ETV Bharat / international

ಹೆಚ್-‌1ಬಿ ವೀಸಾ ಮತ್ತು ಗ್ರೀನ್‌ ಕಾರ್ಡ್‍ಗಳ ಮೇಲೆ ಅನಿಶ್ಚಯತೆ: ಯುಎಸ್‌ಐಎಸ್‌ಪಿಎಫ್‌ ಅಧ್ಯಕ್ಷ

ಇವತ್ತು ಹೆಚ್‌1ಬಿ ವೀಸಾ ಹೊಂದಿರುವವರ ಸಂಖ್ಯೆ ಹತ್ತಿರ ಹತ್ತಿರ ಎರಡೂವರೆ ಲಕ್ಷದಷ್ಟಿದೆ. ಇಷ್ಟೊಂದು ಬೃಹತ್‌ ಸಂಖ್ಯೆಯ ಜನರಿಗೆ ಉದ್ಯೋಗ ಹುಡುಕುವುದು ಸವಾಲಿನ ಸಂಗತಿ. ಎಲ್ಲಕ್ಕಿಂತ ಮುಖ್ಯವೆಂದರೆ, ಇನ್ನೂ 8 ಲಕ್ಷ ಭಾರತೀಯರು ತಮ್ಮ ಗ್ರೀನ್‌ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ. ಅಧ್ಯಕ್ಷ ಟ್ರಂಪ್‌ ಅವರ ಕಾರ್ಯನಿರ್ವಹಣಾ ಆದೇಶದಿಂದಾಗಿ ಅದರ ಕಾಲಮಿತಿಯೂ ಅರವತ್ತು ದಿನಗಳಿಗೆ ಇಳಿದಿದ್ದು, ಇದು ಕೂಡಾ ಸವಾಲಿನ ಸಂಗತಿಯಾಗಿಬಿಟ್ಟಿದೆ. ಇದರ ಪರಿಣಾಮ ಮತ್ತು ಅಲ್ಲಿ ಮಧ್ಯ ಏಷ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಭಾರತಕ್ಕೆ ಹರಿದುಬರುತ್ತಿದ್ದ ವೇತನ ಧನದ ಮೇಲೆ ಪರಿಣಾಮವಾಗುತ್ತಿದೆ ಎನ್ನುತ್ತಾರೆ ಡಾ. ಅಘಿ.

VISA
ವೀಸಾ
author img

By

Published : May 4, 2020, 3:51 PM IST

ಭಾರತದಾದ್ಯಂತ ವಿಧಿಸಲಾಗಿರುವ ದಿಗ್ಬಂಧನ ಅತ್ಯಂತ ಪರಿಣಾಮಕಾರಿಯಾಗಿದ್ದರೂ, ಜೀವನಾದಾಯವನ್ನು ಉಳಿಸಲು ಮತ್ತು ಆರ್ಥಿಕತೆಗೆ ಮರು ಚೇತರಿಕೆ ತಂದುಕೊಡಲು ಅದನ್ನು ಸಡಿಲಗೊಳಿಸುವ ಕಾಲ ಈಗ ಬಂದಿದೆ ಎನ್ನುತ್ತಾರೆ ಯುಎಸ್‌ಐಎಸ್‌ಪಿಎಫ್‌ (ಅಮೆರಿಕ-ಭಾರತ ಸ್ಟ್ರ್ಯಾಟೆಜಿಕ್‌ ಪಾರ್ಟನರ್‌ಶಿಪ್‌ ಫೋರಂ) ಅಧ್ಯಕ್ಷ ಹಾಗೂ ಸಿಇಒ ಡಾ. ಮುಕೇಶ್‌ ಅಘಿ.

