ವಾಷಿಂಗ್ಟನ್: ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ಸ್ನ ವೆಬ್ಸೈಟ್ ಸೋಮವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಕುರಿತು ಕುತೂಹಲಕಾರಿ ಸಂದೇಶವನ್ನು ಪ್ರದರ್ಶಿಸಿದ್ದು, ಅವರ ಅವಧಿ ಕೊನೆಗೊಂಡಿವೆ ಎಂದು ಹೇಳಿದೆ.
"ಡೊನಾಲ್ಡ್ ಜೆ. ಟ್ರಂಪ್ ಅವರ ಅವಧಿ 2021-01-11 19:42:55ರಂದು ಕೊನೆಗೊಂಡಿತು" ಎಂದು ವೆಬ್‌ಸೈಟ್‌ನಲ್ಲಿ ಬರೆಯಲಾಗಿತ್ತು.
"ಮೈಕೆಲ್ ಆರ್. ಪೆನ್ಸ್ ಅವರ ಅವಧಿ 2021-01-11 19:46:38ರಂದು ಕೊನೆಗೊಂಡಿತು" ಎಂದು ಬರೆಯಲಾಗಿತ್ತು.
ಈ ಸಂದೇಶಗಳ ಹಿಂದಿನ ಕಾರಣಗಳು ಸ್ಪಷ್ಟವಾಗಿಲ್ಲ. ಸ್ವಲ್ಪ ಸಮಯದ ನಂತರ ಸಂದೇಶಗಳನ್ನು ತೆಗೆದುಹಾಕಲಾಗಿದ್ದು, "ಕ್ಷಮಿಸಿ, ಈ ಸೈಟ್ ಪ್ರಸ್ತುತ ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ. ದಯವಿಟ್ಟು ಕೆಲವು ಕ್ಷಣಗಳಲ್ಲಿ ಮತ್ತೆ ಪ್ರಯತ್ನಿಸಿ." ಎಂದು ಬರೆಯಲಾಗಿತ್ತು.
ಕೆಲವು ಸ್ಥಳೀಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಇದರ ಹಿಂದೆ "ಅಸಮಾಧಾನಗೊಂಡ ರಾಜ್ಯ ಇಲಾಖೆಯ ಸಿಬ್ಬಂದಿ"ಯ ಕೈವಾಡ ಎಂದು ಎಂದು ಹೇಳುತ್ತಿವೆ. ಈ ಘಟನೆಯ ಬಗ್ಗೆ ಶ್ವೇತಭವನ ಮತ್ತು ರಾಜ್ಯ ಇಲಾಖೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.