ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುಎಸ್ ರಾಜಕೀಯ ವ್ಯಕ್ತಿಗಳು (ಅಭ್ಯರ್ಥಿಗಳು ಮತ್ತು ಪ್ರಚಾರ ಖಾತೆಗಳನ್ನು ಒಳಗೊಂಡಂತೆ) ಹಾಗೂ 100,000ಕ್ಕಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಯುಎಸ್ ಮೂಲದ ಖಾತೆಗಳಿಗೆ ಹೊಸ ನಿಯಮ ವಿಧಿಸುವುದಾಗಿ ಟ್ವಿಟರ್ ಹೇಳಿದೆ.
ಇಂತಹ ಖಾತೆಗಳಿಂದ ತಪ್ಪು ಮಾಹಿತಿ ನೀಡುವ ಟ್ವೀಟ್ಗಳಿಗೆ ಹೆಚ್ಚುವರಿ ಎಚ್ಚರಿಕೆಗಳು ಮತ್ತು ನಿರ್ಬಂಧಗಳನ್ನು ಹಾಕುವುದಾಗಿ ಟ್ವಿಟರ್ ತಿಳಿಸಿದೆ.
ಈ ಟ್ವೀಟ್‌ಗಳನ್ನು ನೋಡಲು ಜನರು ಮೊದಲು ವಾರ್ನಿಂಗ್ ಮೇಲೆ ಟ್ಯಾಪ್ ಮಾಡಬೇಕು. ಅದಾದ ಬಳಿಕ ಮಾತ್ರ ಟ್ವೀಟ್‌ಗಳನ್ನು ನೋಡಬಹುದು, ಲೈಕ್, ರಿಟ್ವೀಟ್ ಮತ್ತು ಕಮೆಂಟ್ ಮಾಡಲು ಸಾಧ್ಯವಾಗುತ್ತದೆ ಎಂದು ಟ್ವಿಟರ್ ಹೇಳಿದೆ. ಈ ಟ್ವೀಟ್‌ಗಳು ಟ್ವಿಟ್ಟರ್ನಿಂದ ರೆಕಮೆಂಡ್ ಕೂಡ ಆಗುವುದಿಲ್ಲ.
ಯಾವುದೇ ಅಭ್ಯರ್ಥಿಗೆ ಗೆಲುವು ಎಂದು ತಪ್ಪಾಗಿ ಹೇಳಿಕೊಳ್ಳುವ ಟ್ವೀಟ್‌ಗಳನ್ನು ಕಂಪನಿಯು ಲೇಬಲ್ ಮಾಡುತ್ತದೆ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಟ್ವೀಟ್‌ಗಳನ್ನು ತೆಗೆದುಹಾಕುತ್ತದೆ ಎಂದು ಟ್ವಿಟರ್‌ನ ಕಾನೂನು, ನೀತಿ, ಟ್ರಸ್ಟ್ ಮತ್ತು ಸೇಫ್ಟಿ ಲೀಡ್ ವಿಜಯ ಗಡ್ಡೆ ಹೇಳಿದ್ದಾರೆ.