ವಾಷಿಂಗ್ಟನ್: ಈ ಹಿಂದೆ ಎಂದೂ ನಡೆಯದ ರೀತಿಯಲ್ಲಿ ಅಮೆರಿಕ ಚುನಾವಣೆ ಕುತೂಹಲ ಮೂಡಿಸಿದೆ. ಇದಲ್ಲದೆ, ಕಳೆದ 100 ವರ್ಷಗಳಲ್ಲೇ ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಒಟ್ಟು ಅರ್ಹ ಮತದಾರರ ಸಂಖ್ಯೆ 23.9 ಮಿಲಿಯನ್ ಇದೆ. ಅದರಲ್ಲಿ 10 ಮಿಲಿಯನ್ ಜನರು ಈಗಾಗಲೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಚುನಾವಣಾ ದಿನದಂದು ಸುಮಾರು 6 ಕೋಟಿ ಜನರು ಮತ ಚಲಾಯಿಸಿದ್ದಾರೆ. ಇದರೊಂದಿಗೆ, 16 ಕೋಟಿ ಜನರು ಈ ಬಾರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು ಶೇ.67ರಷ್ಟು ಮತದಾನವಾದಂತಾಗಿದೆ. ನೂರಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಮಟ್ಟದ ಮತದಾನವಾಗಿದೆ ಎಂದು ತಿಳಿದುಬಂದಿದೆ.
1908 ರಲ್ಲಿ ಅತಿ ಹೆಚ್ಚು ಮತದಾನ ಅಂದ್ರೆ ಶೇ. 65.7 ಮತದಾನವಾಗಿತ್ತು. ಈಗ 67 ಪ್ರತಿಶತದಷ್ಟು ಮತಗಳನ್ನು ನೋಂದಾಯಿಸಿಕೊಳ್ಳಲಾಗಿದೆ. 1900ರ ನಂತರ ಇದೇ ಮೊದಲ ಬಾರಿಗೆ ಮತದಾನವು ಈ ಮಟ್ಟದಲ್ಲಿ ನಡೆದಿದೆ ಎಂದು ಯುನೈಟೆಡ್ ಸ್ಟೇಟ್ಸ್ ಚುನಾವಣಾ ಯೋಜನೆಯ ನಿರ್ವಾಹಕರಾದ ಮೈಕೆಲ್ ಮೆಕ್ಡೊನಾಲ್ಡ್ ಮಾಹಿತಿ ನೀಡಿದರು.
ಕೊರೊನಾ ವೈರಸ್‌ನಿಂದ ಉಂಟಾದ ಪರಿಸ್ಥಿತಿಗಳಿಂದಾಗಿ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಅಂಚೆ ಮತಗಳನ್ನು ಅನುಮತಿಸಲಾಗಿದೆ. ಇದು ಭಾರಿ ಪ್ರಮಾಣದ ಮತದಾನಕ್ಕೂ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇವುಗಳ ಜೊತೆಗೆ, ದೇಶದ ಆರ್ಥಿಕ ಪರಿಸ್ಥಿತಿ, ಕೋವಿಡ್ ಉತ್ಕರ್ಷ, ವರ್ಣಭೇದ ನೀತಿ ಮತ್ತು ಇತರ ಅಂಶಗಳು ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿದೆ.