ETV Bharat / international

ಬಡ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ತ್ವರಿತಗತಿಯಲ್ಲಿ ಸಾಗಿಸಲು ಯುನಿಸೆಫ್​ ಹೊಸ ಪ್ಲಾನ್ - ಯುನಿಸೆಫ್​ ಸುದ್ದಿ,

ಬಡ ರಾಷ್ಟ್ರಗಳಿಗೆ ತ್ವರಿತಗತಿಯಲ್ಲಿ ಕೊರೊನಾ ಲಸಿಕೆ ಪೂರೈಸಲು ಯುನಿಸೆಫ್​ ಹೊಸ ಪ್ಲಾನ್ ರೂಪಿಸಿದೆ.

speedy transport of corona medicines, UNICEF asking for speedy transport of corona medicines, United Nations children, UNICEF news, ಕೊರೊನಾ ಲಸಿಕೆ ತ್ವರಿತಗತಿಯಲ್ಲಿ ಸಾಗಾಟ, ಕೊರೊನಾ ಲಸಿಕೆ ತ್ವರಿತಗತಿಯಲ್ಲಿ ಸಾಗಿಸಲು ಯುನಿಸೆಫ್​ ಪ್ಲಾನ್​, ಯುನಿಸೆಫ್​ ಸುದ್ದಿ, ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ,
ಬಡ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ತ್ವರಿತಗತಿಯಲ್ಲಿ ಸಾಗಿಸಲು ಯುನಿಸೆಫ್​ ಹೊಸ ಪ್ಲಾನ್
author img

By

Published : Feb 17, 2021, 10:07 AM IST

ನ್ಯೂಯಾರ್ಕ್​: ಜಾಗತಿಕ ಸಾಂಕ್ರಾಮಿಕ ರೋಗ ಕೊರೊನಾ ತಡೆಯಲು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಉಪಕ್ರಮವೊಂದನ್ನು ಪ್ರಾರಂಭಿಸುತ್ತಿದೆ.

ಕೋವಿಡ್​ ಲಸಿಕೆಗಳು, ಔಷಧಿ ಮತ್ತು ಇತರ ಸರಬರಾಜುಗಳನ್ನು 145ಕ್ಕೂ ಹೆಚ್ಚು ದೇಶಗಳಿಗೆ ತಲುಪಿಸುವುದಕ್ಕಾಗಿ ವಿಮಾನಯಾನ ಸಂಸ್ಥೆಗಳ ಸೌಲಭ್ಯ ಪಡೆಯಲು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಕೊರೊನಾ ವೈರಸ್ ಸಂಬಂಧಿತ ವಸ್ತುಗಳ ವಿತರಣೆಗೆ ಬೆಂಬಲಿಸಲು 10ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಯುನಿಸೆಫ್ ಮಂಗಳವಾರ ತಿಳಿಸಿದೆ.

ಮಾನವೀಯ ವಾಯು ಸರಕು ಉಪಕ್ರಮವು 100 ಕ್ಕೂ ಹೆಚ್ಚು ದೇಶಗಳ ಮಾರ್ಗಗಳನ್ನು ಒಳಗೊಂಡ ವಿಮಾನಯಾನ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ. ಯು.ಎನ್‌ನ ಕೋವಾಕ್ಸ್ ಕಾರ್ಯಕ್ರಮ ವಿಶ್ವದ ನೂರಾರು ಮಿಲಿಯನ್ ಬಡ ಜನರಿಗೆ ಕೊರೊನಾ ವೈರಸ್ ಲಸಿಕೆಗಳನ್ನು ಖರೀದಿಸಲು ಮತ್ತು ತಲುಪಿಸಲು ಬೆಂಬಲಿಸುತ್ತೆ ಎಂದು ವಿಶ್ವಸಂಸ್ಥೆ ಹೇಳಿದೆ

ಕೋವಾಕ್ಸ್‌ನ ಆರಂಭಿಕ ಮೊದಲ ಸುತ್ತಿನ ಹಂಚಿಕೆ ಯೋಜನೆಯ ಆಧಾರದ ಮೇಲೆ 145 ದೇಶಗಳು ತಮ್ಮ ಜನಸಂಖ್ಯೆಯ ಶೇಕಡಾ 3 ರಷ್ಟು ಭಾಗ ಕೊರೊನಾ ರೋಗನಿರೋಧಕ ಡೋಸೇಜ್‌ಗಳನ್ನು ಪಡೆಯಬೇಕೆಂದು ವಿಶ್ವಸಂಸ್ಥೆ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.