ETV Bharat / international

ಕೊರೊನಾ ಸೋಂಕಿತರ ಸಾವಿನಲ್ಲಿ ಅಮೆರಿಕಾ ಹೊಸ ದಾಖಲೆ: ದೊಡ್ಡಣ್ಣನ ವಾಸ್ತವ ಸ್ಥಿತಿ ಹೀಗಿದೆ... - President Donald Trump

ಮಹಾಮಾರಿ ಕೊರೊನಾ ವೈರಸ್‌ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿದೆ. ಈವರೆಗೆ ಕೋವಿಡ್‌ 19 ಸೋಂಕಿತರ ಸಂಖ್ಯೆ 1.34 ಲಕ್ಷಕ್ಕೆ ಏರಿಕೆಯಾಗಿದೆ. ಈ ವೈರಸ್‌ ಅಮೆರಿಕಾದಲ್ಲಿ ಹೊಸ ದಾಖಲೆಯನ್ನು ಬರೆದಿದ್ದು, ಒಂದೇ ದಿನ 2,596 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಚೀನಾದಲ್ಲಿ ಕೋವಿಡ್‌19 ಮತ್ತೆ ಸದ್ದು ಮಾಡಿದ್ದು, ಹೊಸದಾಗಿ 46 ಪ್ರಕರಣಗಳು ದಾಖಲಾಗಿವೆ.

President Donald Trump
ಡೊನಾಲ್ಡ್‌ ಟ್ರಂಪ್‌
author img

By

Published : Apr 16, 2020, 2:17 PM IST

ವಾಷಿಂಗ್ಟನ್​: ಕೊರೊನಾ... ನೊವೆಲ್‌ ಕೊರೊನಾ... ಸದ್ಯ ಇಡೀ ವಿಶ್ವವೇ ಪತರಗುಟ್ಟುವಂತೆ ಮಾಡಿರುವ ಈ ಮಹಾಮಾರಿ ಕೊಟ್ಟ ಹೊಡೆತ ಅಂತಿಂಥದಲ್ಲ. ಇದುವರೆಗೆ 200ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿರುವ ಕೊರೊನಾ ವೈರಸ್‌ ಸುಮಾರು 1 ಲಕ್ಷ 34 ಸಾವಿರ ಮಂದಿಯನ್ನು ಬಲಿ ಪಡೆದುಕೊಂಡಿದೆ. 20.83 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಐರೋಪ್ಯ ದೇಶಗಳಲ್ಲೇ ಇದರ ಪ್ರಭಾವ ಹೆಚ್ಚಾಗಿದೆ.

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೊನಾ ವೈರಸ್‌ ಮಿಂಚಿನ ವೇಗದಲ್ಲಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ದೇಶದಲ್ಲಿ 2,569 ಮಂದಿ ಮೃತಪಟ್ಟಿದ್ದಾರೆ. ಇಷ್ಟು ಜನ ಒಂದೇ ದಿನ ಪ್ರಾಣ ಕಳೆದುಕೊಂಡಿರೋದು ಇದೇ ಮೊದಲಾಗಿದ್ದು, ಕೋವಿಡ್‌ ಸಾವಿನಲ್ಲಿ ಹೊಸ ದಾಖಲೆಯಾಗಿದೆ. ಇದರೊಂದಿಗೆ ಅಮೆರಿಕಾದಲ್ಲಿ ಸಾವಿನ ಸಂಖ್ಯೆ 28,326ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 6,37,000ಕ್ಕೆ ತಲುಪಿದೆ.

ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ:

ಅಮೆರಿಕಾದ ಆರ್ಥಿಕತೆ ಮೇಲೆ ಕೊರೊನಾ ವೈರಸ್‌ ಎಷ್ಟು ಪರಿಣಾಮ ಬೀರಲಿದೆ ಎಂಬ ಮಾಹಿತಿ ಆಧಾರ ಸಹಿತ ಬಹಿರಂಗವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಷ್ಟ ಸಂಭವಿಸಲಿದೆ ಎನ್ನಲಾಗಿದೆ. 1992ರ ಬಳಿಕ ಈ ಬಾರಿ 2020ರ ಮಾರ್ಚ್‌ನಲ್ಲಿ ಅಂಗಡಿ, ರೆಸ್ಟೋರೆಂಟ್‌ಗಳ ವಹಿವಾಟು ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಎರಡನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕೈಗಾರಿಕೆ ಉತ್ಪಾದನೆಯ ಪ್ರಮಾಣವೂ ಗಣನೀಯವಾಗಿ ಕುಸಿದಿದೆ. ನಿರುದ್ಯೋಗ ಹೆಚ್ಚುತ್ತಲೇ ಇದೆ. ಕಳೆದ ಮೂರು ವಾರಗಳಲ್ಲಿ 1 ಕೋಟಿ 70 ಲಕ್ಷ ಮಂದಿ ನಿರುದ್ಯೋಗದ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಆರ್ಥಿಕ ವ್ಯವಸ್ಥೆಯ ಮೇಲೆ ಕೊರೊನಾ ವೈರಸ್‌ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಅಲ್ಲಿನ ಪ್ರಜೆಗಳ ನೆರೆವಿಗೆ ಧಾವಿಸಿರುವ ಟ್ರಂಪ್‌ ಸರ್ಕಾರ, ಎಲ್ಲರ ಖಾತೆಗಳಿಗೆ ಹಣ ಜಮೆ ಮಾಡುತ್ತಿದೆ.

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾ ಅಗ್ರಸ್ಥಾನಕ್ಕೇರಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಒಪ್ಪಿಕೊಂಡಿದ್ದಾರೆ. ಆದ್ರೆ ಈ ತಿಂಗಳಿನಲ್ಲೇ ಕೆಲವು ರಾಜ್ಯಗಳು ಸಾಧಾರಣ ಸ್ಥಿತಿಗೆ ಬರುತ್ತವೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ. ಕೋವಿಡ್‌19 ವಿರುದ್ಧದ ಹೋರಾಟ ಮುಂದುವರೆದಿದೆ. ಎಲ್ಲಾ ರಾಜ್ಯಗಳ ಗರ್ವನರ್‌ಗಳ ಜೊತೆ ಚರ್ಚಿಸುತ್ತೇವೆ. ನಂತರ ಎಲ್ಲ ಕಾರ್ಯಾಲಯಗಳನ್ನು ಮತ್ತೆ ಪ್ರಾರಂಭಿಸುವುದಕ್ಕೆ ಇಂದು ಹೊಸ ಮಾರ್ಗದರ್ಶಿಯನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಚೀನಾದಲ್ಲಿ ಮತ್ತೆ ಹೊಸದಾಗಿ 46 ಕೋವಿಡ್‌ ಕೇಸ್‌ಗಳು:

ಚೀನಾದಲ್ಲಿ ಕೊರೊನಾ 2.0 ವಿಸ್ತರಣೆಯಾಗುತ್ತಿದೆ. ನಿನ್ನೆ ಮತ್ತೆ ಹೊಸದಾಗಿ 46 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 34 ಮಂದಿ ವಿದೇಶಿಗರಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಕೋವಿಡ್‌19ನ ಕೇಂದ್ರ ಬಿಂದು ವುಹಾನ್‌ನಲ್ಲಿ ಹೊಸದಾಗಿ ಯಾವುದೇ ಪ್ರಕಣಗಳು ದಾಖಲಾಗಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.