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಡಾ. ಅಘಿ, ದಿಗ್ಬಂಧನ ಜಾರಿಗೊಳಿಸುವಲ್ಲಿ ಎಡವಿರುವ ಅಧ್ಯಕ್ಷ ಟ್ರಂಪ್‌ ಅವರ ನೀತಿಯನ್ನು ಟೀಕಿಸಿದರು. ಅಧ್ಯಕ್ಷರ ಈ ತಪ್ಪಿನಿಂದಾಗಿ ವಿಯೆಟ್ನಾಂ ಯುದ್ಧದಲ್ಲಿ ಸಂಭವಿಸಿದ ಪ್ರಾಣಹಾನಿಗಿಂತ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ವೈರಸ್‌ನಿಂದಾಗಿ ಅಮೆರಿಕನ್ನರು ಜೀವ ಕಳೆದುಕೊಳ್ಳುವಂತಾಯಿತು ಎಂದರು. ಜಾಗತಿಕ ಆರ್ಥಿಕತೆಗಳು ವೇಗವಾಗಿ ಕುಗ್ಗುತ್ತಿದ್ದು, ಅಮೆರಿಕನ್ನರು ಮಾಡುತ್ತಿರುವ ರೀತಿ ಭಾರತ ಕೂಡಾ ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ಅದಕ್ಕೆ ಬೇಕಾದ ಹಣಕಾಸು ನೆರವನ್ನು ಒದಗಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳಲು ಮುಂದಾಗಬೇಕು ಎಂಬ ಅಂಶಗಳಿಗೆ ಅವರು ಒತ್ತು ನೀಡಿದ್ದಾರೆ.

ಪ್ರತಿಯೊಂದು ಜೀವವೂ ಅಮೂಲ್ಯವೇ. ನಮ್ಮ ದೇಶದಲ್ಲಿರುವ 130 ಕೋಟಿ ಜನರಿಗೆ ಹೋಲಿಸಿದರೆ, ಈಗಿನ ಅಂಕಿಸಂಖ್ಯೆಗಳು ಖಂಡಿತ ಹೆಚ್ಚೇನಲ್ಲ. ಸದ್ಯಕ್ಕೆ ಮುಖ್ಯವಾಗಿರುವ ವಿಷಯವೇನೆಂದರೆ, ಇಷ್ಟೊಂದು ಪ್ರಮಾಣದ ಜನರ ಜೀವನಾದಾಯಕ್ಕೆ ವ್ಯವಸ್ಥೆ ಮಾಡುವುದು ಹೇಗೆ ಎಂಬುದರ ಕುರಿತು ಯೋಚಿಸುವುದು. ಕಳೆದೊಂದು ತ್ರೈಮಾಸಿಕ ಅವಧಿಯಲ್ಲಿ, ಅಮೆರಿಕದಾದ್ಯಂತ ಶೇಕಡಾ 4.8ರಷ್ಟು ಜನ ಸೋಂಕಿತರಾಗಿದ್ದರು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಲಕ್ಷಾಂತರ ಡಾಲರ್‌ಗಳ ಪ್ಯಾಕೇಜನ್ನು ಘೋಷಿಸಲಾಗಿತ್ತು. ಈ ನಿಟ್ಟಿನಲ್ಲಿ ಭಾರತದತ್ತ ನೋಡಿದಾಗ, ನಮ್ಮ ಅಂಕಿಸಂಖ್ಯೆಗಳು ತೀರಾ ಕೆಳ ಹಂತದಲ್ಲಿವೆ ಎಂಬುದು ಸ್ಪಷ್ಟವಾಗುತ್ತದೆ. ಆರ್ಥಿಕತೆಯನ್ನು ನಿಧಾನವಾಗಿ ಸರಿದಾರಿಗೆ ತರುವ ಪ್ರಯತ್ನಗಳು ಪ್ರಾರಂಭವಾಗಿದ್ದಾಗ್ಯೂ, ಸಾರ್ವಜನಿಕರು, ವಾಣಿಜ್ಯ ಸಮುದಾಯದಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಉತ್ತೇಜಕ ಪ್ಯಾಕೇಜ್‌ಗಳನ್ನು ಘೋಷಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಅದಕ್ಕಿಂತ ಪ್ರಮುಖವಾಗಿದ್ದೆಂದರೆ, ಎಂಎಸ್‌ಎಂಇ ಮತ್ತು ಸಣ್ಣ ಚಿಲ್ಲರೆ ಅಂಗಡಿಕಾರರ ಮೇಲೆ ಗಮನ ಹರಿಸುವುದು. ಇವೇನಾದರೂ ಮುಳುಗತೊಡಗಿದರೆ, ಮುಂದಿನ 6-12 ತಿಂಗಳುಗಳಲ್ಲಿ ಆರ್ಥಿಕತೆಯನ್ನು ಸರಿದಾರಿಗೆ ತರುವುದು ಕಷ್ಟಕರವಾಗಲಿದೆ ಎನ್ನುತ್ತಾರೆ ಡಾ. ಅಘಿ.

