ಕಾಬುಲ್: ಅಫ್ಘಾನಿಸ್ತಾನದ ಉರುಜ್ಗಾನ್ ಪ್ರಾಂತ್ಯದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಲ್ಲಿನ ವಿಶೇಷ ಸೇನಾ ಪಡೆ 12 ಮಂದಿ ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದೆ.
ಕಳೆದ ರಾತ್ರಿ ನಡೆದಿರುವ ಈ ದಾಳಿಯಲ್ಲಿ 8 ಮಂದಿ ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂದು 205ನೇ ಅಟಲ್ ತುಕಡಿಯ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಬಗ್ಗೆ ಈವರೆಗೆ ತಾಲಿಬಾನ್ ಸಂಘಟನೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಉರುಜ್ಗಾನ್ ಪ್ರಾಂತ್ಯದ ಗಿಜಾಬ್ ಮತ್ತು ದೇಹ್ ರಾವೂದ್ ಜಿಲ್ಲೆಗಳಲ್ಲಿ ಕಳೆದ 3 ತಿಂಗಳಿನಿಂದ ಸೇನೆ ಹಾಗೂ ತಾಲಿಬಾನ್ ನಡುವೆ ದಾಳಿಗಳು ನಡೆಯುತ್ತಲೇ ಇವೆ. ಅಫ್ಘಾನ್ ಸೇನೆಯ ಕೆಲ ಪ್ರದೇಶಗಳನ್ನು ತಾಲಿಬಾನ್ ವಶಪಡಿಸಿಕೊಂಡು ಅದರ ನಿರ್ವಹಣೆಯನ್ನು ಮಾಡುತ್ತಿದೆ.