ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು-ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ 16 ಸೈನಿಕರು ಹಾಗೂ 10 ಮಂದಿ ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಹೊರಬಿದ್ದಿದ್ದು, ಇದರಲ್ಲಿ ಉಗ್ರರ ಕಮಾಂಡರ್ ಅಬ್ದುಲ್ ಹಕೀಮ್ ಸಾವನ್ನಪ್ಪಿದ್ದಾರೆ.
ಓದಿ: ನಾರ್ವೆಯಲ್ಲಿ ಕಂಡು ಬಂದಿದ್ದ ರೂಪಾಂತರಿ ಕೊರೊನಾ ವೈರಸ್ ಈಗ ಹಾಲೆಯಲ್ಲಿ ಪತ್ತೆ
ಖಾನಾಬಾದ್ ಜಿಲ್ಲೆಯ ಸ್ಥಳೀಯರು ತಿಳಿಸಿರುವ ಮಾಹಿತಿ ಪ್ರಕಾರ ನೂರಾರು ತಾಲಿಬಾನ್ ಉಗ್ರರು ಸೈನಿಕರ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದಾಗಿ ತಿಳಿಸಿದ್ದಾರೆ.