ETV Bharat / international

ಫೈಜರ್ -ಬಯೊಎನ್‌ಟೆಕ್ ಕೋವಿಡ್​​ ಲಸಿಕೆ ತುರ್ತು ಬಳಕೆಗೆ ಅಮೆರಿಕ ಗ್ರೀನ್ ಸಿಗ್ನಲ್ - ಫೈಜರ್ -ಬಯೊಎನ್​​ ಟೆಕ್ ಕೋವಿಡ್​​ ಲಸಿಕೆ

ಲಕ್ಷಾಂತರ ಅಮೆರಿಕನ್ನರನ್ನು ಕೊಂದ ಕೊರೊನಾ ವೈರಸ್​ ವಿರುದ್ಧ ತಯಾರಾಗಿರುವ ಕೋವಿಡ್​ ಲಸಿಕೆ ಬಳಕೆಗೆ ಯುಎಸ್ ಶುಕ್ರವಾರ ಗ್ರೀನ್​ ಸಿಗ್ನಲ್​ ನೀಡಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಲಸಿಕೆಯ ತುರ್ತು ಬಳಕೆಗೆ ಕಂಪನಿಗಳಿಗೆ ಅಧಿಕೃತ ಒಪ್ಪಿಗೆ ನೀಡಿದೆ.

US allows emergency COVID-19 vaccine in bid to end pandemic
ಕೋವಿಡ್​​ ಲಸಿಕೆ ತುರ್ತು ಬಳಕೆಗೆ ಅಮೇರಿಕಾದಿಂದ ಗ್ರೀನ್ ಸಿಗ್ನಲ್
author img

By

Published : Dec 12, 2020, 2:05 PM IST

ವಾಷಿಂಗ್​ಟನ್​: ಕೊರೊನಾ ಲಸಿಕೆಗೆ ಎದುರು ನೋಡ್ತಿದ್ದ ಅಮೆರಿಕ ಜನತೆಗೆ ಟ್ರಂಪ್​ ಸಿಹಿಸುದ್ದಿ ನೀಡಿದ್ದು, ಕೊರೊನಾ ಸೋಂಕಿಗೆ ಫೈಜರ್-ಬಯೊಎನ್​​ ಟೆಕ್ ಲಸಿಕೆಯನ್ನು ತುರ್ತು ಬಳಕೆಗಾಗಿ ಅಮೆರಿಕ ಅಂತಿಮ ಒಪ್ಪಿಗೆ ನೀಡಿದೆ.

ಜರ್ಮನಿಯ ಬಯೊಎನ್​​ ಟೆಕ್ ಸಹಭಾಗಿತ್ವದಲ್ಲಿ ಅಮೆರಿಕದ ಫಾರ್ಮಸುಟಿಕಲ್ ಕಂಪನಿ ಫೈಜರ್ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಎಲ್ಲಾ ಹಂತಗಳಲ್ಲಿ ಈ ಪ್ರಯೋಗ ಯಶಸ್ವಿಯಾದ್ದರಿಂದ ಈ ಲಸಿಕೆ ಕೊರೊನಾ ಸೋಂಕಿಗೆ ಶೇ.90ರಷ್ಟು ವಾಸಿ ಮಾಡುವ ಗುಣಹೊಂದಿದೆ ಎನ್ನಲಾಗಿತ್ತು.