ಇಡೀ ದೇಶಾದ್ಯಂತ ದಿಗ್ಬಂಧನವನ್ನು ದಿಢೀರ್‌ ಎಂದು ಘೋಷಿಸುವ ಅವಶ್ಯಕತೆಯಿತ್ತೇ ಮತ್ತು ಎಷ್ಟು ದಿನ ಅದು ಮುಂದುವರಿಯಬೇಕು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಡಾ. ಅಘಿ, ಪ್ರಧಾನಮಂತ್ರಿಗಳು ದಿಕ್ಸೂಚಕನ ಕೆಲಸ ಮಾಡಿದ್ದಾರೆ. ಅಧಿಕಾರಿಶಾಹಿ ಹೆಜ್ಜೆ ಇಟ್ಟಿದೆ ಮತ್ತು ಎಲ್ಲಕ್ಕಿಂತ ಪ್ರಮುಖವಾಗಿ ಎಚ್ಚರಿಕೆ ಮೊಳಗಿದ್ದನ್ನು ನಾಗರಿಕರು ಕೇಳಿಸಿಕೊಂಡಿದ್ದಾರೆ. ಇವರೆಲ್ಲರೂ ಜೊತೆಯಾಗಿ ದಿಗ್ಬಂಧನದ ಕಡೆ ಗಮನ ಹರಿಸಿದ್ದಾರೆ. ಇದು ನಿಜಕ್ಕೂ ಪರಿಣಾಮಕಾರಿಯಾಗಿದ್ದು, ಸಕಾರಾತ್ಮಕ ಫಲಿತಾಂಶಗಳನ್ನು ತೋರತೊಡಗಿದೆ. ಆದರೆ, ಈಗ ಅದನ್ನು ಸಡಿಲಗೊಳಿಸುವ ಸಮಯ ಬರುತ್ತಿದೆ. ನಾಗರಿಕರು ಮತ್ತು ಆರ್ಥಿಕತೆಯನ್ನು ನೀವು ಸುದೀರ್ಘ ಕಾಲದವರೆಗೆ ದಿಗ್ಬಂಧನದಲ್ಲಿ ಇರಿಸುವುದು ಮತ್ತು ಅವರ ಜೀವನಾದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು ಸಾಧುವಲ್ಲ. ಏಕೆಂದರೆ, ಭಾರತದ ಆರ್ಥಿಕತೆಯ ಶೇಕಡಾ 60ರಷ್ಟು ಬಳಕೆ ನೀತಿಯನ್ನು ಆಧರಿಸಿದೆ. ಬಳಕೆ ಪ್ರಮಾಣ ತಗ್ಗಿದರೆ, ಆರ್ಥಿಕತೆಯು ಸಂಪೂರ್ಣ ನೆಲಕಚ್ಚುತ್ತದೆ. ಆದ್ದರಿಂದ, ದಿಗ್ಬಂಧನ ಕ್ರಮಗಳನ್ನು ನಿಧಾನವಾಗಿ ಸಡಿಲಗೊಳಿಸಬೇಕಾಗುತ್ತದೆ. ಹಾಗೆ ನೋಡಿದರೆ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ಅಮೆರಿಕದ ಇದುವರೆಗಿನ ಸಾಧನೆ ಕಳಪೆಯಾಗೇ ಇದೆ. ಅದನ್ನು ಇನ್ನೂ ಉತ್ತಮವಾಗಿ ಮಾಡುವುದು ಸಾಧ್ಯವಿತ್ತು. ವಿಯೆಟ್ನಾಂ ಯುದ್ಧಕ್ಕಿಂತ ಹೆಚ್ಚಿನ ಪ್ರಮಾಣದ ಸಾವುಗಳು ಅಮೆರಿಕದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸಿದೆ. ದಿಗ್ಬಂಧನಕ್ಕೆ ಸಂಬಂಧಿಸಿದಂತೆ ಅಮೆರಿಕದ ಸಾಧನೆಗೆ ಎಫ್‌ ಕಾರ್ಡ್‌ ಕೊಡಬಹುದಷ್ಟೇ. ಭಾರತ ಈ ನಿಟ್ಟಿನಲ್ಲಿ ಅತ್ಯುತ್ತಮ ಸಾಧನೆ ತೋರಿದೆ ಎಂದರು.

