ಬೀಜಿಂಗ್: ಬುಧವಾರ ರಾತ್ರಿ ಎರಡು ನಿಮಿಷಗಳ ಅಂತರಲ್ಲಿ ಎರಡು ಭೂಕಂಪಗಳು ಸಂಭವಿಸಿರುವ ಘಟನೆ ಚೀನಾದ ತೈವಾನ್ನಲ್ಲಿ ನಡೆದಿದೆ. ತೈವಾನ್‌ನ ಟೈಡಾಂಗ್ ಕೌಂಟಿ ಮತ್ತು ಹುವಾಲಿಯನ್ ಕೌಂಟಿಯಲ್ಲಿ ಪ್ರಬಲ ಭೂಕಂಪಗಳ ಸಂಭವಿಸಿವೆ ಎಂದು ಚೀನಾ ಭೂಕಂಪನ ನೆಟ್‌ವರ್ಕ್ ಕೇಂದ್ರ ತಿಳಿಸಿದೆ. ಹೌದು, ಇಂದು ಬೆಳಗ್ಗೆ 1:41 ಗಂಟೆಗೆ ತೈವಾನ್‌ನ ಟೈಡಾಂಗ್ ಕೌಂಟಿಯಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು 23.45 ಡಿಗ್ರಿ ಉತ್ತರ ಮತ್ತು 20 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಚೀನಾ ಭೂಕಂಪನ ನೆಟ್‌ವರ್ಕ್ ಕೇಂದ್ರ (CENC) ತಿಳಿಸಿದೆ.
ಓದಿ: ದಲಿತ ಯುವಕನ ಮೇಲೆ ಹಲ್ಲೆ: ಆ್ಯಸಿಡ್ನಿಂದ ಹಣೆ ಮೇಲೆ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ
ಅದೇ ರೀತಿ 1:43ಕ್ಕೆ ಹುವಾಲಿಯನ್ ಕೌಂಟಿಯಲ್ಲಿ 5.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಕೇಂದ್ರ ಭೂಕಂಪನ ನೆಟ್‌ವರ್ಕ್ ಕೇಂದ್ರ ತಿಳಿಸಿದೆ. ಭೂಕಂಪನದ ಕೇಂದ್ರ ಬಿಂದು 23.50 ಡಿಗ್ರಿ ಉತ್ತರದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ತಿಳಿಸಿದೆ. ಇನ್ನು ಸಾವು - ನೋವುಗಳ ಸೇರಿದಂತೆ ಇನ್ನಿತರ ಮಾಹಿತಿ ಲಭ್ಯವಾಗಬೇಕಾಗಿದೆ. ಇದೇ ತೈವಾನ್ನಲ್ಲಿ 1999ರಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿತ್ತು. ಅದರಲ್ಲಿ 2400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.