದ ಐತಿಹಾಸಿಕ ಹಿನ್ನೆಲೆ, ಇಸ್ಲಾಂ ನೀತಿಯನ್ನು ಅನುಸರಿಸುತ್ತದೆ. ವಿದ್ಯಾರ್ಥಿಗಳು ಪರಸ್ಪರ ಸ್ಪರ್ಧೆ ಹಾಗು ಇತರೆ ದೇಶಗಳ ಜೊತೆ ಸ್ಪರ್ಧಿಸಲು ಪಠ್ಯಕ್ರಮ ನೆರವಾಗಲಿದೆ' ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಜನರನ್ನು ಕಾಡುವ ಪ್ರಶ್ನೆ, ಅನುಮಾನಗಳೇನು?
1. ಶಿಕ್ಷಣ ಸಂಸ್ಥೆಗಳು, ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಮಹಿಳೆಯರು ಮುಕ್ತ, ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಸಿಗುವುದೇ?
2. ಇದು ಸಾರ್ವಜನಿಕ ಕ್ಷೇತ್ರಗಳಲ್ಲಿ ಮಹಿಳೆಯರು ಸೇರದಂತೆ ಮಾಡುವ ವ್ಯವಸ್ಥಿತ ಪ್ರಕ್ರಿಯೆಯೇ?