ಹೆಚ್ಚೆಚ್ಚು ಸರಕುಗಳು ಜೀವನಾವಶ್ಯಕ ವಸ್ತುಗಳ ವಿಭಾಗಕ್ಕೆ ಸೇರ್ಪಡೆಯಾಗುವ ಕುರಿತು ಭರವಸೆ ವ್ಯಕ್ತಪಡಿಸಿದ ಅವರು, ಇದೊಂದು ಧನಾತ್ಮಕ ಲಕ್ಷಣವಾಗಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಭಾರತ ಗಣನೀಯವಾಗಿ ಮುಕ್ತವಾಗಲಿದೆ ಎಂಬ ಆಶಾಭಾವನೆ ಪ್ರಕಟಿಸಿದರು.

ಸಾಂಕ್ರಾಮಿಕ ಹರಡಲು ಚೀನಾ ದೇಶವನ್ನು ಹೊಣೆಯಾಗಿಸುವ ಕುರಿತು ಕೇಳಲಾದ ಪ್ರಶ್ನೆಗೆ, ಜಾಗತಿಕ ಸಮುದಾಯವು ಬೀಜಿಂಗ್‌ ಅನ್ನು ಹೊಣೆಗಾರವಾಗಿಸಿದೆ ಎಂಬುದಕ್ಕೆ ಅಮೆರಿಕದ ಮಿಸ್ಸೌರಿ ರಾಜ್ಯವು ಚೀನಾದ ಕಮ್ಯುನಿಸ್ಟ್‌ ಪಕ್ಷದ ವಿರುದ್ಧ ಮೊಕದ್ದಮೆ ಹೂಡಿರುವುದೇ ಸಾಕ್ಷಿ ಎಂದು ಡಾ. ಅಘಿ ಉತ್ತರಿಸಿದ್ದಾರೆ. ಆದರೆ, ಭಾರತ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕಿದ್ದು, ಈ ಸಂಕಷ್ಟವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಹಾಗೂ ಜಾಗತಿಕ ಸರಬರಾಜು ಸರಣಿಯನ್ನು ತನ್ನದಾಗಿಸಿಕೊಳ್ಳಲು ಮುಂದಡಿ ಇಡಬೇಕು ಎಂದು ಅವರು ಹೇಳಿದರು.

