ವಾಷಿಂಗ್ಟನ್: ಭಾರತದೊಂದಿಗೆ ಸಂಬಂಧ ವೃದ್ಧಿಗಾಗಿ ಅಮೆರಿಕಾದ NATO ಮಿತ್ರ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ಸಂಬಂಧ ಸೆನೆಟ್ನಲ್ಲಿ ವಿಧೇಯಕ ಜಾರಿ ಮಾಡಲಾಗಿದೆ.
ನ್ಯಾಷನಲ್ ಡಿಫೆನ್ಸ್ ಅಥಾರಿಟಿ ಆ್ಯಕ್ಟ್ (NDAA) ಅನ್ನು ಕಳೆದ ವಾರ ಸೆನೆಟ್ನಲ್ಲಿ ಮಂಡಿಸಲಾಗಿತ್ತು. ಇಸ್ರೇಲ್ ಹಾಗೂ ದಕ್ಷಿಣ ಕೊರಿಯಾದಂತೆ ಭಾರತವನ್ನು ನ್ಯಾಟೋ ಒಕ್ಕೂಟದ ಜತೆ ಸೇರಿಸಿಕೊಳ್ಳುವ ಮೂಲಕ ರಕ್ಷಣಾ ಸಹಕಾರ ವಿಸ್ತರಿಸುವ ಅಂಶಗಳು ಇದರಲ್ಲಿವೆ.
ಭಾರತದ ಕಾಕಸ್ ಕೊ ಚೇರ್ ಸೆನೆಟರ್ ಜಾನ್ ಕಾರ್ನಿನ್ ಹಾಗೂ ಮಾರ್ಕ್ ವಾರ್ನರ್ ಸೇರಿ ಪ್ರಸ್ತಾವನೆ ಮಂಡಿಸಿದ್ದರು. ಹೊಸ ತಿದ್ದುಪಡಿಯಿಂದ, ಭಯೋತ್ಪಾದನೆ ವಿರುದ್ಧ ಹಾಗೂ ಆಂತರಿಕ ಭದ್ರತೆಗಾಗಿ ಭಾರತ-ಅಮೆರಿಕ ನಡುವಿನ ರಕ್ಷಣಾ ಸಹಕಾರ ಹೆಚ್ಚಲಿದೆ ಎಂದು ಹೇಳಲಾಗಿದೆ.
ಈ ವಿಧೇಯಕವು ಅಮೆರಿಕ ಕಾಂಗ್ರೆಸ್ನ ಹೌಸ್ ಆಫ್ ರೆಪ್ರಸೆಂಟೇಟಿವ್ ಹಾಗೂ ಸೆನೆಟ್ ಎರಡರಲ್ಲೂ ಅಂಗೀಕಾರ ಪಡೆಯಬೇಕಿದೆ.
2016ರಲ್ಲಿಯೇ ಭಾರತವನ್ನು ಪ್ರಮುಖ ರಕ್ಷಣಾ ಸಹವರ್ತಿ ಎಂದು ಅಮೆರಿಕ ಘೋಷಿಸಿದೆ. ಇದರಂತೆ ಅಮೆರಿಕದಿಂದ ಅತ್ಯಾಧುನಿಕ ಹಾಗೂ ಸೂಕ್ಷ್ಮ ತಂತ್ರಜ್ಞಾನವನ್ನು ಭಾರತ ಖರೀದಿಸುತ್ತಿದೆ. ಹೊಸ ಕಾಯ್ದೆ ಮೂಲಕ ಈ ಸಂಬಂಧ ಮತ್ತಷ್ಟು ವೃದ್ಧಿಸಲಿದೆ.