ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ದೇಶದ ಈಶಾನ್ಯ ಪ್ರಾಂತ್ಯದಲ್ಲಿರುವ ಪಂಜ್ಶೀರ್ ಮೇಲೆ ಹಿಡಿತ ಸಾಧಿಸಲು ಹೋರಾಡುತ್ತಿದೆ. ಈ ವೇಳೆ ಅಂದಾಜು 600ಕ್ಕೂ ಹೆಚ್ಚು ತಾಲಿಬಾನಿಗಳನ್ನು ಪಂಜ್ಶೀರ್ ಪಡೆ ಬೇಟೆಯಾಡಿದೆ. ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಸೆರೆ ಹಿಡಿಯಲಾಗಿದೆ ಎಂದು ಪ್ರತಿರೋಧ ಪಡೆಗಳ ವಕ್ತಾರ ಫಹಿಮ್ ದಷ್ಟಿ ಟ್ವೀಟ್ ಮಾಡಿದ್ದಾರೆ.
ಇತರ ಆಫ್ಘನ್ ಪ್ರಾಂತ್ಯಗಳಿಂದ ಸಹಾಯ ಪಡೆಯುವಲ್ಲಿ ತಾಲಿಬಾನ್ ವಿಫಲವಾಗಿದ್ದು, ಸಮಸ್ಯೆಗಳನ್ನು ಎದುರಿಸುತ್ತಿವೆ. ಪಂಜ್ಶೀರ್ನಲ್ಲಿ ಭೂ ಗಣಿಗಳು ಹೆಚ್ಚಿರುವುದರಿಂದ ತಾಲಿಬಾನ್ ಆಕ್ರಮಣ ಮಂದಗತಿಯಲ್ಲಿ ಸಾಗಿದೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಹೆಣಗಾಟ.. ಮುಂದಿನ ವಾರಕ್ಕೆ ಮುಂದೂಡಿಕೆ
ಪಂಜ್ಶೀರ್ಅನ್ನು ತೆಕ್ಕೆಗೆ ತೆಗೆದುಕೊಳ್ಳಲು ಅಲ್ಲಿನ ತಾಲಿಬಾನ್ ಹೋರಾಟ ನಡೆಸುತ್ತಲೇ ಇದೆ. ಆಫ್ಘನ್ಅನ್ನು ತಾಲಿಬಾನ್ ವಶಕ್ಕೆ ಪಡೆಯುತ್ತಿದ್ದಂತೆ, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ ತನ್ನನ್ನು ತಾನು ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು. ಅವರು ಇತ್ತೀಚೆಗೆ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, ಪರಿಸ್ಥಿತಿ ಕಷ್ಟಕರವಾಗಿದೆ. ನಾವು ಆಕ್ರಮಣಕ್ಕೆ ಒಳಗಾಗಿದ್ದೇವೆ. ತಾಲಿಬಾನಿಗಳ ವಿರುದ್ಧ ನಮ್ಮ ಪ್ರತಿರೋಧ ಮುಂದುವರಿಯುತ್ತಲೇ ಇರುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ:ಆಫ್ಘನ್ನಲ್ಲಿ ಸರ್ಕಾರ ರಚನೆಗೆ ಚುನಾವಣೆ ಅತ್ಯಗತ್ಯ: ಇರಾನ್ ಅಧ್ಯಕ್ಷ