ಭಾರತವು ಇನ್ನಷ್ಟು ಪಾರದರ್ಶಕವಾಗಬೇಕು ಹಾಗೂ ತನ್ನ ನೀತಿ ರೂಪಿಸುವಲ್ಲಿ ಸಂಭಾವ್ಯತೆಯನ್ನು ಹೊಂದಬೇಕು. ಮಾರುಕಟ್ಟೆಗೆ ರಹದಾರಿ ಕಲ್ಪಿಸುವುದೊಂದೇ ಅಲ್ಲ, ಅದನ್ನು ಸಮಾನ ಸ್ಪರ್ಧೆಗೆ ಮುಕ್ತವಾಗಿಸಬೇಕು. ವಾಲ್‌ಮಾರ್ಟ್‌ ಬಂದು ಫ್ಲಿಪ್‌ಕಾರ್ಟ್‌ ಖರೀದಿ ಮಾಡಿಕೊಂಡಾಗ ಏನಾಯಿತು? ಎರಡು ವಾರಗಳ ನಂತರ ಸರಕಾರ ತನ್ನ ನೀತಿಯನ್ನು ಬದಲಿಸಿಕೊಂಡಿತು. ಆಂಧ್ರಪ್ರದೇಶದಲ್ಲಿ ಏನಾಯಿತು? ಸರಕಾರ ಬದಲಾದಾಗ, ಅದು ಎಲ್ಲಾ ಗುತ್ತಿಗೆಗಳನ್ನು ತಿರುಗುಮುರುಗು ಮಾಡಿತು. ಗುತ್ತಿಗೆ ಪಾವಿತ್ರ್ಯತೆ ಇರಬೇಕಾಗುತ್ತದೆ. ಕಾರ್ಪೊರೇಟ್‌ ತೆರಿಗೆ ಇಳಿಸುವ ಮೂಲಕ ಭಾರತ ಅತ್ಯುತ್ತಮ ಕೆಲಸ ಮಾಡಿದ್ದು, ತೆರಿಗೆ ದೃಷ್ಟಿಯಿಂದ ಉತ್ಪಾದಕರು ತಮ್ಮ ದರಗಳನ್ನು ಇಳಿಸಲು ಮುಂದಾಗಿದ್ದಾರೆ. ಆದರೆ, ಇದರ ಜೊತೆಗೆ ಕಾರ್ಮಿಕ ಸುಧಾರಣೆಗಳು ಹಾಗೂ ಭೂಸುಧಾರಣೆಗಳತ್ತಲೂ ನೀವು ಗಮನ ಹರಿಸಬೇಕಾಗುತ್ತದೆ. ಭೌಗೋಳಿಕವಾಗಿ ನೀವು ವಿಯೆಟ್ನಾಂ, ಕಾಂಬೋಡಿಯಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು ಹೊರಟಿದ್ದರೆ, ಇವೆಲ್ಲವನ್ನೂ ಪುನರ್‌ಪರಿಶೀಲಿಸುವುದು ಪ್ರಮುಖವಾಗಬಹುದು. ಮುಂದಡಿ ಇಡಲಾಗುತ್ತಿದೆ ಎಂಬುದನ್ನು ಸೂಚಿಸುವುದು ಅವಶ್ಯಕ ಎಂದು ಅವರು ಹೇಳಿದರು.

ಎಲ್‌ & ಟಿ ಇನ್ಫೋಟೆಕ್‌ ಮತ್ತು ಐಬಿಎಂ ಇಂಡಿಯಾ ಸಹಿತ ಹಲವಾರು ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿರುವ ಡಾ. ಅಘಿ ಅವರು, ನಿರುದ್ಯೋಗದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಕಳೆದ ಎರಡು ವಾರಗಳಲ್ಲಿ ನಿರುದ್ಯೋಗ ಅರ್ಜಿ ಸಲ್ಲಿಸಿದವರ ಸಂಖ್ಯೆ ಅಮೆರಿಕದಲ್ಲಿ 260 ಲಕ್ಷ ಮೀರಿದೆ. ಈ ಸಂಖ್ಯೆ ನಾಟಕೀಯವಾಗಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಆರ್ಥಿಕ ನಿರುದ್ಯೋಗದ ಪ್ರಮಾಣ ಶೇಕಡಾ 10ಕ್ಕೂ ಹೆಚ್ಚಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಕೇವಲ ಮೂರು ವಾರಗಳ ಹಿಂದಷ್ಟೇ ಅಮೆರಿಕದ ನಿರುದ್ಯೋಗದ ಪ್ರಮಾಣ ಶೂನ್ಯವಾಗಿತ್ತು. ಹೀಗಾಗಿ ಈ ಬೆಳವಣಿಗೆಗಳು ದೊಡ್ಡ ಮಟ್ಟದ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದರು.

