ETV Bharat / international

ಟ್ವಿಟರ್​ನಲ್ಲಿ ಮೋದಿ ಅವರನ್ನು ದಿಢೀರ್​ ಅನ್​ ಫಾಲೋ ಮಾಡಿದ ವೈಟ್​ ಹೌಸ್​... ಕಾರಣ?

ಪ್ರಧಾನಿ ಮೋದಿ ಟ್ವಿಟರ್​ ಖಾತೆ ಫಾಲೋ ಮಾಡ್ತಿದ್ದ ಅಮೆರಿಕದ ವೈಟ್​ ಹೌಸ್​ ಇದೀಗ ದಿಢೀರ್​ ಆಗಿ ಅನ್​ಫಾಲೋ ಮಾಡಿದ್ದು, ಇದು ಅನೇಕ ಗೊಂದಲಗಳಿಗೆ ಕಾರಣವಾಗಿದೆ.

White House
White House
author img

By

Published : Apr 30, 2020, 1:57 PM IST

Updated : Apr 30, 2020, 2:04 PM IST

ನವದೆಹಲಿ: ಕಳೆದ ಕೆಲ ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ, ಕಚೇರಿಯ ಟ್ವಿಟರ್​​ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರ ಟ್ವಿಟರ್​ ಖಾತೆ ಫಾಲೋ ಮಾಡುತ್ತಿದ್ದ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಇದೀಗ ದಿಢೀರ್​ ಆಗಿ ಅನ್​ಫಾಲೋ ಮಾಡಿದೆ.

ಫೆಬ್ರವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ, ವೈಟ್​ ಹೌಸ್​​ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಟ್ವಿಟರ್​ ಖಾತೆ ಫಾಲೋ ಮಾಡಲು ಶುರು ಮಾಡಿತ್ತು. ಜತೆಗೆ ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಹಾಗೂ ಯುಎಸ್​​ನಲ್ಲಿರುವ ಭಾರತ ರಾಯಭಾರಿ ಕಚೇರಿ ಕೂಡ ಫಾಲೋ ಮಾಡುತ್ತಿದ್ದವು. ಆದರೆ, ಇದೀಗ ಅನ್​ಫಾಲೋ ಮಾಡಿವೆ.

ಪಿಎಂ ಮೋದಿ ಫಾಲೋ ಮಾಡ್ತಿರುವ ವೈಟ್​ಹೌಸ್​... ಈ ಗೌರವಕ್ಕೆ ಪಾತ್ರರಾದ ವಿಶ್ವದ ಮೊದಲ ನಾಯಕ!

ಕಾರಣ ಏನು!?

ಶ್ವೇತಭವನದ ಟ್ವಿಟರ್​, ಅಮೆರಿಕ ಸರ್ಕಾರದ ಹಿರಿಯ ವ್ಯಕ್ತಿಗಳ ಖಾತೆಯನ್ನು ಮಾತ್ರ ಫಾಲೋ ಮಾಡುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೇರೆ ಬೇರೆ ದೇಶಗಳಿಗೆ ಪ್ರವಾಸ ಕೈಗೊಂಡಾಗ ಅಲ್ಲಿನ ವ್ಯಕ್ತಿಗಳ ಟ್ವಿಟರ್ ಖಾತೆ ಸ್ವಲ್ಪ ದಿನಗಳ ಮಟ್ಟಿಗೆ​​ ಮಾತ್ರ ಫಾಲೋ ಮಾಡುತ್ತದೆ. ಬಹಳ ಹಿಂದಿನಿಂದಲೂ ಈ ಸಂಪ್ರದಾಯ ಇದೆ. ಅದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದಿದ್ದಾರೆ. ಸದ್ಯ 13 ವ್ಯಕ್ತಿಗಳು ಈ ಟ್ವಿಟರ್​​ನಲ್ಲಿದ್ದು, ಎಲ್ಲರೂ ಅಮೆರಿಕದವರು ಎಂಬುದು ಗಮನಾರ್ಹ.

ಇನ್ನು ಅಮೆರಿಕ ಮನವಿಗೆ ಸ್ಪಂದಿಸಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್​ ಮಾತ್ರೆ ರಫ್ತು ಮಾಡಿತ್ತು. ಇದರ ಬೆನ್ನಲ್ಲೇ ವೈಟ್ ಹೌಸ್​​ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟರ್​ ಖಾತೆ ಫಾಲೋ ಮಾಡಿದೆ ಎಂಬ ಮಾತು ಕೇಳಿ ಬಂದಿತ್ತು.

Last Updated : Apr 30, 2020, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.