ವಾಷಿಂಗ್ಟನ್: ಉತ್ತರ ಡಕೋಟಾ, ಅಲಬಾಮಾ ಮತ್ತು ದಕ್ಷಿಣ ಕೆರೊಲಿನಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲ್ಲುವ ನಿರೀಕ್ಷೆಯಿದೆ.
ಉತ್ತರ ಡಕೋಟಾ ಮೂರು ಚುನಾವಣಾ ಮತಗಳನ್ನು ಹೊಂದಿದ್ದರೆ, ಅಲಬಾಮಾ ಮತ್ತು ದಕ್ಷಿಣ ಕೆರೊಲಿನಾ ತಲಾ ಒಂಬತ್ತು ಚುನಾವಣಾ ಮತಗಳನ್ನು ಹೊಂದಿವೆ ಎಂದು ಸಿಎನ್ಎನ್ ವರದಿ ಮಾಡಿದೆ.
ಸಿಎನ್‌ಎನ್ ಪ್ರಕಾರ, ದಕ್ಷಿಣ ಡಕೋಟಾ, ಅರ್ಕಾನ್ಸಾಸ್, ಇಂಡಿಯಾನಾ, ಒಕ್ಲಹಾಮ್, ಕೆಂಟುಕಿ, ವೆಸ್ಟ್ ವರ್ಜೀನಿಯಾ ಮತ್ತು ಟೆನ್ನೆಸ್ಸೀಗಳನ್ನು ಟ್ರಂಪ್ ಗೆಲ್ಲುವ ನಿರೀಕ್ಷೆಯಿದೆ.
ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಕೊಲೊರಾಡೋ, ಕನೆಕ್ಟಿಕಟ್, ವರ್ಮೊಂಟ್, ಡೆಲಾವೇರ್, ವಾಷಿಂಗ್ಟನ್, ಡಿಸಿ, ಮೇರಿಲ್ಯಾಂಡ್, ಮೆಸಾಚೂಸೆಟ್ಸ್, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.
ಅಯೋವಾ, ಮೊಂಟಾನಾ, ನೆವಾಡಾ ಮತ್ತು ಉತಾಹ್‌ನಲ್ಲಿನ ಮತದಾನ ಕೇಂದ್ರಗಳು ರಾತ್ರಿ 10 ಗಂಟೆಗೆ ಮುಚ್ಚಲಿವೆ. ಗೆಲುವು ಸಾಧಿಸಲು ಪ್ರತಿ ಅಭ್ಯರ್ಥಿಗೆ 538 ಚುನಾವಣಾ ಮತಗಳಲ್ಲಿ ಕನಿಷ್ಠ 270 ಮತಗಳ ಅಗತ್ಯವಿದೆ.
ಈ ವರ್ಷ ಸುಮಾರು 239(23.9 ಕೋಟಿ) ಮಿಲಿಯನ್ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮೇಲ್-ಇನ್ ಮತಪತ್ರಗಳನ್ನು ಎಣಿಸಲು ಕೆಲ ದಿನಗಳು ಬೇಕಾಗಬಹುದು.