ವಾಣಿಜ್ಯೋದ್ಯಮಿಗಳು ಮತ್ತು ಗ್ರಾಹಕರ ವಿಶ್ವಾಸ ಚದುರಿಹೋಗಿದೆ. ಅಂಗಡಿಗಳು ಮುಚ್ಚಿರುವುದರಿಂದ ಸರಕನ್ನು ಸಾಗಿಸಲಾಗದೇ ವಾಣಿಜ್ಯ ಚಟುವಟಿಕೆಗಳು ಬಂಧಿಯಾಗಿವೆ. ಇವೆಲ್ಲವನ್ನೂ ಪುನಃಸ್ಥಾಪಿಸಬೇಕೆಂದರೆ ಪ್ರಚಂಡ ಪ್ರಯತ್ನ ಬೇಕಾಗುತ್ತದೆ. 2011ರಲ್ಲಿ ಈ ಪುನರ್‌ಸ್ಥಾಪನೆಯನ್ನು ನೀವು ನೋಡಲಾರಿರಿ. ಇದು 2022ಕ್ಕೆ ಅಥವಾ ಅದಕ್ಕೂ ನಂತರದ ಅವಧಿಗೆ ಮುಂದಕ್ಕೆ ಹೋಗಬಹುದು. ಶೇ. 4.5 ಆರ್ಥಿಕ ಪ್ರಗತಿ ಸಾಧಿಸುವ ಅಂಗವಾಗಿ ವಾಣಿಜ್ಯ ಚಟುವಟಿಕೆಗಳನ್ನು ಸುಗಮವಾಗಿಸಲಿಕ್ಕೆ ಭಾರತ ಒದ್ದಾಡುತ್ತಿರುವುದನ್ನು ನೋಡಿದಾಗ, ದಿಗ್ಬಂಧನದ ನಾಟಕೀಯ ಪರಿಣಾಮಗಳು ನಿಮಗೆ ಮನದಟ್ಟಾಗುತ್ತವೆ. ಸರ್ಕಾರದಿಂದ ಬೃಹತ್‌ ಉತ್ತೇಜಕ ಪ್ಯಾಕೇಜ್‌ನ ಅವಶ್ಯಕತೆಯಿದ್ದು, ದೇಶದೊಳಗೆ ವಿದೇಶಿ ನೇರ ಹೂಡಿಕೆಯನ್ನು ಸಾಧ್ಯವಾಗಿಸುವುದು ಅದಕ್ಕಿಂತ ಹೆಚ್ಚು ಮುಖ್ಯವಾಗುತ್ತದೆ. ಹೂಡಿಕೆ ಮಾಡುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದು ಅತ್ಯಂತ ಮಹತ್ವದ್ದಾಗಿದೆ. ಮುಂದಿನ ಹತ್ತು ವರ್ಷಗಳವರೆಗೆ, ಪ್ರತಿ ವರ್ಷ ಕನಿಷ್ಠ 11,000 ಕೋಟಿ ಅಮೆರಿಕನ್‌ ಡಾಲರ್‌ಗಳ ಹೂಡಿಕೆಯನ್ನು ಮಾಡಿದರೆ ಮಾತ್ರ ಆರ್ಥಿಕತೆ ಮುಂದಡಿ ಇಡಲು ಸಾಧ್ಯ, ಎನ್ನುತ್ತಾರೆ ಅವರು.

