ವಾಷಿಂಗ್ಟನ್ (ಅಮೆರಿಕ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿದ ನಂತರ, ಅಮೆರಿಕ ಅಧ್ಯಕ್ಷರ ಅಧಿಕೃತ ಟ್ವಟರ್ ಖಾತೆಯಿಂದ (POTUS) ಮಾಡಿದ ಟ್ವೀಟ್‌ಗಳನ್ನು ಸಹ ಡಿಲೀಟ್ ಮಾಡಲಾಗಿದೆ.
"@RealDonaldTrump ಖಾತೆಯಿಂದ ಇತ್ತೀಚಿನ ಟ್ವೀಟ್‌ಗಳನ್ನು ಮತ್ತು ಅವುಗಳ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ನಿರ್ದಿಷ್ಟವಾಗಿ ಅವುಗಳನ್ನು ಟ್ವಿಟರ್‌ನಲ್ಲಿ ಮತ್ತು ಹೊರಗೆ ಹೇಗೆ ಸ್ವೀಕರಿಸಲಾಗುತ್ತಿದೆ ಮತ್ತು ವ್ಯಾಖ್ಯಾನಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿದ್ದೇವೆ. ಹೀಗಾಗಿ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯದಿಂದಾಗಿ ನಾವು ಈ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ್ದೇವೆ" ಎಂದು ಟ್ವಿಟರ್ ತಿಳಿಸಿದೆ.
-
#UPDATE | After the suspension of his personal Twitter account, US President Donald Trump tweeted from his official @POTUS account but the tweets were taken down within minutes. https://t.co/eg5ovKvkxb pic.twitter.com/vaL4wKTkpT
— ANI (@ANI) January 9, 2021 " class="align-text-top noRightClick twitterSection" data="
">#UPDATE | After the suspension of his personal Twitter account, US President Donald Trump tweeted from his official @POTUS account but the tweets were taken down within minutes. https://t.co/eg5ovKvkxb pic.twitter.com/vaL4wKTkpT
— ANI (@ANI) January 9, 2021#UPDATE | After the suspension of his personal Twitter account, US President Donald Trump tweeted from his official @POTUS account but the tweets were taken down within minutes. https://t.co/eg5ovKvkxb pic.twitter.com/vaL4wKTkpT
— ANI (@ANI) January 9, 2021
ಅಲ್ಲದೆ ಅಧ್ಯಕ್ಷರ ಅಧಿಕೃತ ಟ್ವಿಟರ್ ಖಾತೆಯನ್ನು (POTUS) ಸಕ್ರಿಯವಾಗಿರಿಸಲಾಗುವುದು, ಆದರೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಟ್ವಿಟರ್ ಹೇಳಿತ್ತು. ಆದರೆ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಟ್ರಂಪ್ ಅವರ ಟ್ವೀಟ್‌ಗಳನ್ನು ಸಹ ಆ ಖಾತೆಯಿಂದ ತೆಗೆದುಹಾಕಲಾಗಿದೆ
ಅಧ್ಯಕ್ಷರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, "ವಾಕ್ ಸ್ವಾತಂತ್ರವನ್ನು ನಿಷೇಧಿಸುವ ಮೂಲಕ ಮತ್ತಷ್ಟು ಮುಂದೆ ಹೋಗಿದ್ದಾರೆ" ಎಂದು ಆರೋಪಿಸಿದ್ದರು. ಅಲ್ಲದೆ ಟ್ವಿಟರ್ ನೌಕರರು ತಮ್ಮ ಖಾತೆಯನ್ನು ತೆಗೆದುಹಾಕುವಲ್ಲಿ ಡೆಮೋಕ್ರಾಟ್ಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
-
#UPDATE | Twitter suspends account of Team Trump. https://t.co/TBStRenwRe pic.twitter.com/gG9VLX8Udv
— ANI (@ANI) January 9, 2021 " class="align-text-top noRightClick twitterSection" data="
">#UPDATE | Twitter suspends account of Team Trump. https://t.co/TBStRenwRe pic.twitter.com/gG9VLX8Udv
— ANI (@ANI) January 9, 2021#UPDATE | Twitter suspends account of Team Trump. https://t.co/TBStRenwRe pic.twitter.com/gG9VLX8Udv
— ANI (@ANI) January 9, 2021
ಟ್ವಿಟರ್ನ ನಡೆಯಿಂದ ಬೇಸರ ವ್ಯಕ್ತಪಡಿಸಿ "ನಾವು ಮೌನವಾಗಿರಲ್ಲ, ಟ್ವಿಟರ್‌ನಲ್ಲಿ ಟ್ವಿಟರ್‌ನಲ್ಲಿ ವಾಕ್ ಸ್ವಾತಂತ್ರಕ್ಕೆ ಅವಕಾಶ ಇಲ್ಲ" ಎಂದು ಟೀಂ ಟ್ರಂಪ್ ಖಾತೆಯ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಇದಾದ ಕೆಲ ಸಮಯದಲ್ಲೇ ಟೀಂ ಟ್ರಂಪ್ ಖಾತೆಯನ್ನೂ ಶಾಶ್ವತವಾಗಿ ಅಮಾನತು ಮಾಡಲಾಗಿದೆ.