ವಾಷಿಂಗ್ಟನ್: ಕೋವಿಡ್ ಕೇಸ್ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ದಿನವೊಂದಕ್ಕೆ ನಿರಂತರವಾಗಿ ದಾಖಲಾಗುತ್ತಿದ್ದ ಪಾಸಿಟಿವ್ ಪ್ರಕರಣಗಳ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.
ನವೆಂಬರ್ 2020ರ ಬಳಿಕ ಅಮೆರಿಕದಲ್ಲಿ ಇದೇ ಮೊದಲ ಬಾರಿ 24 ಗಂಟೆಗಳಲ್ಲಿ ಕೇವಲ 40,428 ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಪ್ರಸ್ತುತ ಅಮೆರಿಕದಲ್ಲಿ ಪ್ರತಿನಿತ್ಯ ಸರಾಸರಿ 65 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.
ಇದನ್ನೂ ಓದಿ: ಲಸಿಕೆ ಕುರಿತ ವದಂತಿ ಹರಡಲು ಸೋಷಿಯಲ್ ಮೀಡಿಯಾ ಬಳಕೆದಾರರೇ ಕಾರಣ: ಫೇಸ್‌ಬುಕ್
ನಿನ್ನೆ ಅಮೆರಿಕದಲ್ಲಿ ಒಟ್ಟಾರೆ 589 ಮಂದಿ ಕೋವಿಡ್ನಿಂದ ಅಸುನೀಗಿದ್ದರು. ಇದು 2020ರ ಅಕ್ಟೋಬರ್ 6ರ ಬಳಿಕ ದಾಖಲಾದ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ದಿನೇ ದಿನೆ ಅಮೆರಿಕದಲ್ಲಿ ಸಾವು ಹಾಗೂ ಪಾಸಿಟಿವ್ ಸಂಖ್ಯೆಯಲ್ಲಿನ ಇಳಿಕೆ ಕಾಣುತ್ತಿರುವುದು ಜೋ ಬೈಡನ್ ಸರ್ಕಾರ ಹಾಗೂ ಜನರು ನಿರಾಳರಾಗುವಂತೆ ಮಾಡಿದೆ.
ಅಮೆರಿಕದಲ್ಲಿ ಇದುವರೆಗೂ 3.8 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು 135 ಮಿಲಿಯನ್ ಅಂದರೆ 13 ಕೋಟಿ ಲಸಿಕೆಗಳನ್ನ ದೇಶಾದ್ಯಂತ ಹಂಚಿಕೆ ಮಾಡಲಾಗಿದೆ ಎಂದು ಅಮೆರಿಕ ರೋಗ ನಿಯಂತ್ರಣ ಇಲಾಖೆ ಸಿಡಿಎಸ್ ಹೇಳಿದೆ. ಇಲ್ಲಿಯವರೆಗೆ ಒಟ್ಟು 3,01,38,586 ಕೇಸ್ಗಳು ಹಾಗೂ 5,48,013 ಸಾವು ವರದಿಯಾಗಿದೆ.