ಎಚ್‌1ಬಿ ವೀಸಾ ಹೊಂದಿದವರ ಮೇಲೆ ಆರ್ಥಿಕ ಕುಸಿತದ ಪರಿಣಾಮಗಳು ಏನಾಗಬಹುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಡಾ. ಅಘಿ, ಈ ವಿಷಯ ನಿಜಕ್ಕೂ ನಿರ್ಣಾಯಕವೇ. ಆದರೆ, ಗ್ರೀನ್‌ ಕಾರ್ಡ್‌ ಪಡೆದುಕೊಳ್ಳಲು ಕಾಯುತ್ತಿರುವವರು ಎದುರಿಸುತ್ತಿರುವ ಸವಾಲೂ ಕಡಿಮೆ ಏನಲ್ಲ ಎನ್ನುತ್ತಾರೆ. ಎಚ್‌1ಬಿ ವಿಷಯ ನಿರ್ಣಾಯಕವಾಗಿದೆ. ಒಂದು ವೇಳೆ ಅವರು ಕೆಲಸ ಕಳೆದುಕೊಂಡರೆ, ಮುಂದಿನ 60 ದಿನದೊಳಗೆ ಹೊಸ ಕೆಲಸವನ್ನು ಹುಡುಕಿಕೊಳ್ಳಬೇಕು. ಇಲ್ಲದಿದ್ದರೆ ಅವರು ದೇಶ ಬಿಟ್ಟು ಹೋಗಬೇಕಾಗುತ್ತದೆ. ಇವತ್ತು ಹೆಚ್‌1ಬಿ ವೀಸಾ ಹೊಂದಿರುವವರ ಸಂಖ್ಯೆ ಹತ್ತಿರ ಹತ್ತಿರ ಎರಡೂವರೆ ಲಕ್ಷದಷ್ಟಿದೆ. ಇಷ್ಟೊಂದು ಬೃಹತ್‌ ಸಂಖ್ಯೆಯ ಜನರಿಗೆ ಉದ್ಯೋಗ ಹುಡುಕುವುದು ಸವಾಲಿನ ಸಂಗತಿ. ಎಲ್ಲಕ್ಕಿಂತ ಮುಖ್ಯವೆಂದರೆ, ಇನ್ನೂ 8 ಲಕ್ಷ ಭಾರತೀಯರು ತಮ್ಮ ಗ್ರೀನ್‌ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ. ಅಧ್ಯಕ್ಷ ಟ್ರಂಪ್‌ ಅವರ ಕಾರ್ಯನಿರ್ವಹಣಾ ಆದೇಶದಿಂದಾಗಿ ಅದರ ಕಾಲಮಿತಿಯೂ ಅರವತ್ತು ದಿನಗಳಿಗೆ ಇಳಿದಿದ್ದು, ಇದು ಕೂಡಾ ಸವಾಲಿನ ಸಂಗತಿಯಾಗಿಬಿಟ್ಟಿದೆ. ಇದರ ಪರಿಣಾಮ ಮತ್ತು ಅಲ್ಲಿ ಮಧ್ಯ ಏಷ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಭಾರತಕ್ಕೆ ಹರಿದುಬರುತ್ತಿದ್ದ ವೇತನ ಧನದ ಮೇಲೆ ಪರಿಣಾಮವಾಗುತ್ತಿದೆ ಎನ್ನುತ್ತಾರೆ ಡಾ. ಅಘಿ.

ಇತ್ತೀಚಿನ ದಿನಗಳಲ್ಲಿ ತೈಲ ದರದಲ್ಲಿ ಉಂಟಾಗುತ್ತಿರುವ ಭಾರೀ ಇಳಿಕೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಪಾಲಿಗೆ ಪರೋಕ್ಷ ವರದಾನವಾಗಿದೆ ಎನ್ನುತ್ತಾರೆ ಯುಎಸ್‌ಐಎಸ್‌ಪಿಎಫ್‌ ಅಧ್ಯಕ್ಷರು.

ಕಡಿಮೆ ತೈಲ ಬೆಲೆಗಳು ಭಾರತಕ್ಕೆ ವರದಾನವಾಗಿವೆ. ಪ್ರತಿಯೊಂದು ಬ್ಯಾರಲ್‌ ಬೆಲೆ ಒಂದು ಡಾಲರ್‌ ಏರಿದಷ್ಟೂ ಅದು ಭಾರತದ ವಿದೇಶಿ ವಿನಿಮಯದ ಮೇಲೆ ಲಕ್ಷಾಂತರ ಡಾಲರ್‌ಗಳ ವ್ಯತ್ಯಾಸ ಉಂಟು ಮಾಡುತ್ತದೆ. ಅತಿ ಹೆಚ್ಚು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಈಗ ಇಳಿಯುತ್ತಿರುವ ತೈಲ ಬೆಲೆಗಳು ಅದರ ಆರ್ಥಿಕತೆಗೆ ಮರು ಚೇತರಿಕೆ ತಂದುಕೊಡುವಲ್ಲಿ ವರದಾನವಾಗಲಿವೆ ಎಂಬು ಆಶಿಸಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.