ಕಾಬೂಲ್ (ಅಫ್ಘಾನಿಸ್ತಾನ್): ಇಲ್ಲಿನ ರಾಜಧಾನಿ ಕಾಬೂಲ್ನ ಪಶ್ಚಿಮ ಪ್ರವೇಶದ್ವಾರ ಪ್ರಬಲ ಕಾರು ಬಾಂಬ್ ಸ್ಫೋಟಗೊಂಡ ಪರಿಣಾಮ 8 ಮಂದಿ ಸಾವನಪ್ಪಿ 47 ನಾಗರಿಕರು ಗಾಯಗೊಂಡಿದ್ದರು. ಇದೀಗ ಈ ಘಟನೆ ಸಂಬಂಧ ವಿಶ್ವಸಂಸ್ಥೆ ಖಂಡಿಸಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಯು ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ ಎಂದಿದೆ.
ಶುಕ್ರವಾರ ನಡೆದ ದಾಳಿಯಲ್ಲಿ 14 ಮನೆಗಳು ನೆಲಕ್ಕುರುಳಿದ್ದವು, ಘಟನೆಯಲ್ಲಿ ಓರ್ವ ರಕ್ಷಣಾ ಪಡೆ ಸಿಬ್ಬಂದಿ ಸಾವನ್ನಪ್ಪಿ 11 ಮಂದಿ ಗಾಯಗೊಂಡಿದ್ದರು. ಆದರೆ, ಈ ದಾಳಿ ಯಾವ ಸಂಘಟನೆ ನಡೆಸಿದೆ ಎಂಬುದು ತಿಳಿದು ಬಂದಿಲ್ಲ. ಅಲ್ಲದೇ ಯಾವೊಂದು ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ.
ಈ ಭೀಕರ ದಾಳಿಗಳು ನಾಗರಿಕರು, ನ್ಯಾಯಾಂಗ, ಮಾಧ್ಯಮ, ಆರೋಗ್ಯ ರಕ್ಷಣೆ ಮತ್ತು ಮಾನವ ಹಕ್ಕು ಕಾರ್ಯಕರ್ತರನ್ನು ಗುರಿಯಾಗಿಸಿವೆ. ಇದರಲ್ಲಿ ಪ್ರಮುಖ ಸ್ಥಾನಗಳಲ್ಲಿರುವ ಮಹಿಳೆಯರು, ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವವರು ಮತ್ತು ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಒಳಗೊಂಡಿದೆ ಎಂದು ಕೌನ್ಸಿಲ್ ತಿಳಿಸಿದೆ.
ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಹರಿದ ನೆತ್ತರು: ನಾಲ್ವರು ಪ್ರತಿಭಟನಕಾರರನ್ನು ಗುಂಡಿಕ್ಕಿ ಕೊಂದ ಭದ್ರತಾ ಪಡೆ