ETV Bharat / international

ಅರಬ್ಬೀ ಸಮುದ್ರದಲ್ಲಿ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಯುಎಸ್ ನೇವಿ - ಅರಬ್ಬೀ ಸಮುದ್ರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶ

ಅರಬ್ಬೀ ಸಮುದ್ರದ ಉತ್ತರ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಯುಎಸ್​ ನೌಕಾಪಡೆ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

Arms seized from vessel in Arabian Sea
ಪತ್ತೆ ಹಚ್ಚಲಾದ ಭಾರೀ ಪ್ರಮಾಣ ಶಸ್ತ್ರಾಸ್ತ್ರ
author img

By

Published : May 9, 2021, 11:54 AM IST

ವಾಷಿಂಗ್ಟನ್ : ಅರಬ್ಬೀ ಸಮುದ್ರದ ಹಡಗೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಯುಎಸ್ ನೌಕಾಪಡೆ ತಿಳಿಸಿದೆ. ಇದು ಯೆಮನ್​ನಲ್ಲಿ ನಡೆಯುತ್ತಿರುವ ದೀರ್ಘ ಕಾಲದ ಸಂಘರ್ಷದ ನಡುವೆ ಯುಎಸ್​ ಸೇನೆ ನಡೆಸಿದ ಇತ್ತೀಚಿನ ಕಾರ್ಯಾಚರಣೆಯಾಗಿದೆ.

ಯುಎಸ್​ ನೌಕಾಪಡೆಯ ಮಿಸೆಲ್ ಕ್ರೂಸರ್ ಯುಎಸ್​ಎಸ್​ ಮಾಂಟೆರೆ, ಶಸ್ತ್ರಾಸ್ತ್ರ ತುಂಬಿದ್ದ ಹಡಗನ್ನು ಪತ್ತೆ ಹಚ್ಚಿದೆ. ಈ ಹಡಗು ಯಾವುದೇ ನಿರ್ದಿಷ್ಟ ದೇಶಕ್ಕೆ ಸೇರಿದ್ದಲ್ಲ. ಸಾಮಾನ್ಯವಾಗಿ ಮಧ್ಯಪ್ರಾಚ್ಯದಲ್ಲಿ ಸಂಚರಿಸುವಂತದ್ದು ಎಂದು ಅಮೆರಿಕದ ಸೇನೆ ತಿಳಿಸಿದೆ. ಅರಬ್ಬೀ ಸಮುದ್ರದ ಉತ್ತರ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಈ ಹಡಗನ್ನು ಸೆರೆ ಹಿಡಿಯಲಾಗಿದೆ.

ಪತ್ತೆ ಹಚ್ಚಲಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ

ಓದಿ : ಡಮಾಸ್ಕಸ್ ಗೇಟ್​ನಲ್ಲಿ ನಡೆದ ಘರ್ಷಣೆ: 80 ಪ್ಯಾಲೆಸ್ತೀನಿಯರಿಗೆ ಗಾಯ

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಚೀನಿ ನಿರ್ಮಿತ ಕಲಾಶ್ನಿಕೋವ್ ರೈಫಲ್‌ಗಳು, ಸ್ನೈಪರ್ ರೈಫಲ್‌ಗಳು, ಹೆವಿ ಮಷಿನ್ ಗನ್ ಮತ್ತು ರಾಕೆಟ್ ಚಾಲಿತ ಗ್ರೆನೇಡ್ ಲಾಂಚರ್‌ಗಳು ಸೇರಿವೆ. ಇವುಗಳು ಎಲ್ಲಿಂದ ರವಾನೆ ಆಗುತ್ತಿದ್ದವು ಎಂಬುದು ಸಹ ನಿಗೂಢವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.