ಸಿಂಗಪುರ್: ಸಿಂಗಪುರದಲ್ಲಿ ಭಾನುವಾರ ವರದಿಯಾದ 42 ಹೊಸ ಕೊರೊನಾ ವೈರಸ್ ಪ್ರಕರಣಗಳಲ್ಲಿ ಮೂವರು ಭಾರತೀಯರು ಸೇರಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 844 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಹೊಸದಾಗಿ ಪತ್ತೆಯಾದ ಪ್ರಕರಣದಲ್ಲಿರುವವರು ಯುರೋಪ್, ಉತ್ತರ ಅಮೆರಿಕಾ, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಏಷ್ಯಾದ ಇತರೆ ಭಾಗಗಳಿಂದ ಪ್ರಯಾಣ ಬೆಳೆಸಿ ಬಂದವರು. ರಾಜ್ಯದಲ್ಲಿ 844 ಮಾರಣಾಂತಿಕ ಕೊರೊನಾ ವೈರಸ್ ಸೋಂಕಿತರು ಕಂಡುಬಂದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
35 ವರ್ಷದ ಮಹಿಳೆ, ಸಿಂಗಪುರ್ ವರ್ಕ್ ಪಾಸ್ ಹೊಂದಿರುವ 34 ವರ್ಷದ ವ್ಯಕ್ತಿ ಮತ್ತು ಇನ್ನೊಬ್ಬರು 43 ವರ್ಷದ ಮೂವರು ಭಾರತೀಯರಲ್ಲಿ ಸೋಂಕು ಕಂಡು ಬಂದಿದೆ.
ಅಮೆರಿಕಾದ ಜಾನ್ಸ್ ಹೊಕಿನ್ಸ್ ಕೊರೊನಾ ವೈರಸ್ ಸಂಶೋಧನಾ ಕೇಂದ್ರದ ವಿವಿ ಪ್ರಕಾರ, ಜಾಗತಿಕವಾಗಿ 32,000 ಕ್ಕೂ ಹೆಚ್ಚು ಜನರು ಕೋವಿಡ್-19 ಗೆ ಸಾವನ್ನಪ್ಪಿದ್ದಾರೆ ಮತ್ತು 6,84,652 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.