ರಿಯಾದ್: ಸೌದಿ ಅರೇಬಿಯಾದ ಅಭಾ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ತುಂಬಿದ್ದ ಡ್ರೋನ್ ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇನ್ನೂ ಹೌತಿ ಬಂಡುಕೋರರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕಳೆದ 24 ಗಂಟೆಗಳಲ್ಲಿ ಅಭಾ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಮೊದಲು ನಡೆದ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಇಂದು ನಡೆದ ಡ್ರೋನ್ ದಾಳಿಯಲ್ಲಿ 8 ಮಂದಿ ಗಾಯಗೊಳ್ಳುವ ಜೊತೆಗೆ ನಾಗರಿಕ ವಿಮಾನವೂ ಹಾನಿಗೊಳಗಾಗಿದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.
-
#BREAKING: #Saudi air defenses intercepts another #Houthi drone targeting Abha International Airport Tuesday morning, injuring 8 people and damaging a civilian plane pic.twitter.com/wzZPkHObH7
— Saudi Gazette (@Saudi_Gazette) August 31, 2021 " class="align-text-top noRightClick twitterSection" data="
">#BREAKING: #Saudi air defenses intercepts another #Houthi drone targeting Abha International Airport Tuesday morning, injuring 8 people and damaging a civilian plane pic.twitter.com/wzZPkHObH7
— Saudi Gazette (@Saudi_Gazette) August 31, 2021#BREAKING: #Saudi air defenses intercepts another #Houthi drone targeting Abha International Airport Tuesday morning, injuring 8 people and damaging a civilian plane pic.twitter.com/wzZPkHObH7
— Saudi Gazette (@Saudi_Gazette) August 31, 2021
ಇದನ್ನೂ ಓದಿ: ಯೆಮನ್ ಸೇನಾ ನೆಲೆ ಮೇಲೆ ಹೌತಿ ಬಂಡುಕೋರರ ದಾಳಿ: 30 ಸೈನಿಕರು ಸಾವು
ಕಳೆದ ಹಲವು ತಿಂಗಳುಗಳಲ್ಲಿ ಹೌತಿ ಬಂಡುಕೋರರು ಪದೇ ಪದೆ ಸೌದಿ ಅರೇಬಿಯಾ ಮೇಲೆ ಡ್ರೋನ್ ದಾಳಿ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ಯೆಮನ್ನಲ್ಲಿರುವ ಸೌದಿ ನೇತೃತ್ವದ ಪಡೆಗಳಿಗೆ ಸೇರಿದ ಅತಿದೊಡ್ಡ ಸೇನಾ ನೆಲೆಯ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಸುಮಾರು 30 ಸೈನಿಕರು ಹುತಾತ್ಮರಾಗಿದ್ದರು ಮತ್ತು 60 ಮಂದಿ ಗಾಯಗೊಂಡಿದ್ದರು.