ETV Bharat / international

ಮಾರಣಾಂತಿಕ ಕೊರೊನಾ ವೈರಸ್‌ಗೆ ಔಷಧ ಕಂಡುಹಿಡಿಯಲು ಮುಂದಾದ ಅಮೆರಿಕ - China corona virus news

ಚೀನಾದಲ್ಲಿ ಪತ್ತೆಯಾಗಿರುವ ಮಾರಣಾಂತಿಕ ಕೊರೊನಾ ವೈರಸ್​ ವಿರುದ್ಧ ಅಮೆರಿಕ ಲಸಿಕೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಬೀಜಿಂಗ್​ನ ಅಂತಾರಾಷ್ಟ್ರೀಯ ಆರೋಗ್ಯ ಅಧಿಕಾರಿಗಳ ಸಹಕಾರ ಕೋರಿದೆ.

ಕೊರೊನಾ ವೈರಸ್​
ಕೊರೊನಾ ವೈರಸ್​
author img

By

Published : Jan 29, 2020, 9:58 AM IST

ವಾಷಿಂಗ್ಟನ್: ಚೀನಾದಲ್ಲಿ ಪತ್ತೆಯಾಗಿರುವ ಮಾರಣಾಂತಿಕ ಕೊರೊನಾ ವೈರಸ್​ ವಿರುದ್ಧ ಅಮೆರಿಕ ಲಸಿಕೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಬೀಜಿಂಗ್​ನ ಅಂತಾರಾಷ್ಟ್ರೀಯ ಆರೋಗ್ಯ ಅಧಿಕಾರಿಗಳ ಸಹಕಾರ ಕೋರಿದೆ.

ಕೊರೊನಾ ವೈರಸ್ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಪತ್ತೆಹಚ್ಚಲು ಅಮೆರಿಕ ಸರ್ಕಾರ ತಮ್ಮದೇ ಆದ ತಂಡವೊಂದನ್ನು ಬೀಜಿಂಗ್‌ಗೆ ಕಳುಹಿಸಲು ಮುಂದಾಗಿದೆ. ಈ ತಂಡ ವೈರಸ್​ ಕುರಿತಾದ ಮಾಹಿತಿ ಮತ್ತು ರೋಗಕಾರಕದ ಬಗ್ಗೆ ಅಧ್ಯಯನ ನಡೆಸಲಿದೆ.

ಈ ಮಾರಕ ವೈರಸ್​ ಕುರಿತಾದ ಅಂಕಿಅಂಶಗಳನ್ನು ಪರಿಶೀಲಿಸಲು ಮತ್ತು ರೋಗಕಾರಕದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಯುಎಸ್ ಸರ್ಕಾರ ತನ್ನದೇ ತಂಡಗಳನ್ನು ಚೀನಾಕ್ಕೆ ಕಳುಹಿಸಲು ಉತ್ಸುಕವಾಗಿದೆ. ನಾವು ಈಗಾಗಲೇ ಅನೇಕ ಸಹದ್ಯೋಗಿಗಳೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಈ ಪ್ರಕ್ರಿಯೆಯಲ್ಲಿ ಮೊದಲ ಪ್ರಯೋಗವನ್ನು ಪ್ರಾರಂಭಿಸಲು ಮೂರು ತಿಂಗಳು, ಡೇಟಾವನ್ನು ಸಂಗ್ರಹಿಸಲು ಇನ್ನೂ ಮೂರು ತಿಂಗಳು ಬೇಕಾಗಬಹುದು ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ (ಎನ್ಐಹೆಚ್) ಅಧಿಕಾರಿ ಆಂಥೋನಿ ಫೌಸಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಕುರಿತಂತೆ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಅಜರ್ ಪ್ರತಿಕ್ರಿಯಿಸಿ, ನಾವು ಜನವರಿ 6 ಕ್ಕೆ ಸಿಡಿಸಿ ತಂಡವನ್ನು ಚೀನಾಕ್ಕೆ ಕಳುಹಿಸಲು ಮುಂದಾಗಿದ್ದೇವೆ. ಈ ತಂಡ ಅಲ್ಲಿನ ಜನರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಶ್ರಯದಲ್ಲಿ ಸಿಡಿಸಿ ತಂಡ ಚೀನಾಕ್ಕೆ ಹೋಗಲು ಸಮರ್ಥರಾಗಿದ್ದಾರೆ ಎಂದರು.

ಕೊರೊನಾ ವೈರಸ್​ಗೆ ಈಗಾಗಲೇ 131 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.