ಇಸ್ಲಾಮಾಬಾದ್: ಪಾಕಿಸ್ತಾನಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಇಸ್ಲಾಮಾಬಾದ್ನಿಂದ ಅಪಹರಿಸಿ, ಹಲವು ಗಂಟೆಗಳ ಕಾಲ ಒತ್ತೆಯಾಳುಗಳಾಗಿರಿಸಿಕೊಂಡು ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಉಭಯ ದೇಶಗಳ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಫ್ಘಾನಿಸ್ತಾನದ ರಾಯಭಾರಿಯ ಮಗಳು ಸಿಲ್ಸಿಲಾ ಅಲಿಖಿಲ್ (26) ಬಾಡಿಗೆ ವಾಹನದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಅಪರಿಚಿತರಿಂದ ಕೆಲ ಗಂಟೆಗಳ ಕಾಲ ಅಪಹರಣಕ್ಕೊಳಗಾಗಿದ್ದಾರೆ. ಆ ಬಳಿಕ ಸಿಲ್ಸಿಲಾಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಅಘ್ಘನ್ ಸರ್ಕಾರ ತಿಳಿಸಿದೆ. ಆದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿಲ್ಲ.
-
3/3 yesterday my daughter was kidnapped from Islamabad and beaten heavily, but by Allah blessing escaped. She feels better now.
— Najibullah Alikhil (@NajibAlikhil) July 17, 2021 " class="align-text-top noRightClick twitterSection" data="
This inhuman attack has been following by the concerned authorities of both countries.
I express my profound gratitude for the messages of sympathy.
">3/3 yesterday my daughter was kidnapped from Islamabad and beaten heavily, but by Allah blessing escaped. She feels better now.
— Najibullah Alikhil (@NajibAlikhil) July 17, 2021
This inhuman attack has been following by the concerned authorities of both countries.
I express my profound gratitude for the messages of sympathy.3/3 yesterday my daughter was kidnapped from Islamabad and beaten heavily, but by Allah blessing escaped. She feels better now.
— Najibullah Alikhil (@NajibAlikhil) July 17, 2021
This inhuman attack has been following by the concerned authorities of both countries.
I express my profound gratitude for the messages of sympathy.
ಬಳಿಕ ಅಪಹರಣಕಾರರಿಂದ ಬಿಡುಗಡೆ ಹೊಂದಿದ ಸಿಲ್ಸಿಲಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಹಾಗೂ ಅಫ್ಘಾನಿಸ್ತಾನದ ರಾಯಭಾರಿ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಅಘ್ಘನ್, ಪಾಕಿಸ್ತಾನಕ್ಕೆ ಒತ್ತಾಯಿಸಿದೆ.
ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಯಭಾರಿ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಿಳಿಸಿದೆ.