ETV Bharat / international

ಅಫ್ಘಾನ್​​​​ನಲ್ಲಿ  ವೈಮಾನಿಕ ದಾಳಿ: ಮಗು ಸೇರಿ 8 ಮಂದಿ ಸಾವು - ​​ ತಾಲಿಬಾನ್ ವಿರುದ್ಧ ಏರ್​​ ಸ್ಟ್ರೈಕ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ ಮಗು ಸೇರಿದಂತೆ ಸುಮಾರು 8 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

8-dead-in-afghan-airstrike-amid-us-taliban-peace-efforts
ಮಗು ಸೇರಿ 8 ಜನ ಸಾವು
author img

By

Published : Feb 15, 2020, 3:13 PM IST

ಕಾಬೂಲ್​​ :ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ ಮಗು ಸೇರಿದಂತೆ ಸುಮಾರು 8 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಂಗರ್​ಹಾರ್​​ನ ಪೂರ್ವ ಪ್ರಾಂತ್ಯದಲ್ಲಿ​​ ತಾಲಿಬಾನ್ ವಿರುದ್ಧ ಈ ಏರ್​​ಸ್ಟ್ರೈಕ್​ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಮಗು ಸೇರಿದಂತೆ ಎಂಟು ನಾಗರಿಕರು ಅಸುನೀಗಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರ ವಕ್ತಾರ ಹೇಳಿದ್ದಾರೆ.

ಅಲ್ಲದೇ ಕಾರ್ಯಾಚರಣೆ ವೇಳೆ ಒಂಬತ್ತು ತಾಲಿಬಾನ್ ಯೋಧರು ಸಹ ಸಾವನ್ನಪ್ಪಿದ್ದಾರೆ ಎಂದು ನಂಗರ್ಹಾರ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವನ್ನಪ್ಪಿರುವ ನಾಗರೀಕರು ಪಿಕ್​​ನಿಕ್​ ಮುಗಿಸಿ ವಾಪಸ್ ಬರುತ್ತಿದ್ದರು ಎನ್ನಲಾಗಿದೆ.

ಇನ್ನು ಯುಎಸ್ ಮತ್ತು ದಂಗೆಕೋರರ ಗುಂಪಿನ ನಡುವಣ ಶಾಂತಿ ಮಾತುಕತೆ ಪ್ರಗತಿಯಲ್ಲಿರುವಾಗಲೇ ಈ ದಾಳಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.