ETV Bharat / international

ಪೊಲೀಸ್​ ದೌರ್ಜನ್ಯದಿಂದ ಮೃತಪಟ್ಟ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ - Minneapolis

ಪೊಲೀಸ್ ಅಧಿಕಾರಿ ನೀಡಿದ್ದ ಹಿಂಸೆಯಿಂದ ಮೃತಪಟ್ಟಿದ್ದ ಜಾರ್ಜ್​ ಫ್ಲಾಯ್ಡ್ ಕುಟುಂಬಕ್ಕೆ 27 ಮಿಲಿಯನ್ ಡಾಲರ್ ನೀಡಲು ಮಿನ್ನಿಯಾಪೊಲೀಸ್ ಆಡಳಿತ ಒಪ್ಪಿಕೊಂಡಿದೆ.

US city of Minneapolis agreed to pay $27 million to George Floyd's family
ಕಪ್ಪುವರ್ಣಿಯನ ಡೆತ್​ ಕೇಸ್
author img

By

Published : Mar 13, 2021, 11:30 AM IST

Updated : Mar 13, 2021, 11:43 AM IST

ಮಿನ್ನಿಯಾಪೊಲೀಸ್ (ಅಮೆರಿಕ): ಇಡೀ ಜಗತ್ತೇ ಆಕ್ರೋಶಗೊಳ್ಳುವಂತೆ ಮಾಡಿದ್ದ ಕಪ್ಪುವರ್ಣೀಯ ಜಾರ್ಜ್​ ಫ್ಲಾಯ್ಡ್ ಹಿಂಸಾತ್ಮಕ ಸಾವು ಎಂದಿಗೂ ಮರೆಯಲು ಅಸಾಧ್ಯ. ಇದೀಗ ಫ್ಲಾಯ್ಡ್ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಮಿನ್ನಿಯಾಪೊಲೀಸ್ ಆಡಳಿತ ಘೋಷಿಸಿದೆ.

2020ರ ಮೇ ತಿಂಗಳಲ್ಲಿ ಅಮೆರಿಕದ ಮಿನ್ನಿಯಾಪೊಲೀಸ್​ ನಗರದ ಅಧಿಕಾರಿ ನೀಡಿದ ಹಿಂಸೆಯಿಂದಾಗಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್​ ಫ್ಲಾಯ್ಡ್ ಮೃತಪಟ್ಟಿದ್ದನು. ಫ್ಲಾಯ್ಡ್ ಕುತ್ತಿಗೆಯ ಮೇಲೆ ಪೊಲೀಸ್ ಅಧಿಕಾರಿ ತನ್ನ ಮೊಣಕಾಲುಗಳನ್ನಿರಿಸಿ ಹಿಂಸೆ ನೀಡಿದ್ದನು. ಉಸಿರಾಡಲು ಕಷ್ಟವಾಗಿ ಫ್ಲಾಯ್ಡ್ ಪ್ರಾಣಬಿಟ್ಟಿದ್ದನು.

US city of Minneapolis agreed to pay $27 million to George Floyd's family
ಮಿನ್ನಿಯಾಪೊಲೀಸ್ ಅಧಿಕಾರಿ ನೀಡಿದ ಹಿಂಸೆಯ ಚಿತ್ರ

ಕಪ್ಪು ಅಮೆರಿಕನ್ನರ ಮೇಲಿನ ಜನಾಂಗೀಯ ದಾಳಿಗೆ ಫ್ಲಾಯ್ಡ್ ಹಿಂಸಾತ್ಮಕ ಸಾವು ಸಾಕ್ಷಿಯಾಗಿದ್ದು, ಈ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೊರೊನಾ ಭೀತಿಯ ನಡುವೆಯೂ ಅಮೆರಿಕ ಸೇರಿ ಯೂರೋಪಿನ ಹಲವು ದೇಶಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಫ್ಲಾಯ್ಡ್ ಹತ್ಯೆ ವಿರೋಧಿಸಿ ಭುಗಿಲೆದ್ದಿದ್ದ ಪ್ರತಿಭಟನೆ

ಇದೀಗ ಈ ಪ್ರಕರಣ ಬಗೆಹರಿಸಿಕೊಳ್ಳಲು ಫ್ಲಾಯ್ಡ್ ಕುಟುಂಬಕ್ಕೆ 27 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂ.) ನೀಡಲು ಮಿನ್ನಿಯಾಪೊಲೀಸ್ ಆಡಳಿತ ಒಪ್ಪಿಕೊಂಡಿದೆ.

Last Updated : Mar 13, 2021, 11:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.