ಡಮಾಸ್ಕಸ್ (ಸಿರಿಯಾ): ಪಾಲ್ಮೈರ ಹಾಗೂ ಡೀರ್ ಇಜ್ ಜೋರ್ ಸಂಪರ್ಕಿಸುವ ಹೆದ್ದಾರಿಯಲ್ಲಿ ಮಿಲಿಟರಿ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸ್ಪುಟ್ನಿಕ್ ಮಿಲಿಟರಿ ಮೂಲ ತಿಳಿಸಿದೆ.
ಅಟ್-ಟ್ಯಾನ್ಫ್ ಪ್ರದೇಶದಿಂದ ಮಧ್ಯಾಹ್ನ 1.40ರ ಸುಮಾರಿಗೆ ಆಗಮಿಸಿದ ಭಯೋತ್ಪಾದಕರ ತಂಡ, ಅಲ್ - ಶೋಲಾ ಪಟ್ಟಣದ ಪಾಲ್ಮೈರ ಹಾಗೂ ಡೀರ್ ಇಜ್ ಜೋರ್ ಸಂಪರ್ಕಿಸುವ ಹೆದ್ದಾರಿಯಲ್ಲಿ ಮಿಲಿಟರಿ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.
ಡಿಸೆಂಬರ್ 30ರಂದು ಭಯೋತ್ಪಾದಕರು ಇದೇ ಪ್ರದೇಶದಲ್ಲಿ ನಾಗರಿಕರನ್ನು ಸಾಗಿಸುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ, 28 ಜನರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದರು.
ಜೋರ್ಡಾನ್ ಗಡಿಯಲ್ಲಿರುವ ದಕ್ಷಿಣ ಸಿರಿಯಾದ ಅಟ್-ಟ್ಯಾನ್ಫ್ ಪ್ರದೇಶವನ್ನು ಯುಎಸ್ ಮಿಲಿಟರಿ ನಿಯಂತ್ರಿಸುತ್ತದೆ.