ETV Bharat / international

ಏಷ್ಯಾ ಪೆಸಿಫಿಕ್ ಉದ್ಯೋಗಗಳು ಮತ್ತು ಆದಾಯಗಳ ಮೇಲೆ ಕೊರೊನಾ ಪರಿಣಾಮ: ಐಎಲ್ಒ ವರದಿ - report by the International Labour Organisation

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಹೊಸ ವರದಿಯಲ್ಲಿ, ಲಭ್ಯವಿರುವ ತ್ರೈಮಾಸಿಕ ದತ್ತಾಂಶವನ್ನು ಬಳಸಿಕೊಂಡು, ಪ್ರಾದೇಶಿಕ ನಿರುದ್ಯೋಗ ದರವು 2019 ರಲ್ಲಿ ಶೇ. 4.4 ರಿಂದ 2020 ರಲ್ಲಿ ಶೇ. 5.2 ರಿಂದ 5.7 ರವರೆಗೆ ಹೆಚ್ಚಾಗಬಹುದು ಎಂಬ ಪ್ರಾಥಮಿಕ ಅಂದಾಜು ನೀಡುತ್ತದೆ.

ಏಷ್ಯಾ ಪೆಸಿಫಿಕ್ ಉದ್ಯೋಗಗಳು ಮತ್ತು ಆದಾಯಗಳ ಮೇಲೆ ಕೊರೊನಾ ಪರಿಣಾಮ

author img

By

Published : Dec 18, 2020, 5:54 PM IST

ಬ್ಯಾಂಕಾಕ್ (ಥಾಯ್ಲೆಂಡ್​ ): ಕೊರೊನಾ ಬಿಕ್ಕಟ್ಟಿನಿಂದಾಗಿ ಕೆಲಸದ ಸಮಯದಲ್ಲಿ ಭಾರಿ ಇಳಿಕೆಯಾಗಿದ್ದು, ಇದು ಏಷ್ಯಾ ಪೆಸಿಫಿಕ್ ಉದ್ಯೋಗಗಳು ಮತ್ತು ಆದಾಯಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಹೊಸ ವರದಿಯಲ್ಲಿ ತಿಳಿಸಿದೆ.

'ಏಷ್ಯಾ ಪೆಸಿಫಿಕ್ ಉದ್ಯೋಗ ಮತ್ತು ಸಾಮಾಜಿಕ ಔಟ್‌ಲುಕ್ 2020 ರ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿನ್ನಡೆ 2020 ರಲ್ಲಿ ಸುಮಾರು 81 ದಶಲಕ್ಷ ಉದ್ಯೋಗಗಳ ನಷ್ಟಕ್ಕೆ ಕಾರಣವಾಯಿತು.

2020 ರ ತ್ರೈಮಾಸಿಕ ದತ್ತಾಂಶವನ್ನು ಹೊಂದಿರುವ ಬಹುತೇಕ ಎಲ್ಲ ಆರ್ಥಿಕತೆಗಳಲ್ಲಿ, ಉದ್ಯೋಗ ಮಟ್ಟವು 2019ಕ್ಕೆ ಹೋಲಿಸಿದರೆ ಸಂಕುಚಿತಗೊಂಡಿದೆ. ನಿರುದ್ಯೋಗ ಹೆಚ್ಚಾಗುವುದರೊಂದಿಗೆ ಬಿಕ್ಕಟ್ಟಿನ ಪರಿಣಾಮವು ಬಹುದೊಡ್ಡದಾಗಿದೆ. ಒಟ್ಟಾರೆಯಾಗಿ, ಏಷ್ಯಾ ಪೆಸಿಫಿಕ್​ನಲ್ಲಿನ ಕೆಲಸದ ಸಮಯವು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 15.2 ರಷ್ಟು ಮತ್ತು 2020 ರ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 10.7 ರಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ: ಸುವೇಂದು ರಾಜೀನಾಮೆ ತಿರಸ್ಕರಿಸಿದ ವಿಧಾನಸಭೆ ಸ್ಪೀಕರ್!

ಲಭ್ಯವಿರುವ ತ್ರೈಮಾಸಿಕ ದತ್ತಾಂಶವನ್ನು ಬಳಸಿಕೊಂಡು, ಪ್ರಾದೇಶಿಕ ನಿರುದ್ಯೋಗ ದರವು 2019 ರಲ್ಲಿ ಶೇ. 4.4 ರಷ್ಟಿದ್ದರೆ 2020 ರಲ್ಲಿ ಶೇ. 5.2 ರಿಂದ 5.7 ರವರೆಗೆ ಹೆಚ್ಚಾಗಬಹುದು ಎಂಬ ಪ್ರಾಥಮಿಕ ಅಂದಾಜು ನೀಡುತ್ತದೆ.

ಕೊರೊನಾ ಈ ಪ್ರದೇಶದ ಕಾರ್ಮಿಕ ಮಾರುಕಟ್ಟೆಗಳ ಮೇಲೆ ಭಾರೀ ಹೊಡೆತ ನೀಡಿದೆ. ಈ ಪ್ರದೇಶದ ಕೆಲವು ಸರ್ಕಾರಗಳು ಈ ಪರಿಸ್ಥಿತಿ ನಿಭಾಯಿಸಲು ಸಿದ್ಧವಾಗಿವೆ ಎಂದು ಐಎಲ್ಒ ಸಹಾಯಕ ಮಹಾ ನಿರ್ದೇಶಕ ಮತ್ತು ಏಷ್ಯಾ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ಚಿಹೋಕೊ ಅಸಡಾ ಮಿಯಾಕಾವಾ ಹೇಳಿದ್ದಾರೆ.

ವರದಿಯ ಪ್ರಕಾರ, ಈ ಪ್ರದೇಶದ ಹೆಚ್ಚಿನ ದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರ ಉದ್ಯೋಗದಲ್ಲಿ ದೊಡ್ಡ ಕುಸಿತ ಕಂಡಿದೆ. ಅಲ್ಲದೆ, ಪುರುಷರಿಗಿಂತ ಮಹಿಳೆಯರು ನಿರುದ್ಯೋಗಿಗಳಾಗುವ ಸಾಧ್ಯತೆ ಹೆಚ್ಚಾಗಿದೆ.

ಇದರ ಪರಿಣಾಮವಾಗಿ ಬಡತನದ ಮಟ್ಟದಲ್ಲಿ ಹೆಚ್ಚಳವಾಗಲಿದೆ. ವರದಿಯಲ್ಲಿನ ಪ್ರಾಥಮಿಕ ಅಂದಾಜಿನ ಪ್ರಕಾರ ಹೆಚ್ಚುವರಿಯಾಗಿ 22 ದಶಲಕ್ಷದಿಂದ 25 ದಶಲಕ್ಷ ಜನರು ಬಡತನಕ್ಕೆ ಸಿಲುಕಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.