ETV Bharat / international

ಚೀನಾ ಸೈಬರ್​​​​​​ ದಾಳಿಕೋರರಿಂದ Microsoft​ ಇಮೇಲ್ ಹ್ಯಾಕ್​: ಅಮೆರಿಕ ಆರೋಪ

author img

By

Published : Jul 20, 2021, 9:35 AM IST

ಚೀನಾ ಹ್ಯಾಕರ್​ಗಳನ್ನು ಬಳಸಿಕೊಂಡು ಸೈಬರ್ ದಾಳಿ ನಡೆಸುತ್ತಿದೆ. ಈ ಮೂಲಕ ಡಾರ್ಕ್​​​​ ಸೈಬರ್ ಉದ್ಯಮವನ್ನ ಚೀನಾ ಪ್ರೋತ್ಸಾಹಿಸುತ್ತಿದೆ. ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಸೈಬರ್ ದಾಳಿ ನಡೆಸಿ ಬಹುಕೋಟಿ ಬೇಡಿಕೆ ಇಡಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

us-and-allies-blame-china-for-hacking-microsoft-exchange
ಚೀನಾ ಸೈಬರ್​​​​​​ ದಾಳಿಕೋರರಿಂದ ಮೈಕ್ರೋಸಾಫ್ಟ್​ ಇಮೇಲ್ ಹ್ಯಾಕ್

ವಾಷಿಂಗ್ಟನ್​​: ಮೈಕ್ರೋಸಾಫ್ಟ್ ಎಕ್ಸ್​​ಚೇಂಜ್​​ ಇ-ಮೇಲ್ ಸರ್ವರ್ ಸಾಫ್ಟವೇರ್ ಅನ್ನು ಚೀನಾ ಸರ್ಕಾರ ಹ್ಯಾಕ್​ ಮಾಡಿದ್ದು, ಬೀಜಿಂಗ್ ಸಂಯೋಜಿತ ಸೈಬರ್ ಆಪರೇಟರ್​ಗಳು ದಾಳಿ ನಡೆಸಿದ್ದಾರೆ ಎಂದು ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಚೀನಾ ವಿರುದ್ಧ ಗಂಭೀರ ಆರೋಪ ಮಾಡಿವೆ.

ಶ್ವೇತ ಭವನ ಹೊರಡಿಸಿರುವ ಪ್ರಕಟಣೆಯಲ್ಲಿ, ಚೀನಾ ದುರುದ್ದೇಶಿತ ಸೈಬರ್ ಆ್ಯಕ್ಟಿವಿಟಿ ವಿರುದ್ಧ ಯುರೋಪಿಯನ್ ಒಕ್ಕೂಟ, ಇಂಗ್ಲೆಂಡ್ ಮತ್ತು ನ್ಯಾಟೋ ದೇಶಗಳು ಅಮೆರಿಕವನ್ನು ಸೇರಿಕೊಂಡು ಚೀನಾದ ಉದ್ದೇಶ ಬಹಿರಂಗಪಡಿಸಲು ಮುಂದಾಗಿವೆ. ಅಲ್ಲದೇ ಎರಡು ದೇಶಗಳ ನಡುವಿನ ಉದ್ವಿಗ್ನತೆಯ ನಡುವೆ ಚೀನಾ ಸೈಬರ್ ದಾಳಿಯ ಹೊಸ ಆಕ್ರಮಣಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ.

ಹ್ಯಾಕರ್​ಗಳನ್ನು ಬಳಸಿಕೊಂಡು ಚೀನಾ ಸೈಬರ್ ದಾಳಿ ನಡೆಸುತ್ತಿದೆ. ಈ ಮೂಲಕ ಡಾರ್ಕ್​​​​ ಸೈಬರ್ ಉದ್ಯಮವನ್ನ ಚೀನಾ ಪ್ರೋತ್ಸಾಹಿಸುತ್ತಿದೆ. ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಸೈಬರ್ ದಾಳಿ ನಡೆಸಿ ಬಹುಕೋಟಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಹ್ಯಾಕರ್‌ಗಳಿಂದ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಚೀನಾ ಮುಂದಾಗಿಲ್ಲ. ಆದರೆ, ಇದರಿಂದಾಗಿ ಸರ್ಕಾರ, ವ್ಯಪಾರ ವಹಿವಾಟು, ಹಣಕಾಸು ವ್ಯವಹಾರ ಸೇರಿ ಎಲ್ಲ ವಲಯದಲ್ಲೂ ಹಾನಿ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿದೆ.

ಸೈಬರ್ ದಾಳಿಗೆ ಒಳಗಾಗಿದ್ದ ಮೈಕ್ರೋಸಾಫ್ಟ್ ಮಾರ್ಚ್​ನಲ್ಲಿ ತನ್ನ ಕಾರ್ಯಾಚರಣೆ ಸುಧಾರಿಸಿತ್ತು. ಸಾಫ್ಟ್​​ವೇರ್​ನಲ್ಲಿ ಮಾಡಲಾಗುತ್ತಿದ್ದ ಇಮೇಲ್​ ಸಂವಹನವನ್ನು ಹ್ಯಾಕರ್​​​ಗಳು ಕದಿಯುತ್ತಿದ್ದಾರೆ ಎಂದು ತಿಳಿದ ಬಳಿಕ ಮೈಕ್ರೋಸಾಫ್ಟ್ ಎಕ್ಸ್​ಚೇಂಜ್​​ ಪ್ಯಾಚ್​​​ ಬಿಡುಗಡೆ ಮಾಡಿತ್ತು.

ಓದಿ: US - India ಸಂಬಂಧ ಗಟ್ಟಿಗೊಳಿಸುವಲ್ಲಿ MH-60R ಹೆಲಿಕಾಪ್ಟರ್, P-8 ಪ್ರಮುಖ ಪಾತ್ರ: ಪೆಂಟಗನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.