ETV Bharat / international

ಅಫ್ಘಾನ್​ನಲ್ಲಿ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ ಹತ್ಯೆ.. ಅಮೆರಿಕ ಸಂತಾಪ

author img

By

Published : Jul 17, 2021, 10:57 AM IST

ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ ಹತ್ಯೆಗೆ ಅಮೆರಿಕ ಆಡಳಿತ ಖಂಡನೆ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದೆ. ವಿಶ್ವದ ಹಲವಾರು ಗಣ್ಯರು ಸಿದ್ದಿಕಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Danish Siddiqui
Danish Siddiqui

ವಾಷಿಂಗ್ಟನ್: ಆಫ್ಘನ್ ಪಡೆಗಳು ಮತ್ತು ತಾಲಿಬಾನ್​ ಉಗ್ರರ ನಡುವಿನ ಸಂಘರ್ಷದ ಬಗ್ಗೆ ವರದಿ ಮಾಡಲು ತೆರಳಿದ್ದ ಭಾರತದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಗಲಭೆಯಲ್ಲಿ ಮೃತಪಟ್ಟ ಡ್ಯಾನಿಶ್​ ಸಿದ್ಧಿಕಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಯುಎಸ್ ಶಾಸಕರು ಸಂತಾಪ ಸೂಚಿಸಿದ್ದಾರೆ.

ರಾಯಿಟರ್ಸ್​ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧಿಕಿ, ಆಫ್ಘನ್ ಸಂಘರ್ಷದ ಬಗ್ಗೆ ವರದಿ ಮಾಡಲು ಪಾಕ್​ ಗಡಿಯ ಸ್ಪಿನ್​ ಬೋಲ್ಡಾಕ್​ಗೆ ತೆರಳಿದ್ದರು. ಈ ವೇಳೆ ನಡೆದ ಸಂಘರ್ಷದಲ್ಲಿ ಅವರು ಹತ್ಯೆಗೀಡಾಗಿದ್ದಾರೆ. ವಿಶ್ವದ ಅತ್ಯಂತ ತುರ್ತು ಮತ್ತು ಸವಾಲಿನ ಸಮಯದಲ್ಲಿ ಸಿದ್ಧಿಕಿ, ಅತ್ಯಂತ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ರು. ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ವರದಿ ಮಾಡಿದಾಗ ಅವರಿಗೆ 2018 ರಲ್ಲಿ ಪುಲಿಟ್ಜೆರ್​ ಪ್ರಶಸ್ತಿ ಪಡೆದಿದ್ದರು.

ಸಿದ್ಧಿಕಿ ನಿಧನ ರಾಯಿಟರ್ಸ್ ಮತ್ತು ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೂ ಅಪಾರ ನಷ್ಟವಾಗಿದೆ. ಅಫ್ಘಾನಿಸ್ತಾನದಲ್ಲಿ ಹಲವಾರು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಹಿಂಸಾಚಾರವನ್ನು ಕೊನೆಗೊಳಿಸಲು ನಾವು ಕರೆ ನೀಡುತ್ತಲೇ ಇದ್ದೇವೆ. ಅಫ್ಘಾನಿಸ್ತಾನದಲ್ಲಿ ನ್ಯಾಯಯುತ ಮತ್ತು ಶಾಂತಿ ಇತ್ಯರ್ಥವೇ ಮುಂದಿನ ಮಾರ್ಗವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತೀಯ ಪತ್ರಕರ್ತನ ಸಾವಿಗೆ ಸೆನೆಟ್ ವಿದೇಶಾಂಗ ಸಮಿತಿಯ ರ್ಯಾಂಕಿಂಗ್ ಸದಸ್ಯ ಸೆನೆಟರ್ ಜಿಮ್ ರಿಶ್ ಸಂತಾಪ ಸೂಚಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ರಾಯಿಟರ್ಸ್ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿ ಅವರ ಸಾವು ದುರಂತ ಎಂದು ಉಲ್ಲೇಖಿಸಿರುವ ಅವರು, ಪತ್ರಕರ್ತರು ಸುದ್ದಿ ಮಾಡುವಾಗ ತೆಗೆದುಕೊಳ್ಳುವ ಅಪಾಯ ಅಷ್ಟಿಷ್ಟಲ್ಲ. ತಮ್ಮ ಕೆಲಸ ಮಾಡಬೇಕಾದರೆ, ಯಾವುದೇ ವರದಿಗಾರನನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ತಾಲಿಬಾನ್​ ದಾಳಿಗೆ​ ಪುಲಿಟ್ಜರ್ ಪುರಸ್ಕೃತ ಭಾರತದ ಫೋಟೋ ಜರ್ನಲಿಸ್ಟ್​ ಬಲಿ

ರಾಯಿಟರ್ಸ್ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಅವರ ಸಾವು ದುರಂತ ಸೂಚನೆಯಾಗಿದ್ದು, ಯುಎಸ್ ಮತ್ತು ಅದರ ಪಾಲುದಾರರು ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಆದರೂ, ಪತ್ರಕರ್ತರು ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪತ್ರಕರ್ತರ ಜೀವಕ್ಕೆ ಹೆಚ್ಚಿನ ಅಪಾಯವಿದೆ ಎಂದು ಸಿಪಿಜೆಯ ಏಷ್ಯಾದ ಸ್ಟೀವನ್ ಬಟ್ಲರ್ ಹೇಳಿದ್ದಾರೆ. ಈವರೆಗೆ ಅಂದಾಜು 12 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.