ಈ ಮೊದಲು ಫೈಜರ್‌ ಕೊರೊನಾ ಲಸಿಕೆ ಪಡೆದ ನಾಲ್ಕು ಜನರಲ್ಲಿ ತಾತ್ಕಾಲಿಕ ರೀತಿಯ ಮುಖ ಪಾರ್ಶ್ವವಾಯು ಉಂಟಾಗಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಕ ಆಡಳಿತ ಮಂಡಳಿ ತನ್ನ ವರದಿಯಲ್ಲಿ ತಿಳಿಸಿತ್ತು. ಆದರೆ, ಇದೀಗ ಲಸಿಕೆ ಬಳಕೆಗೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಜರ್ಮನ್ ಪಾಲುದಾರ ಕಂಪನಿ ಬಯೋಎನ್ ಟೆಕ್ ಸಹಭಾಗಿತ್ವದಲ್ಲಿ ಫೈಜರ್ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಅಂತಿಮ ಪ್ರಯೋಗದಲ್ಲಿ ರೋಗವನ್ನು ತಡೆಗಟ್ಟುವಲ್ಲಿ ಶೇ.95 ಪರಿಣಾಮಕಾರಿ ಎಂದು ಸಾಬೀತಾಗಿದೆ. ಈಗಾಗಲೇ ಬ್ರಿಟನ್ ಮತ್ತು ಕೆನಡಾದಿಂದ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ ತೋರಲಾಗಿದೆ.ಇದೀಗ ಅಮೆರಿಕಾ ಕೂಡ ಆ ಸಾಲಿಗೆ ಸೇರಲಿದೆ.

ಮೊಡೆರ್ನಾ ಇಂಕ್ ತಯಾರಿಸಿದ ಎರಡನೇ ಲಸಿಕೆಯನ್ನು ಯುಎಸ್ ಪರಿಗಣಿಸುತ್ತಿದೆ, ಅದು ಇನ್ನೊಂದು ವಾರದಲ್ಲಿ ಹೊರಬರಬಹುದು ಎಂದು ನಿರೀಕ್ಷಿಸುತ್ತಿದೆ. ಮೊಡೆರ್ನಾದ ಲಸಿಕೆಯ ತುರ್ತು ಬಳಕೆಯನ್ನು ಸಹ ಅಧಿಕೃತಗೊಳಿಸಿದರೆ, ಯುಎಸ್ ಡಿಸೆಂಬರ್ ಅಂತ್ಯದ ವೇಳೆಗೆ 20 ಮಿಲಿಯನ್ ಜನರಿಗೆ ಲಸಿಕೆ ನೀಡಲು ಹಾಗೂ ಜನವರಿಯಲ್ಲಿ ಇನ್ನೂ 30 ಮಿಲಿಯನ್ ಮತ್ತು ಫೆಬ್ರವರಿಯಲ್ಲಿ 50 ಮಿಲಿಯನ್ ಜನರಿಗೆ ಕೋವಿಡ್​ ಲಸಿಕೆ ನೀಡಬಹುದಾಗಿದೆ.

ಎರಡನೇ ಡೋಸ್ ನಂತರ ಭುಜ ನೋವು ಮತ್ತು ಜ್ವರ, ಆಯಾಸ, ತಲೆನೋವು ಮತ್ತು ಶೀತಗಳಂತಹ ಕೆಲವು ರೋಗಲಕ್ಷಣಗಳನ್ನು ಕಾಣಿಸಿಕೊಳ್ಳಬಹುದು. ಆದರೆ ಈ ಲಕ್ಷಣಗಳು ಕೇವಲ ಒಂದು ದಿನದವರೆಗೆ ಇರುತ್ತದೆ. ಕೋವಿಡ್​ ಲಸಿಕೆ ರೋಗನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಒಳ್ಳೆಯದೇ ಎಂದು ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಹೇಳಿದೆ. ಜಾಗತಿಕವಾಗಿ 1.5 ಮಿಲಿಯನ್ ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವೈರಸ್​ ನಿಯಂತ್ರಿಸಲು ಈ ಲಸಿಕೆ ಸಹಕಾರಿಯಾಗಲಿದೆ ಎಂದು ಎಫ್​ಡಿಎ ತಿಳಿಸಿದೆ.

ಈ ಲಸಿಕೆ ಪಡೆದ ಕೆಲವರು ತೀವ್ರ ಅಲರ್ಜಿ ಅನುಭವಿಸಿದ ಘಟನೆ ಬ್ರಿಟನ್‌ನಲ್ಲಿ ವರದಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದ್ದರಿಂದ ಅಂತಹ ಲಕ್ಷಣಗಳು ಕಂಡುಬಂದರೆ ಅವರು ತ್ವರಿತ ಚಿಕಿತ್ಸೆಯನ್ನು ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.